ಶಿರಸಿ : ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಜುಲೈ 25 2019ರ ವರೆಗೆ ನಡೆಯಲಿರುವ “ಹಸಿರು ಮಾಸ” ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶಿರಸಿಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸತೀಶ ಹೆಗಡೆಯವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಶೀಗೇಹಳ್ಳಿ, ಆಡಳಿತ ಮಂಡಳಿಯ ಸದಸ್ಯರುಗಳು, ಸಿಬ್ಬಂದಿಗಳು ಹಾಗೂ ಸಂಘದ ಸದಸ್ಯರುಗಳು ಹಾಜರಿದ್ದರು.

RELATED ARTICLES  ಕುಮಟಾ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಯುವ ಸೇವಾವಾಹಿನಿಯವರು ನಡೆಸಿದ ಜ್ಞಾನ ಸತ್ರ ಕಾರ್ಯಾಗಾರ ಸುಸಂಪನ್ನ

ಹಸಿರು ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯುವ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಅಡಿಕೆ, ಹೈಬ್ರಿಡ್ ತೆಂಗು, ಏಲಕ್ಕಿ, ವೆನಿಲ್ಲಾ, ವಿವಿಧ ತಳಿಯ ಮಾವಿನ ಸಸಿಗಳು, ಬಗೆ ಬಗೆಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಔಷಧಿ ಸಸ್ಯಗಳು, ಸಾಂಬಾರ ಬೆಳೆಯ ಸಸ್ಯಗಳು, ಹಾಗೂ ಅನೇಕ ಅಲಂಕಾರಿಕ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಮತ್ತು ಸಂಘದಲ್ಲಿ ಸಂಪೂರ್ಣ ವ್ಯವಹಾರ ಹೊಂದಿದ ಪ್ರತಿಯೊಬ್ಬ ಸದಸ್ಯರಿಗೆ 50 ಕಾಳುಮೆಣಸಿನ ಸಸಿಗಳನ್ನು ರೂ.5 ರಂತೆ ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯಬೇಕೆಂದು ಸಂಘದ ಅಧ್ಯಕ್ಷರು ತಿಳಿಸಿದರು.                                      
                              
                                  

RELATED ARTICLES  ಪ್ರತ್ಯೇಕ ಶಿರಸಿ ಜಿಲ್ಲಾ ರಚನೆಗೆ ಆಗ್ರಹ : ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಛೇರಿ ಮುಂದೆ ಪ್ರತಿಭಟನೆ