ಕುಂದಾಪುರ : ಶ್ರೀ ರಾಮರಕ್ಷಾ ಸ್ತೋತ್ರ ಶಿಬಿರದ ಸಮಾರೋಪದ ಪ್ರಯುಕ್ತ ದೈವಜ್ಞ ದರ್ಶನ ಕಾರ್ಯಕ್ರಮದ ಅಂಗವಾಗಿ ದೈವಜ್ಞ ಬ್ರಾಹ್ಮಣರ ಸಂಘ ಕುಂದಾಪುರದ ಆಶ್ರಯದಲ್ಲಿ  ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗಾಯತ್ರಿ ಜಪ ಯಜ್ಞ ಮಹಾಯಾಗ ಮತ್ತು ದೈವಜ್ಞ ದರ್ಶನ ಕಾರ್ಯಕ್ರಮ ಕುಂದಾಪುರದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ನೆರವೇರಿತು.

RELATED ARTICLES  ಡಿ.15ಕ್ಕೆ ಧಾರಾ ರಾಮಾಯಣ ಮಹಾಮಂಗಲ: ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ

ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಕುಂದಾಪುರ ಇದರ ಮೊಕ್ತೇಸರರಾದ ಶ್ರೀ ರಮೇಶ್ ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು ಹಾಗೂ ದೈವಜ್ಞ ದರ್ಶನದ ರುವಾರಿ ಶ್ರೀ ನಾಗರಾಜ ಶೇಟ್ ಮತ್ತು ಪ್ರಭಾಕರ ಶೇಟ್ ಹಾಗೂ ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಗೀತಾ ವೆಂಕಟೇಶ ಶೇಟ್ ಉಪಸ್ಥಿತರಿದ್ದರು.   ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಜಿಯವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.

RELATED ARTICLES  ರಾಷ್ಟ್ರಮಟ್ಟದ ಪ್ರತಿಭೆ ಬಾಡದ ಪ್ರಥಮ್

ನಾಗರಾಜ್ ಶೇಟ್ ಅವರು ಸ್ವಾಗತ ಕೋರಿದರು, ತದನಂತರ ವೈಶಾಲಿ ಮತ್ತು ಬಳಗದವರಿಂದ ಪ್ರಾರ್ಥನೆ ನಡೆಯಿತು, ಬಳಿಕ ದೈವಜ್ಞ ಸಮಾಜದ ವತಿಯಿಂದ ಶ್ರೀ ಗಳ ಪಾದುಕ ಪೂಜೆ ನಡೆಯಿತು ದೈವಜ್ಞ ಯುವಕ ಮಂಡಳದ ಸರ್ವ ಸದಸ್ಯರು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಪ್ರಶಾಂತ್ ದೈವಜ್ಞ ಧನ್ಯವಾದ ಸಮರ್ಪಿಸಿದರು ಹಾಗೂ ಶ್ರೀ ಭಾಸ್ಕರ ಶೇಟ್ ಅವರು ಕಾರ್ಯಕ್ರಮ ನಿರೂಪಿಸಿದರು.