ಹೊನ್ನಾವರ : ಇತ್ತೀಚಿಗೆ ಅರಣ್ಯ ಇಲಾಖೆ ಹೊನ್ನಾವರ, ಎಸ್.ಡಿ.ಎಂ.ಸಿ ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ಹೊನ್ನಾವರ ತಾಲೂಕಿನ ಸ.ಕಿ.ಪ್ರಾ. ಶಾಲೆ ಯಲಕೊಟ್ಟಿಗೆಯ ಆವರಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಾನ್ಯ ನಂದೀಶರವರು ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಮಾನವನ ಅತೀಯಾದ ಆಸೆಯಿಂದ ಪೃಕೃತಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಅಪಾರ ವನ್ಯ ಸಂಪತ್ತು ವಿನಾಶ ಹೊಂದಿದೆ. ಯಾವುದೇ ತಪ್ಪು ಮಾಡದ ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವ ಸದಾವಕಾಶ ನೀಡುವುದು ನಿಮ್ಮೆಲ್ಲರ ಆದ್ಯ ಕರ್ತವ್ಯವೆಂದು ಮಾರ್ಮಿಕವಾಗಿ ನುಡಿದರು. ಈ ಸಂಧರ್ಬದಲ್ಲಿ ಅರಣ್ಯ ಅಧಿಕಾರಿಗಳಾದ ನಂದೀಶ ಮತ್ತು ಗೇರುಸೊಪ್ಪ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಅಜಯಕುಮಾರರವರನ್ನು ಎಸ್.ಡಿ.ಎಂ.ಸಿ ಹಾಗೂ ಊರನಾಗರಿಕರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

RELATED ARTICLES  ಉತ್ತರ ಕನ್ನಡದ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ.

ಹೆರಂಗಡಿ ಉಪವಲಯದ ಅರಣ್ಯಾಧಿಕಾರಿಗಳಾದ ಶ್ರೀ ರಮಾಕಾಂತ ವಿ.ನಾಯ್ಕ ಇವರು ಶಾಲಾ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿಗಳನ್ನು ನೀಡಿ ಪ್ರೋತ್ಸಾಹಿಸಿದರು. ಅರಣ್ಯ ರಕ್ಷಕರಾದ ಶ್ರೀ ಅಮೃತ್‍ರಾಯ  ಮತ್ತು ಶ್ರೀ ಗಣಪತಿ ಹಳ್ಳೇರ ಹಾಗೂ ಸಂಗಡಿಗರು ಸಹಕರಿಸಿದರು. ಯಲಕೊಟ್ಟಿಗೆ ಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾವು, ಸಂಪಿಗೆ, ಹಲಸು, ನೇರಳೆ, ನೆಲ್ಲಿ ಹೀಗೆ ಅನೇಕ ಜಾತಿಯ ಗಿಡಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿಯನ್ನು  ವಿದ್ಯಾರ್ಥಿಗಳಿಗೆ ನೀಡಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಕೇಶವ ನಾರಾಯಣ ಗೌಡ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿಯೆ ಅತ್ಯುತ್ತಮ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರವಾಗಿದೆ ನವೋದಯ ವಿದ್ಯಾಲಯ

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಊರ ನಾಗರಿಕರು, ಹಳೆಯ ವಿದ್ಯಾರ್ಥಿಗಳು ಹಾಗೂ ವಿನೋದ ನಾಯ್ಕ ತಂಡದವರು ಹಾಜರಿದ್ದರು. ಪ್ರಭಾರೆ ಮುಖ್ಯ ಶಿಕ್ಷಕರಾದ ಶ್ರೀ ಸುಬ್ರಾಯ ಶಾನಭಾಗ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.