ಮೇಷ:- ಉತ್ತಮ ಬೌದ್ಧಿಕ ಶಕ್ತಿ ಪಡೆದ ವ್ಯಕ್ತಿತ್ವ ನಿಮ್ಮದು. ಇದೇ ಕಾರಣದಿಂದ ಸಮಾಜದ ಜನರಿಂದ ಗೌರವ ಪ್ರಶಂಸೆಗೆ ಪಾತ್ರರಾಗುವಿರಿ. ಇದರಿಂದ ನಿಮ್ಮಲ್ಲಿ ಹೆಚ್ಚು ಉತ್ಸಾಹ ಮೂಡಿ ಇನ್ನಷ್ಟು ಜನಪರ ಸಾಮಾಜಿಕ ಕಾರ್ಯಗಳನ್ನು ಮಾಡಲು ಸಂಕಲ್ಪಿಸುವಿರಿ.


ವೃಷಭ:- ಅಪರಿಚಿತರನ್ನು ಹೆಚ್ಚು ಪರಿಚಯ ಮಾಡಿಕೊಂಡು ಸಂಕಷ್ಟಕ್ಕೆ ಗುರಿ ಆಗುವಿರಿ. ಆದಷ್ಟು ಅಂತಹವರಿಂದ ದೂರ ಇರುವುದು ಒಳ್ಳೆಯದು. ಸಂಗಾತಿಯ ಸಲಹೆಯಂತೆ ನಡೆಯುವುದು ಕ್ಷೇಮ.


ಮಿಥುನ:- ‘ಅವಸರವೇ ಅಪಘಾತಕ್ಕೆ ಕಾರಣ’ ಹಾಗಾಗಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕಚೇರಿಗೆ ಹೊರಡುವಾಗ 5-10 ನಿಮಿಷ ಮುಂಚೆಯೇ ಮನೆಯಿಂದ ಹೊರಡಿ. ಅನಗತ್ಯ ಒತ್ತಡದಿಂದ ದೂರವಿರಿ. ಈ ದಿನದ ಕಾರ್ಯಗಳು ಮನಸ್ಸಿಗೆ ನೆಮ್ಮದಿ ನೀಡುವವು.

ಕಟಕ:- ಮೇಲಧಿಕಾರಿಗಳಿಂದ ಕಿರುಕುಳವಿದ್ದರೂ ತಾಳ್ಮೆ ಕಳೆದುಕೊಳ್ಳದಿರಿ. ನೀವು ಮಾಡಿರುವ ಕೆಲಸ ಸರಿಯಾಗಿಯೇ ಇದೆ. ಆದರೆ ನಿಮಗೆ ಆಗದವರೊಬ್ಬರು ನಿಮ್ಮ ಬಗ್ಗೆ ಇಲ್ಲ ಸಲ್ಲದ ವಿಚಾರವನ್ನು ನಿಮ್ಮ ಬಾಸ್‌ಗೆ ತಿಳಿಸಿ ಅವರು ನಿಮ್ಮ ಮೇಲೆ ಕೋಪಗೊಳ್ಳುವಂತೆ ಮಾಡಿರುವರು.

RELATED ARTICLES  ಈಕೆ ಹವ್ಯಕ ಹೆಣ್ಣುಮಗಳು, ಆದರೆ ಈಗ ಮುಸ್ಲಿಂ!

ಸಿಂಹ:- ಮಕ್ಕಳ ಸಮಸ್ಯೆ ಇನ್ನೂ ಸರಿಯಾಗದಿರುವುದು ನಿಮಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅನನ್ಯವಾಗಿ ಶ್ರೀ ನಾರಸಿಂಹ ದೇವರನ್ನು ನೆನೆಯಿರಿ. ಆತನ ಕರುಣೆಯಿಂದ ನಿಮ್ಮ ಸಂತತಿಗೆ ಸೂಕ್ತ ಸಂಗಾತಿ ದೊರೆಯುವುದು. ಮಡದಿಯ ಮಾತನ್ನು ತಿರಸ್ಕರಿಸುವುದು ಒಳ್ಳೆಯದಲ್ಲ.

ಕನ್ಯಾ:- ವಿಪರೀತ ದಣಿದು ಕೆಲಸಕ್ಕೆ ಮುಂದಾಗದಿರಿ. ಕೆಲಸದ ಒತ್ತಡದ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ದೇಹಕ್ಕೆ ಮತ್ತು ಮನಸ್ಸಿಗೆ ಇದರಿಂದ ಆರಾಮ ಎನಿಸುವುದು. ನಿಮ್ಮ ಕೈಲಿ ಆಗುವಷ್ಟು ಮಾತ್ರ ಕೆಲಸ ಒಪ್ಪಿಕೊಳ್ಳಿ.

ತುಲಾ:- ಚಿಕ್ಕದಾದ ಮನೆಯನ್ನು ಚೊಕ್ಕವಾಗಿ, ಶುಭ್ರವಾಗಿಟ್ಟುಕೊಳ್ಳುವುದೇ ದೇವರ ಒಲುಮೆಗೆ ಸೋಪಾನ. ಸ್ವಚ್ಛತೆಯಿದ್ದಲ್ಲಿ ಭಗವಂತನು ಇರುತ್ತಾನೆ. ಹಾಗಾಗಿ ಮನೆಯ ಮತ್ತು ಮನಸ್ಸಿನ ಸ್ವಚ್ಛತೆಗಾಗಿ ಸ್ವಲ್ಪ ಸಮಯ ಮೀಸಲಿಡಿ.

ವೃಶ್ಚಿಕ:- ನೀವು ಮಾಡುವ ಕಾರ್ಯವನ್ನು ಜನರು ಬಹಿರಂಗವಾಗಿ ಹೊಗಳದಿದ್ದರೂ ನಿಮ್ಮ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿರುವರು. ಹಾಗಾಗಿ ನೀವು ತೀರಿಸಬೇಕಾಗಿರುವ ಸಾಲದ ಬಗ್ಗೆ ಒತ್ತಡ ಹೇರುತ್ತಿಲ್ಲ. ನ್ಯಾಯಯುತವಾಗಿ ದುಡಿದು ಹಣ ಮರು ಪಾವತಿಸುವಿರಿ.

RELATED ARTICLES  ನೆಚ್ಚಿನ ನಟನೊಂದಿಗೆ ಮಾತನಾಡಿ ಕೊನೇ ಆಸೆ ತೀರಿಸಿಕೊಂಡ! ಹೀಗೂ ಇರ್ತಾರೆ ನೋಡಿ ಅಭಿಮಾನಿಗಳು

ಧನುಸ್ಸು:- ವಿವಾಹ ಅಪೇಕ್ಷೆಯುಳ್ಳವರಿಗೆ ಸ್ವಲ್ಪ ನಿರಾಶೆ ಕಾಡುವುದು. ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತೆ ಕೊನೆಯ ಕ್ಷ ಣದಲ್ಲಿ ವಧುವಿನ ಕಡೆಯುವರು ತಮ್ಮ ಅಸಮ್ಮತಿ ತಿಳಿಸುವರು. ಇನ್ನು ಸ್ವಲ್ಪ ದಿನ ಕಾಯುವುದು ಅನಿವಾರ್ಯವಾಗುವುದು.

ಮಕರ:- ಕೆಲಸಕ್ಕೆ ಬಾರದ ಜನ ತಲೆ ತಿನ್ನುವ ಸಾಧ್ಯತೆ ಅಧಿಕವಾಗಿದೆ. ದೂರದ ಪ್ರವಾಸ ಮಾಡುವ ಯೋಗವಿದೆ. ಪತಿ ಪತ್ನಿಯಲ್ಲಿ ಮನಸ್ತಾಪ ಕಂಡುಬರುವುದು. ತಪ್ಪದೇ ಶಿವ ಪಂಚಾಕ್ಷ ರಿ ಮಂತ್ರ ಪಠಿಸಿ.

ಕುಂಭ:- ನೀವು ಹುಟ್ಟಿದ ಊರಿನಲ್ಲಿ ನಡೆಯುವ ಸಂಭ್ರಮದ ಸಮಾರಂಭದಲ್ಲಿ ಭಾಗವಹಿಸುವಿರಿ. ನಿಮ್ಮೊಡನೆ ಆಡಿ ಬೆಳೆದ ಸಹಪಾಠಿಗಳ ಭೇಟಿಯು ನಿಮಗೆ ಸಂತಸ ನೀಡುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಮೀನ:- ಅನಿರೀಕ್ಷಿತವಾದ ಬೆಳವಣಿಗೆಗಳು ನಿಮ್ಮ ಪರವಾಗಿ ಆಗುವುದರಿಂದ ತಡೆ ಹಿಡಿಯಲ್ಪಟ್ಟ ಕಾರ್ಯಗಳಿಗೆ ಚಾಲನೆ ದೊರೆಯುವುದು. ಜೀವನದಲ್ಲಿ ಒಂದು ಹೊಸ ಆಶಾಕಿರಣ ಮೂಡುವುದು. ಮನಸ್ಸು ಹಕ್ಕಿಯಂತೆ ಹಾರುವುದು.