ಕಾರವಾರ – ಉತ್ತರಕನ್ನಡ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ವರ್ಷದಂತೆ ನೀಡುವ ಟ್ಯಾಗೋರ್ ಪ್ರಶಸ್ತಿ ಘೋಷಣೆಯಾಗಿದೆ. 2019ರ ಪ್ರಶಸ್ತಿಯನ್ನ ಕನ್ನಡಪ್ರಭದ ಹಿರಿಯ ವರದಿಗಾರ ನಾರಾಯಣ ಹೆಗಡೆ ಅವರನ್ನ ಆಯ್ಕೆ ಮಾಡಲಾಗಿದೆ. ಇನ್ನು ಹಿರಿಯ ವರದಿಗಾರರಾದ ಪಿ ಕೆ ಚಾಪಗಾಂವಕರ ಹಾಗೂ ಹಿರಿಯ ಕ್ಯಾಮರಾಮನ್ ದಿನೇಶ್ ಹಿತ್ತಲದವರ್ ಅವರನ್ನ ಆಯ್ಕೆ ಮಾಡಲಾಗಿದೆ.


ಜಿಲ್ಲಾ ಪತ್ರಿಕಾ ಭವನದಲ್ಲಿ ಹಿರಿಯ ಪತ್ರಕರ್ತ ವಸಂತಕುಮಾರ ಕತಗಾಲ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರನ್ನ ಘೋಷಿಸಲಾಗಿದೆ. ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಂದೀಪ ಸಾಗರ, ಕಾರ್ಯದಶರ್ಿ ಶೇಷಗಿರಿ ಮುಂಡಳ್ಳಿ, ಖಜಾಂಚಿ ಸುಭಾಷ್ ಧೂಪದಹೊಂಡ ಅವರು ಸಭೆಯಲ್ಲಿದ್ದರು.
ನಾರಾಯಣ ಹೆಗಡೆ ಅವರು 2004ರಲ್ಲಿ ಕನ್ನಡಪ್ರಭ ಪತ್ರಿಕೆಯ ಬಿಡಿ ವರದಿಗಾರರಾಗಿ ವೃತ್ತಿ ಆರಂಭಿಸಿದರು. ಎರಡು ವರ್ಷ ಸಂಯುಕ್ತ ಕನರ್ಾಟಕದಲ್ಲಿ ಸೇವೆ ಸಲ್ಲಿಸಿದ್ದರು. 2008ರಿಂದ ಕನ್ನಡಪ್ರಭ ಪತ್ರಿಕೆಯ ಸಹಾಯಕ ವರದಿಗಾರರಾಗಿ ಕೆಲಸ ಮಾಡುತ್ತಾ 2010ರಲ್ಲಿ ಯಾದಗಿರಿ ಜಿಲ್ಲಾ ವರದಿಗಾರರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ 2013ರಿಂದ ಈವರೆಗೆ ಹಾವೇರಿಯಲ್ಲಿ ಕನ್ನಡಪ್ರಭದ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾರಾಯಣ ಹೆಗಡೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೈಗಡಿ ಮೂಲದವರಾಗಿದ್ದಾರೆ.

RELATED ARTICLES  ಗೊಂಡರ ರುಮಾಲು ಹುಡುಕಿಕೊಡಿ : ಅರವಿಂದ ಕರ್ಕಿಕೋಡಿ


ಬೆಳಗಾವಿ ಜಿಲ್ಲೆಯ ಹಲಸಿ ಮೂಲದವರಾರದ ಪಿ ಕೆ ಚಾಪಗಾಂವಕರ ಅವರು 1983ರಲ್ಲಿ ಎ ವಿ ಬಾಳಿಗಾ ಕಾಮಸರ್್ ಕಾಲೇಜಿನಲ್ಲಿ ಸೇವೆ ಆರಂಭಿಸಿದರು. 1984ರಲ್ಲಿ ಚಿತ್ತಾಕುಲದ ಶಿವಾಜಿ ಕಾಂಪೋಜಿಟ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಮುಂದುವರಿಸಿದ ಅವರು ಪ್ರಸ್ತುತ ಪ್ರಾಂಶುಪಾಲರಾಗಿ ಕೆಲಸ ಮಾಡುತಿದ್ದಾರೆ. ಉತ್ತರಕನ್ನಡ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿದ್ದಾರೆ. ತಮ್ಮ ಸೇವೆಯ ಜೊತೆಗೆ 1984ರಿಂದಲೇ ಪಾಟರ್್ ಟೈಂ ವರದಿಗಾರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆರಂಭದಲ್ಲಿ ಸಕಾಳ ಮರಾಠಿ ಪತ್ರಿಕೆ, ನಂತರ ಗೋಮಾಂತಕ ದಿನಪತ್ರಿಕೆ ಸದ್ಯ ತರುಣಭಾರತ್ ಪತ್ರಿಕೆ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಕಾರವಾರ ಪ್ರೆಸ್ ಗಿಲ್ಡ್ ಖಜಾಂಚಿಯಾಗಿಯೂ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದರು.

RELATED ARTICLES  ಶಿಕ್ಷಕಿ 'ಸಾಧನಾ ಪೈ' ಅವರಿಗೆ 'ವಿನಯ ಸ್ಮೃತಿ' ಪುರಸ್ಕಾರ: ನಾಳೆ‌ ನಡೆಯಲಿದೆ ಕಾರ್ಯಕ್ರಮ.
IMG 20190627 WA0004 1


ಹಾವೇರಿಯ ಜಿಲ್ಲೆಯ ಹಾನಗಲ್ ತಾಲೂಕಿನ ಇನಾಂಯಲ್ಲಾಪುರ ಮೂಲದ ದಿನೇಶ್ ಹಿತ್ತಲದವರ್ ಮಲ್ಲಪ್ಪ ಮತ್ತು ಗಂಗಮ್ಮ ಅವರ ಆರನೇ ಪುತ್ರ. 2000ರಲ್ಲಿ ಟೈಲರಿಂಗ್ ವೃತ್ತಿಗಾಗಿ ಶಿರಸಿಗೆ ಆಗಮಿಸಿದ ದಿನೇಶ್ ಛಾಯಾಗ್ರಹಣದ ಬಗ್ಗೆ ಆಸಕ್ತಿ ಹೊಂದಿದವರು. 2007ರಲ್ಲಿ ಟಿವಿ9 ವಾಹಿನಿಯ ಕ್ಯಾಮರಾಮನ್ ಆಗಿ ಸೇರಿಕೊಂಡು 12 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಒಮ್ಮೆ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರು ಆಗಿ ಸೇವೆ ಸಲ್ಲಿಸಿದ್ದರು.

ಶತಮಾನದ ಪತ್ರಿಕೆ ಸಂಪಾದಕರಿಗೆ ಸನ್ಮಾನ.
ಉತ್ತರಕನ್ನಡ ಜಿಲ್ಲೆಯ ಕುಮಟಾದಿಂದ ಪ್ರಕಟಗೊಳ್ಳುವ ಕಾನಡವೃತ್ತ ಪತ್ರಿಕೆ ರಾಜ್ಯದ ಏಕೈಕ ಪತ್ರಿಕೆ. 103 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಪತ್ರಿಕೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿ ನಿರಂತರವಾಗಿ ಪತ್ರಿಕೆ ಇಲ್ಲಿವರೆಗೆ ಪ್ರಕಟವಾಗುತ್ತಿದೆ. ಪತ್ರಿಕೆಯ ಸಂಪಾದಕರಾದ ಶ್ರೀಕಾಂತ ಶಾನಭಾಗ ಅವರನ್ನ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತಿದೆ.