ಕುಮಟಾ: ದಿನಾಂಕ 24-06-2019 ರಂದು ಪ್ರೌಢಶಾಲಾ ಸಂಸ್ಕøತ ಶಿಕ್ಷಕರ ಸಾಮಥ್ರ್ಯಾಭಿವೃದ್ಧಿ “ಗುರುಪ್ರೇರಣಾ” ತರಬೇತಿ ಕಾರ್ಯಕ್ರಮವು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಕುಮಟಾದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ.ಜಿ.ಮುಲ್ಲಾರವರು ಉದ್ಘಾಟಿಸಿ ಕಲಿಕೆಯಲ್ಲಿ ಸಂಸ್ಕøತ ಸಾಹಿತ್ಯಾಭಿರುಚಿಗೆ ಪೂರಕವಾದ ಸಾಹಿತ್ಯಿಕ ಪರಂಪರೆಯನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಗುರುಪ್ರೇರಣಾ ತರಬೇತಿಗೆ ಪೂರಕವಾದ ಸಂವಾದ ಕಾರ್ಯಕ್ರಮವನ್ನು ಶ್ರೀ ಮಂಜುನಾಥ ಗಾಂವಕರ್ ಸಂಸ್ಕøತ ಶಿಕ್ಷಕರು ಸ.ಹಿ.ಪ್ರಾ ಶಾಲೆ ಬರ್ಗಿ ಇವರ ನೆರವಿನೊಂದಿಗೆ ಶಿಕ್ಷಣಾಧಿಕಾರಿಗಳು ಮನೋಜ್ಞವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಉಮೇಶ ಭಟ್‍ರವರು “ಬೋದನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಂದರ್ಭಕ್ಕನುಸಾರವಾಗಿ ಬಳಸಿಕೆ ೂಂಡು ಬೋಧನಾ ಜ್ಞಾನವನ್ನು ವಿಕಾಸಗೊಳಿಸುವಂತೆ ಪ್ರೇರೇಪಿಸದರು”. ಶ್ರೀ ರೋಹಿದಾಸ ಎಸ್ ಗಾಂವಕರ್ ಮುಖ್ಯಾಧ್ಯಾಪಕರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಸರ್ವರನ್ನು ಸ್ವಾಗತಿಸಿ “ಉತ್ತಮ ಸಂಸ್ಕøತಿಯುಳ್ಳ ನಮ್ಮ ಭಾರತ ದೇಶದಲ್ಲಿ ಇಂದು ಸುಸಂಸ್ಕøತಿಯ ಅವಶ್ಯಕತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು”.
ನಂತರ ‘ಗುರುಪ್ರೇರಣಾ’ ವೇದಿಕೆಯಲ್ಲಿ ಶ್ರೀಮತಿ ಗೀತಾ ಈಶ್ವರ ಭಟ್ಟ ಹಾಗೂ ಶ್ರೀ ಭಾಸ್ಕರ್ ಭಟ್ಟರವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು. ಜಾನಕಿ ಗೊಂಡರವರು ಸರ್ವರನ್ನು ವಂದಿಸಿದರು. ನಂತರ ಶಿಕ್ಷಕರ ವೃತ್ತಿಪರತೆ ಮತ್ತು ಬೋದನಾ ಸಾಮಥ್ರ್ಯವನ್ನು ವೃದ್ಧಿಸಲು ಸಂಪನ್ಮೂಲ ಶಿಕ್ಷಕರಿಂದ ತರಬೇತಿಯ ಉದ್ದೇಶ ಮತ್ತು ಗುರಿಗಳ ಸಫಲತೆಗಾಗಿ ಹಿಮ್ಮಾಹಿತಿ ನೀಡಲಾಯಿತು.
ವರದಿ: ಎನ್ ರಾಮು ಹಿರೇಗುತ್ತಿ