ವೈಟಿಪಿಎಸ್ ಸಿಬ್ಬಂದಿಯ ಅಹವಾಲು ಸ್ವೀಕಾರದ ವೇಳೆ ಬಸ್ ಅನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವೋಟ್ ಮೋದಿಗೆ ಹಾಕ್ತೀರಾ? ಕೆಲಸ ಮಾಡಲಿಕ್ಕೆ ನಾನ್ ಬೇಕಾ? ಎಂಬ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರೇಗುಡ್ಡಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ವೈಟಿಪಿಎಸ್ ಸಿಬ್ಬಂದಿಗಳು ಸಿಎಂ ಬಸ್ ಅನ್ನು ತಡೆದು ಮನವಿ ಸಲ್ಲಿಸಿದ್ದರು. ಬಳಿಕ ತಡೆಮಧ್ಯೆ ಪ್ರತಿಭಟನೆ ಕುಳಿತಾಗ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದರು.

RELATED ARTICLES  ಏಪ್ರಿಲ್ 4 ರಂದು ಹಲವುಕಡೆ ಬ್ಯಾಂಕ್ ಗೆ ರಜೆ.

ಇದೆಲ್ಲಾ ಸರ್ವಾಧಿಕಾರಿ ಆಡಳಿತ ನಡೆಸುವಂತಿದೆ. ಇದನ್ನೆಲ್ಲಾ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅನುಭವಿಸಬೇಕಾಗುತ್ತದೆ. ಸಿಎಂ ಕುಮಾರಸ್ವಾಮಿ ಸಂಯಮ ಕಳೆದುಕೊಳ್ಳುತ್ತಿದ್ದಾರೆ. ಪ್ರತಿಭಟನೆ ಮಾಡುವವರನ್ನು ತಡೆಯುವುದು ಒಳ್ಳೆಯದಲ್ಲ. ನಿಮ್ಮ ಯೋಗ್ಯತೆ ಏನೆಂದು ರಾಜ್ಯದ ಜನ ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ.

RELATED ARTICLES  ಶಿವಮೊಗ್ಗ : ಮೀಟರ್ ಬಡ್ಡಿ ದಂಧೆಗೆ ವ್ಯಕ್ತಿ ಬಲಿ

ಸಿಎಂ ಹೇಳಿಕೆ ಅತಿರೇಕದ ಪರವಾವಧಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಗೊತ್ತಿಲ್ಲ. ಇಂತಹ ದುರಹಂಕಾರದ ಪ್ರವೃತ್ತಿಯನ್ನು ಸಿಎಂ ನಿಲ್ಲಿಸಬೇಕು. ಈ ಪ್ರವೃತ್ತಿಯನ್ನು ಖಂಡಿಸುತ್ತೇನೆ ಎಂದರು.

ನಿಖಿಲ್ ಸೋತರೆಂದು ಜನರ ಮೇಲೆ ಸೇಡು ತೀರಿಸಿಕೊಳ್ಳೀರಾ. ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಿ. ಸಂವಿಧಾನಕ್ಕೆ ಸಿಎಂ ಕುಮಾರಸ್ವಾಮಿ ಅಪಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.