ಮುರ್ಡೇಶ್ವರ : ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಮುರ್ಡೇಶ್ವರದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನೋರ್ವನನ್ನ ಕಡಲತೀರದ ಲೈಪ್ ಗಾರ್ಡ್ ಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಮುರ್ಡೇಶ್ವರ ಕಡಲತೀರದಲ್ಲಿ ಮೋಜು‌ಮಸ್ತಿಯಲ್ಲಿ ತೊಡಗಿದ ಮೈಸೂರಿನ ಅನೀಲ್ ಕುಮಾರ ಎಸ್ ಸಮುದ್ರದ ರಭಸದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಇದನ್ನ ನೋಡಿದ ಕರ್ತವ್ಯ ನಿರತ ಲೈಪ್ ಗಾರ್ಡ್ ಗಳು ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದವನನ್ನ ರಕ್ಷಣೆ ಮಾಡಿದ್ದಾರೆ.

RELATED ARTICLES  ಮಗಳನ್ನೇ ಕೊಂದ ತಂದೆ..? ಉತ್ತರ ಕನ್ನಡಿಗರೇ ಬೆಚ್ಚಿ ಬೀಳುವ ಸುದ್ದಿ..!

ಅನೀಲ್ ಕುಮಾರ ತನ್ನ ಸ್ನೇಹಿತರ ಜೊತೆಯಾಗಿ ಮೂರ್ಡೇಶ್ವರ ಪ್ರವಾಸಕ್ಕೆ ಆಗಮಿಸಿದ್ರು ಸಮುದ್ರದ ನೀರಿಗೆ ಇಳಿದಂತ ಸಂದರ್ಭದಲ್ಲಿ ಈ‌ ಘಟನೆ ನಡೆದಿದೆ ಎನ್ನಲಾಗಿದೆ.

RELATED ARTICLES  ಪ್ರತಿಭಾವಂತ ವಿದ್ಯಾರ್ಥಿಯನ್ನು ಸನ್ಮಾನಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಕಡತೊಕಾ

ತೀರಾ ಅಸ್ವಸ್ಥನಾದ ಪ್ರವಾಸಿಗನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

Source: Face Book