ಮೇಷ:- ಸಜ್ಜನರಾದ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಕೋಚ ಬಿಟ್ಟು ಮಾತನಾಡಿ. ಅವರು ನಿಮ್ಮನ್ನು ಸದಾಕಾಲ ಬೆಂಬಲಿಸುವರು. ಸಾಧ್ಯವಾದಲ್ಲಿ ಮಾತಾ ದುರ್ಗಾದೇವಿ ಮಂದಿರಕ್ಕೆ ಹೋಗಿ ಅರ್ಚನೆ ಸಲ್ಲಿಸಿ.


ವೃಷಭ:- ಗುರು ರಾಘವೇಂದ್ರರನ್ನು ಭಕ್ತಿಯಿಂದ ನಮಿಸಿ ಪ್ರಾರ್ಥಿಸಿ. ನಿಮ್ಮ ಅಂತರಂಗದ ಬಯಕೆಗಳನ್ನು ಪೂರೈಸಿ ನಿಮ್ಮನ್ನು ರಕ್ಷಿಸಲಿದ್ದಾರೆ. ವಾಹನ ಖರೀದಿ, ಸ್ಥಿರಾಸ್ತಿ ಖರೀದಿ ಬಗ್ಗೆ ಸದ್ಯಕ್ಕೆ ವಿಚಾರ ಬೇಡ.


ಮಿಥುನ:- ಯಾರನ್ನೇ ಆಗಲಿ ಅವಲಂಬಿಸುವ ವಿಚಾರವನ್ನು ದೂರ ಇಡಿ. ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿಲ್ಲದಿದ್ದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೇಗೆ ಸಾಧ್ಯ? ನಿಮ್ಮ ಮೇಲೆ ಗುರುಹಿರಿಯರ ಆಶೀರ್ವಾದ ಇದೆ.

ಕಟಕ:- ಪದೇಪದೆ ನಿಮ್ಮ ವಿರುದ್ಧದ ಮಾತುಗಳು ಕೇಳಿಸಬಹುದು. ಕೇಳಿ ನಕ್ಕುಬಿಡಿ. ಏಕೆಂದರೆ ಇತರರು ಮಾಡುವ ಆರೋಪದಲ್ಲಿ ಹುರುಳಿಲ್ಲ ಎನ್ನುವ ಸತ್ಯ ನಿಮಗೆ ಗೊತ್ತಿರುವಂತೆ ಎದುರಾಳಿಗಳಿಗೂ ಗೊತ್ತಿರುತ್ತದೆ. ಆದರೆ ನಿಮ್ಮ ಮೇಲೆ ಗೂಬೆ ಕೂರಿಸಬೇಕೆಂಬ ಕಾರಣದಿಂದ ಅಪವಾದ ಹೊರಸುವರು.

RELATED ARTICLES  ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ : ಈ ಬಗ್ಗೆ ಕುಟುಂಬದವರ ಮಾತೇನು?

ಸಿಂಹ:- ಶ್ರೀಹರಿಯ ಕರುಣೆ ಅಪಾರವಾದುದು. ನಿಮ್ಮ ಮನದ ಮೂಲೆಯಲ್ಲಿದ್ದ ಆತಂಕವನ್ನು ದೂರಮಾಡಿ ಮನದಲ್ಲಿ ಮತ್ತು ಮನೆಯಲ್ಲಿ ಸಂತಸದ ವಾತಾವರಣ ಮೂಡಿಸಿರುವನು. ಆತನ ಕಾರುಣ್ಯವನ್ನು ಮೌನದಿಂದ ಕೊಂಡಾಡಿ ಅಂತರಂಗವನ್ನು ಹಗುರ ಮಾಡಿಕೊಳ್ಳಿ.

ಕನ್ಯಾ:- ಸರ್ರನೆ ನಡೆಯುತ್ತಿರುವ ವಹಿವಾಟಿನಲ್ಲಿ ಅಧಿಕ ಬದಲಾವಣೆಗೆ ದಾರಿ ಇದೆ. ಭಗವಂತನು ಕಣ್ಣು ತೆರೆದರೆ ನಿಮ್ಮ ಬಾಳಿನಲ್ಲಿ ಹರ್ಷದ ಹೊನಲೇ ಹರಿಯುವುದು. ಆತನ ಅನುಗ್ರಹದಿಂದ ನಿತ್ಯ ಪ್ರಾರ್ಥಿಸುವುದನ್ನು ಮರೆಯದಿರಿ.

ತುಲಾ:- ಮನೆ ಪರಿಸರದಲ್ಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳಬಲ್ಲಿರಿ. ಇದರಿಂದ ನಿಮ್ಮ ವೈಯಕ್ತಿಕ ಸಮಸ್ಯೆಗಳು ದೂರವಾಗುವವು. ಕೆಲವೊಂದು ವಿಚಾರಗಳಲ್ಲಿ ಸಂಗಾತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅನಿವಾರ್ಯ.

ವೃಶ್ಚಿಕ:- ಅಧಿಕ ಖರ್ಚು ವೆಚ್ಚ ಎಂದು ಸಿಡಿಮಿಡಿ ಮಾಡಬೇಡಿ. ಏಕೆಂದರೆ ಮುಷ್ಠಿ ಕಾಳುಗಳನ್ನು ಚೆಲ್ಲಿದಾಗ ಮಾತ್ರವೇ ಮೂಟೆ ಕಾಳುಗಳನ್ನು ಪಡೆಯಲು ಸಾಧ್ಯ. ಮಾಡಿದ ಖರ್ಚನ್ನು ಠೇವಣಿ ಎಂದು ಭಾವಿಸಿಕೊಂಡಲ್ಲಿ ತೊಂದರೆ ಆಗಲಾರದು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 12-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಧನುಸ್ಸು:- ಕೋಪ ಅನರ್ಥಕ್ಕೆ ಕಾರಣ ಎಂದು ಗೊತ್ತಿದ್ದರೂ ಕೆಲವೊಮ್ಮೆ ಕೋಪ ದಿಢೀರನೆ ಬಂದು ಅಂದುಕೊಂಡ ಕಾರ್ಯಗಳನ್ನು ಅಸ್ತವ್ಯಸ್ತ ಮಾಡುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ನಿಮ್ಮ ಕೋಪ ತಾಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಮಕರ:- ದೈವಕೃಪೆಯಿಂದ ಜಗದ ಜನರು ನಿಮ್ಮನ್ನು ಆದರಿಸುವರು. ಹೊಗಳಿ ಕೊಂಡಾಡುವರು. ನಿಮ್ಮಲ್ಲಿನ ನಾಯಕತ್ವದ ಗುಣ ಹೊರಜಗತ್ತಿಗೆ ಪ್ರಕಟವಾಗುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ:- ನಿಮ್ಮ ಅನೇಕ ರೀತಿಯ ತಾಂತ್ರಿಕ ಪರಿಜ್ಞಾನದ ಒಟ್ಟು ಲಾಭಕ್ಕೆ ಸಿದ್ದಿ ಪಡೆಯುವ ಸಂಭವ ಇದೆ. ಇದರಿಂದ ನಿಮ್ಮ ಬಾಳಿನಲ್ಲಿ ಹೊಸ ಬೆಳಕು ಮೂಡುವುದು. ವಿವಾಹದ ಮಾತುಕತೆ ಫಲಿಸುವುದು.

ಮೀನ:- ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ. ಕಾರ್ಮಿಕ ವರ್ಗದವರಿಗೆ ಅಲ್ಪ ಶ್ರಮಕ್ಕೆ ವಿಶೇಷ ಪ್ರತಿಫಲ ದೊರೆಯುವುದು. ಪಿತೃವರ್ಗದವರಿಂದ ಹೆಚ್ಚಿನ ಅನುಕೂಲವಿದೆ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ.