ಕುಮಟಾ: ಮಾನವನಿಗೆ ಅವನ ಪ್ರತಿಯೊಂದು ಅಂಗವೂ ಬಹುಮುಖ್ಯ. ಅದರಲ್ಲಿಯೂ ಅತಿ ಸೂಕ್ಷ್ಮ ಅಂಗವಾಗಿರುವ ಕಣ್ಣು , ದೃಷ್ಠಿದೋಷ ಹೊಂದಿ ಹೊರಜಗತ್ತೇ ಕಾಣದಿರುವಾಗಿನ ಕ್ಷಣವನ್ನು ಊಹಿಸುವುದೂ ಕಷ್ಟಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಲ್ಲಿಯೂ ಕೂಡ ದೃಷ್ಠಿದೋಷ ಸಮಸ್ಯೆಗಳು ಹೆಚ್ಚುತ್ತಿವೆ. ಎಷ್ಟೋ ವಿದ್ಯಾರ್ಥಿಗಳಿಗೆ ತಮಗೆ ದೃಷ್ಠಿದೋಷವಿದೆ ಎಂಬ ಸಂಗತಿಯೇ ತಿಳಿದಿರುವುದಿಲ್ಲ. ಇದು ಪಾಲಕರ ಗಮನಕ್ಕೂ ಬಂದಿರುವುದಿಲ್ಲಾ. ಶಾಲಾ ಕಲಿಕೆಯ ಈ ಹಂತದಲ್ಲಿಯೇ ಮುಂಜಾಗೃತೆ ವಹಿಸಿ ತಪಾಸಣೆಗೆ ಒಳಪಟ್ಟು , ದೋಷವಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡುವುದು ಮುಂದಿನ ತೀವ್ರತರವಾದ ಸಮಸ್ಯೆಗೆ ಪರಿಹಾರವಾಗಬಹುದು. ಈ ಉದ್ದೇಶದಿಂದಲೇ ನಮ್ಮ ಕುಮಟಾದ ಲಾಯನ್ಸ್ ಹ್ಯುಮನಿಟೇರಿಯನ್ ಸರ್ವಿಸ ಟ್ರಸ್ಟ್‍ನ ಲ. ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯು ಕಾರ್ಯಯೋಜನೆ ಕೈಕೊಂಡು ಸುತ್ತಮುತ್ತಲಿನ ಗ್ರಾಮೀಣ ಶಾಲೆಗಳಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ಕಣ್ಣು ತಪಾಸಣಾ ಶಿಬಿರಗಳನ್ನು ಆಯೋಜಿಸಿ ಕಾರ್ಯೋನ್ಮುಖವಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅಭಿಪ್ರಾಯಿಸಿದರು.

RELATED ARTICLES  ಹೈನುಗಾರಿಕೆಯು ಪ್ರಮುಖ ಉತ್ಪಾದನಾ ವೃತ್ತಿ : ಟಿ ಎಸ್‍ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ

ಅವರು ಕುಮಟಾ ತಾಲೂಕು ಊರಕೇರಿಯಲ್ಲಿನ ಶ್ರೀ ರಾಮನಾಥ ಪ್ರೌಢಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾಮಕ್ಕಳಿಗಾಗಿ ನಡೆದ ಉಚಿತ ಕಣ್ಣು ತಪಾಸಣಾ ಶಿಬಿರದ ಸಭೆಯಲ್ಲಿ ಮಾತನಾಡಿದರು.

ದೃಷ್ಠಿ ಪರೀಕ್ಷಕ ದಿನೇಶ ಕೊರಗಾಂವಕರ್ ಮತ್ತು ಉಷಾ ನಾಯರ್ ರವರು ಇಂದು ನಡೆದ ಎರಡೂ ಶಿಬಿರಗಳಲ್ಲಿ ಅಂತೂ 190 ವಿದ್ಯಾರ್ಥಿಗಳ ಕಣ್ಣು ತಪಾಸಣಾ ಕಾರ್ಯ ನಡೆಸಿಕೊಟ್ಟರು. ಆಸ್ಪತ್ರೆಯ ಸಿಬ್ಬಂದಿಗಳಾದ ಕರುಣಾಕರ ಭಂಡಾರಿ , ದತ್ತಾತ್ರೇಯ ನಾಯ್ಕ ಅವರೊಂದಿಗೆ ಶಾಲಾ ಶಿಕ್ಷರದಾದ ಜಂಗ ಗೌಡ , ರಾಘವೇಂದ್ರ ಡಿ.ನಾಯ್ಕ , ರಾಘವೇಂದ್ರ ಎಮ್.ನಾಯ್ಕ , ಸುಜಾತಾ ನಾಯ್ಕ , ಮಹಂತೇಶ ತಳವಾರ, ಶೈಲಜಾ ಆಚಾರಿ , ಗಣಪತಿ ಪಟಗಾರ , ಜಟ್ಟಿ ಮುಕ್ರಿ ಮುಂತಾದವರು ಸಹಕರಿಸಿದರು.

RELATED ARTICLES  ಕಲ್ಲು ತುಂಬಿದ ಲಾರಿ ಪಲ್ಟಿ..!

ಪೌಢಶಾಲಾ ಶಿಕ್ಷಕ ಕೃಷ್ಣಾ ಮೊಗೆರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಭಾಗ್ಯಲತಾ ಹೆಗಡೆ ವಂದಿಸಿದರು.