ಕುಮಟಾ: ವಿಜ್ಞಾನ ಶಿಕ್ಷಕರಲ್ಲಿ ಅಡಕವಾಗಿರುವ ಕೌತುಕತೆ, ವೃತ್ತಿಪರತೆ ಮತ್ತು ಬೋಧನಾ ಸಾಮಥ್ರ್ಯಗಳು ವಿದ್ಯಾರ್ಥಿಗಳನ್ನು ಚುಂಬಕದಂತೆ ಸೆಳೆಯುತ್ತವೆ. ಗುರುವಾದವಗೆ ಸ್ವಯಂ ಪ್ರೇರಣೆ ಹೊಂದಬಲ್ಲ ಹಂಬಲ ಇದ್ದಾಗ ಮಾತ್ರ ತೀವ್ರ ಕಲಿಕಾಸಕ್ತಿ ಮೂಡಿಸಲು ಸಾಧ್ಯ. ಮತ್ತೆ ಮತ್ತೆ ನವ ಚೈತನ್ಯ ತುಂಬಲು ಪುನಶ್ಚೇತನಗೊಳಿಸಲು ಗುರು ಪ್ರೇರಣಾ ಕಾರ್ಯಾಗಾರ ಸಹಕಾರಿಯಾಗಬಲ್ಲದು ಎಂದು ತಾಲೂಕಾ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎನ್.ಎಸ್.ಪ್ರಭು ಪ್ರಯೋಗಾಲಯದಲ್ಲಿ ಮೆಗ್ನೇಶಿಯಂ ತಂತಿಯನ್ನು ಗಾಳಿಯಲ್ಲಿ ಉರಿಸಿ ಅದು ಪ್ರಕಾಶಮಾನವಾಗಿ ಪ್ರಜ್ವಲಿಸಿ ಅದರ ಆಕ್ಸೈಡ್ ಆಗಿ ಬದಲಾಗುವ ವೈಜ್ಞಾನಿಕ ಪ್ರಯೋಗ ಪ್ರದರ್ಶಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

RELATED ARTICLES  ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಸಂಪನ್ನವಾಯ್ತು ಪತ್ರಿಕಾ ದಿನಾಚರಣೆ.


ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಾರ್ಯಾಲಯ ಧಾರವಾಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಮತ್ತು ತಾಲೂಕಾ ವಿಜ್ಞಾನ ಶಿಕ್ಷಕರ ಸಂಘದ ಸಹಯೋಗದಲಿ ಗುರುಪ್ರೇರಣಾ ಶಿಬಿರ ಆಯೋಜಿಸಲಾಗಿತ್ತು. ರಕ್ಷಿತಾ, ಶ್ರೀರಶ್ಮೀ, ಸಂಗಡಿಗರು ಪ್ರಾರ್ಥಿಸಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಪಿ.ಎನ್.ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಎಸ್.ಎಸ್.ಪೈ ತರಬೇತಿಯ ಉದ್ದೀಶ್ಯಗಳನ್ನು ತಿಳಿಸಿದರು. ವಿಜ್ಞಾನ ಶಿಕ್ಷಕ ಕಿರಣ ಪ್ರಭು ನಿರೂಪಿಸಿದರು. ವಿಜ್ಞಾನ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಉಮಾ ಹೆಗಡೆ ವಂದಿಸಿದರು. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸರಕಾರಿ ಪ್ರೌಢಶಾಲೆ ಸಂತೆಗುಳಿ ಶಿಕ್ಷಕ ಉದಯ ನಾಯ್ಕ, ಸ.ಪ್ರೌ.ನೆಲ್ಲೀಕೇರಿ ಶಿಕ್ಷಕ ಬೀರದಾಸ ಗುನಗಾ, ಮಹತ್ಮಾ ಗಾಂಧಿ ಪ್ರೌಢಶಾಲೆಯ ಎಸ್.ಎಸ್.ಪೈ, ಕಿರಣ ಪ್ರಭು, ಜನತಾ ವಿದ್ಯಾಲಯ ಮಿರ್ಜಾನ ಶಿಕ್ಷಕಿ ಉಮಾ ಹೆಗಡೆ, ಪ್ರಗತಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ವಿವೇಕ ಆಚಾರಿ ಕಾರ್ಯನಿರ್ವಹಿಸುತ್ತಿದ್ದು ಶಿಬಿರವು ಮೂರುದಿನಗಳ ವರೆಗೆ ನಡೆಯಲಿದೆ.

RELATED ARTICLES  ನೀರಿಲ್ಲದೇ ಸೊರಗಿದ ಮಾಗೋಡು ಜಲಪಾತ! ಇಳಿಮುಖವಾಯ್ತು ಪ್ರವಾಸಿಗರ ಸಂಖ್ಯೆ!