ಭಟ್ಕಳ: ಪೊಲೀಸ್ ಇಲಾಖೆಯಲ್ಲಿನ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಗಳಿಂದ ನೀಡಲ್ಪಡುವ ‘ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರಕ್ಕೆ ಕಳೆದ ಒಂದು ವರ್ಷದಿಂದ ಇಲ್ಲಿನ ಡಿ.ವೈ.ಎಸ್.ಪಿ ಯಾಗಿ ಕರ್ತವ್ಯ ನಿರ್ವಸುತ್ತಿರುವ ವೆಲೆಂಟೈನ್ ಡಿ’ಸೋಜಾ ಆಯ್ಕೆಯಾಗಿದ್ದಾರೆ.

ಈ ಕುರಿತು ರಾಜ್ಯ ಎಡಿಜಿಪಿ ಡಾ.ಎಸ್.ಪರಶಿವಮೂರ್ತಿ ವಿವರವನ್ನು ಪ್ರಕಟಿಸಿದ್ದು ಜು. 5 ರಂದು ಬೆಂಗಳೂರಿನ ರಾಜಭವನದಲ್ಲಿ  ರಾಜ್ಯಪಾಲರು ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ.

1994 ರಲ್ಲಿ  ಪಿ.ಎಸ್.ಐ ಆಗಿ ಪೊಲೀಸ್ ಇಲಾಖೆಗೆ ಪಾದಾರ್ಪಣೆ ಮಾಡಿದ ಡಿ’ಸೋಜಾ ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರೋಬೆಷನರಿ ಅವಧಿಯನ್ನು ಮುಗಿಸಿ, 2001 ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಠಾಣೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿ ಅವರು ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವುದರ ಮೂಲಕ ಇಲಾಖೆಯ ಪ್ರಶಂಸೆಗೆ ಒಳಗಾಗಿದ್ದರು. ಹೊನ್ನಾವರ ಠಾಣೆಯಲ್ಲಿ ಬ್ರಿಟಿಷರ ಕಾಲದ ಶೌಚಗೃಹಕ್ಕೆ ಕಾಯಕಲ್ಪ ಒದಗಿಸಿ ಅಲ್ಲಿನ ಮೂಲಭೂತ ಅವಶ್ಯಕತೆಯನ್ನು ಪೂರ್ತಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಉಡುಪಿ, ದ.ಕ. ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಯಶಸ್ವಿ ಸೇವೆಯನ್ನು ಮಾಡಿದ್ದು ಕಾರ್ಕಳ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ನಕ್ಸಲ್ ವಿರುದ್ಧ ಕೋಂಬಿಂಗ್ ನಡೆಸಿ ನಕ್ಸಲ್ ಚುಟುವಟಿಕೆಗೆ ಕಡಿವಾಣ ಹಾಕುವಲ್ಲಿಯೂ ಯಶಸ್ಸನ್ನು ಕಂಡಿದ್ದಾರೆ.

RELATED ARTICLES  ಪರ ವಿರೋಧದ ನಡುವೆ ಪುರಸಭೆಯ ಅಂಗಡಿ ಮಳಿಗೆ ಹರಾಜು ಮುಂದೂಡಿಕೆ.

ಮಾರ್ಚ್ 12, 2018 ರಿಂದ ಭಟ್ಕಳದಲ್ಲಿ ಡಿ.ವೈ.ಎಸ್.ಪಿ ಯಾಗಿ ಬಂದು ಇಲ್ಲಿ ಅನೇಕ ಸುಧಾರಣೆ ಕ್ರಮಗಳನ್ನು ಜರಗಿಸಿದ್ದಾರೆ. ಭಟ್ಕಳದಲ್ಲಿ ಟ್ರಾಫಿಕ್ ಸಮಸ್ಯೆ ಅತಿಯಾಗಿ ಕಾಡುತ್ತಿದ್ದು ಅದನ್ನು ಏಕಮುಖ ಸಂಚಾರದ ಮೂಲಕ ನಿಯಂತ್ರಣಕ್ಕೆ ತಂದು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಭಟ್ಕಳದ ಬಹುತೇಕ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದ್ದಾರೆ. ಸಮಾಜಿಕ ಕೆಡುಕುಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು ತಮ್ಮ ಪ್ರತಿಯೊಂದು ಕಾರ್ಯಕ್ರಮದಲ್ಲಿ ಮಾದಕ ವ್ಯಸನಗಳಿಂದ ದೂರ ಇರುವಂತೆ ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತು ಹೇಳುತ್ತಾರೆ.

ಪ್ರಶಸ್ತಿಗಳ ಮಹಾಪೂರ: ಇವರ ಸೇವಾ ಅವಧಿಯಲ್ಲಿ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದ್ದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ಇವರು ಪಡೆದುಕೊಂಡಿದ್ದಾ ರಾಷ್ಟ್ರೀಯ ದೇಹಾದಾಢ್ಯ ಪಟುವಾಗಿರುವ ಇವರು ದೇಶ ವಿದೇಶಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ದೇಶದ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ. ಶ್ರೀಪುಲಕೇಶಿ ಅವಾರ್ಡ, ಓಪನ್ ಸ್ಟೇಟ್ ಗೋಲ್ಡ್ ಮೆಡಲ್, ಶ್ರೀ ಶಿವಪ್ಪ ನಾಯ್ಕ ಅವಾರ್ಡ್, ಭರತ್ ಕಿಶೋರ್ ಅವಾರ್ಡ, ಜೂನಿಯರ್ ಮಿ.ಇಂಡಿಯಾ ಅವಾರ್ಡ್, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮೀ.ಏಶಿಯಾ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್ ಅವಾರ್ಡ್, ಮಲೆನಾಡ ರತ್ನ ಮತ್ತಿತರ ಪ್ರಶಸ್ತಿಗಳು ಇವರ ಮುಡಿಗೇರಿವೆ.

RELATED ARTICLES  ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಸ್ವರ್ಣವಲ್ಲೀ ಶ್ರೀ

2017 ರಲ್ಲಿ ಅಮೇರೇಕಾದ ಲಾಸ್ ವೇಗಾಸ್ ನಲ್ಲಿ ನಡೆದ ದೇಹದಾಢ್ರ್ಯ ಸ್ಪರ್ಧೆ ನ್ಯಾಶನಲ್ ಓಲಂಪಿಯಾ ಬಾಡಿ ಬಿಲ್ಡಿಂಗ್ ಎಂಡ್ ಫಿಟ್ನೆಸ್ ಚಾಂಪಿಯನ್ ಶಿಪ್ 2017 ರಲ್ಲಿ ಸ್ಪರ್ಧಿಸಿ ಅಚಿತಿಮಾ ಸುತ್ತಿಗೆ ಅಯ್ಕೆಯಾಗುವುದರ ಮೂಲಕ ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೃಪೆ : ಫೇಸ್‍ಬುಕ್