ರಂಗಭೂಮಿಯು ಸಾಮಾಜಿಕ ಪರಿವರ್ತನೆಗೆ ಕಾರಣವಾಗುವಂತಹ ಪರಿಣಾಮಕಾರಿ ಮಾದ್ಯಮ. ಅಭಿನಯ ಕಲೆಯ ಮೂಲಕ ವ್ಯಕ್ತಿಯ ನಿಜಜೀವನಕ್ಕೆ ಬೇಕಾದ ಸಂವಹನ ಕೌಶಲ, ಸಹಾನುಭೂತಿ,ಸಹಕಾರ, ಸಹಬಾಳ್ವೆ ಮುಂತಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಪರಿಣಾಮಕಾರಿ ಎಂಬುದು ಪ್ರಯೋಗಾತ್ಮಕವಾಗಿಯೂ ಧ್ರಢಪಟ್ಟಿದೆ. ರಂಗಭೂಮಿ ಜನಜಾಗೃತಿ ಮೂಡಿಸುವಲ್ಲಿಯೂ ಗಮನಾರ್ಹ ಪಾತ್ರ ವಹಿಸಿದೆ ಎಂದು ಎಂದು ಉದ್ಯಮಿ ರಾಘವೇಂದ್ರ ನಾಯ್ಕ ನುಡಿದರು. ಅವರು ಇಲ್ಲಿನ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನಲ್ಲಿ ಸಂಗಾತಿ ರಂಗಭೂಮಿ ಅಂಕೋಲ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ನ್ಯೂ ಇಂಗ್ಲೀಷ್ ಪ.ಪೂ. ಕಾಲೇಜು,ಪ್ರಾರ್ಥನಾ ಪ್ರತಿಷ್ಠಾನ, ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹಿರಿಯ ರಂಗಕರ್ಮಿಗೆ ಸಿಜಿಕೆ ಬೀದಿ ರಂಗ ದಿನದ ಅಂಗವಾಗಿ ವರ್ಷಂಪ್ರತಿ ನೀಡುವ ಜಿಲ್ಲಾ ಮಟ್ಟದ ಸಿಜಿಕೆ ರಂಗ ಪುರಸ್ಕಾರವನ್ನು ಹಿರಿಯ ರಂಗಕರ್ಮಿ ಅಶೋಕ ಮಹಾಲೆ ಅವರಿಗೆ ಪ್ರದಾನಮಾಡಲಾಯಿತು.

ಇದೇ ಸಂದರ್ಬದಲ್ಲಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಂಗಭೂಮಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡ ಕೆ.ಆರ್.ನಾಯ್ಕ, ಎಸ.ಎನ್.ದೇವಡಿಗ, ಗೋವಿಂದ ದೇವಡಿಗ, ರಾಮನಾಥ ಮಹಾಲೆ ಹಾಗೂ ನಜೀರ ಸಾಬ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ, ಪ್ರಾರ್ಥನಾ ಪ್ರತಿಷ್ಠಾನದ ಮುಖ್ಯಸ್ಥ ಗಂಗಾಧರ ನಾಯ್ಕ ಮಾತನಾಡಿ ನಾಟಕಕ್ಕೆ ಎಲ್ಲ ವರ್ಗದವರನ್ನು ಸೆಳೆಯುವ ಶಕ್ತಿ ಇದೆ. ಅಂಥಹ ರಂಗಕಲೆಯಲ್ಲಿ ತೊಡಗಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಜನಮನ ರಂಜಿಸುತ್ತಾ ಕಲಾಸೇವೆಯನ್ನು ಮಾಡುತ್ತ ಆ ಮೂಲಕ ಮನರಂಜನೆಯ ಜೊತೆಜೊತೆಗೆ ಸಾಮಾಜಿಕ ಪರಿವರ್ತನೆಗೂ ಕಾರಣರಾಗುವ ರಂಗಭೂಮಿ ಕಲಾವಿದರ ಕಾರ್ಯ ಬಹಳ ದೊಡ್ಡದು. ಈ ನೆಲೆಯಲ್ಲಿ ಸಿಜಿಕೆ ರಂಗ ಪುರಸ್ಕಾರ ಪಡೆಯುತ್ತಿರುವ ಅಶೋಕ ಮಹಾಲೆ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿರತರಾದ ಎಲ್ಲ ಕಲಾವಿದರು ನಮ್ಮ ಹೆಮ್ಮೆ ಎಂದರಲ್ಲದೇ ರಂಗಕಲೆಯಲ್ಲಿ ಆಸಕ್ತಿಯಿರುವ ವಿಧ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ರಂಗತರಬೇತಿಯನ್ನು ಎಲ್ಲರ ಸಹಕಾರ ಪಡೆದು ನೀಡುವ ಕೆಲಸವಾಗಬೇಕೆಂದು ನುಡಿದರು.

RELATED ARTICLES  ಲಿಂಗಾಯತ ಧರ್ಮ ನಿರ್ಧಾರಕ್ಕೆ ತಜ್ಞರ ಸಮಿತಿಯ ಅವಶ್ಯಕತೆಯಿಲ್ಲ

ಕಾರ್ಯಕ್ರಮದ ಅತಿಥಿಗಳಾಗಿ ಉಪಸ್ಥಿತರಿದ್ದ ನ್ಯೂ ಇಂಗ್ಲೀಷ್ ಪ.ಪೂ. ಕಾಲೇಜಿನ ಪ್ರಾಚಾರ್ಯ ವಿರೇಂದ್ರ ಶಾನಭಾಗ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿದರು. ಪ್ರಶಸ್ತಿ ಪುರಸ್ಕøತರಾದ ಅಶೋಕ ಮಹಾಲೆ ಹಾಗೂ ಸನ್ಮಾನಿತರ ಪರವಾಗಿ ಕೆ.ಆರ್.ನಾಯ್ಕ ಮಾತನಾಡಿದರು. ಕು. ಶಾಹಿಲ್ ಪ್ರಾರ್ಥಿಸಿದರೆ ಕಸಾಪ ಗೌರವ ಕಾರ್ಯದರ್ಶೀ ಎಂ.ಪಿ.ಬಂಢಾರಿ ಎಲ್ಲರನ್ನು ಸ್ವಾಗತಿದಿರು. ಸಂಗಾತಿ ರಂಗಭೂಮಿಯ ಕೆ.ರಮೇಶ್ ಪ್ರಾಸ್ಥಾವಿಕವಾಗಿ ಮಾತನಾಡಿ ಸಿಜಿಕೆ ಅವರು ರಂಗಭೂಮಿಗೆ ನೀಡಿದ ಕೊಡುಗೆಗಳ ಕುರಿತು ಮಾತನಾಡಿ ಪ್ರಶಸ್ತಿ ಪ್ರದಾನದ ಹಿನ್ನೆಲೆಯ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಕು.ಚಂದ್ರಪ್ರಭಾ ಕೊಡಿಯಾ ನಿರ್ವಹಿಸಿ ವಂದಿಸಿದರು.

RELATED ARTICLES  ಅರೆಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ...!

ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ ವಿರೂಪಾಕ್ಷ ಕಲಾ ಮಂಡಳಿಯ ಸಚಿನ್ ಮಹಾಲೆ, ರಾಜೇಶ ಮಹಾಲೆ, ಶ್ರೀನಿವಾಸ ಕಲಾ ಮಿತ್ರ ಮಂಡಳಿಯ ವೆಂಕಟೇಶ ನಾಯ್ಕ, ಜಗದಿಶ ನಾಯ್ಕ ಶ್ರೀ ಗುರು ರಂಗಭೂಮಿ ಕಲಾವಿದರ ಸಂಘದ ಸದಸ್ಯರುಗಳು ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.