ಸಾಮಾನ್ಯವಾಗಿ ನಾವು ಪ್ರತಿ ದಿನ ಅಡುಗೆಗೆ ಹಸಿಮೆಣಸಿನಕಾಯಿ ಬಳಸುತ್ತಿರುತ್ತೇವೆ. ಬಹಳಷ್ಟು ಮಂದಿ ಸಾರಿಗೆ ಕೆಂಪು ಮೆಣಸಿನಕಾಯಿಗೆ ಬದಲಾಗಿ ಹಸಿ ಮೆಣಸಿನಕಾಯಿ ಬಳಸುತ್ತಿರುತ್ತಾರೆ. ಸಾರಿಗೆ ಹಸಿಮೆಣಸಿನಕಾಯಿ ಬಳಸುವುದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಹಸಿಮೆಣಸಿನಕಾಯಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ.
ಇವುಗಳಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಸಿಮೆಣಸಿನಕಾಯಿ ಕೊಬ್ಬಿನ ಅಂಶವನ್ನ ಕಡಿಮೆ ಮಾಡುತ್ತದೆ. ತೂಕವನ್ನು ಕಡಿಮೆ ಮಾಡಲು ಹಸಿರು ಮೆಣಸಿನಕಾಯಿಯನ್ನು ತುಂಬಾ ಜನರು ಉಪಯೋಗಿಸುತ್ತಾರೆ. ಹಲವು ಪೌಷ್ಟಿಕಾಂಶಗಳು ಹಸಿರು ಮೆಣಸಿನಕಾಯಿಯಲ್ಲಿದ್ದು, ದೇಹದ ಆರೋಗ್ಯಕ್ಕೆ ಯೋಗ್ಯವಾಗ ಪೋಷಕಾಂಶಗಳನ್ನು ಒದಗಿಸುತ್ತದೆ.
ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಎ, ಐರನ್, ಕಾಪರ್, ಪೊಟ್ಯಾಷಿಯಂ, ನಿಯಾಸಿನ್, ಫೈಬರ್, ಫೋಲೇಟ್‌ನಂತಹ ಪೋಷಕಾಂಶಗಳು ಇರುತ್ತವೆ. ಹಸಿಮೆಣಸಿನಕಾಯಿಅಲ್ಲಿ ಇರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.
ಜೀರ್ಣಶಕ್ತಿ ಹೆಚ್ಚಿಸುತ್ತದೆ. : ಹಸಿರು ಮೆಣಸಿನಕಾಯಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಅಜೀರ್ಣತೆ ತಡೆಗಟ್ಟುತ್ತದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಗ್ರೀನ್ ಚಿಲ್ಲಿ ತಿನ್ನುವುದರಿಂದ ಅಲ್ಸರ್ ನಿವಾರಿಸುತ್ತದೆ. ಆದ್ರೆ ಪೆಪ್ಟಿಕ್ ಅಲ್ಸರ್ ನಿಂದ ಬಳಲುತ್ತಿರುವವರು, ಹಸಿಮೆಣಸಿನಕಾಯಿ ತಿನ್ನುವುದನ್ನು ಅವಾಯ್ಡ್ಡ್ ಮಾಡಿ.
ತೂಕ ನಷ್ಟ: ಡಯಟ್‌ನಲ್ಲಿ ಹಸಿಮೆಣಸಿನಕಾಯಿ ಬಳಸುವುದರಿಂದ ದೇಹದ ಕೊಬ್ಬನ್ನು ಇದು ನಿವಾರಿಸುತ್ತದೆ. ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ.
ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ನಿಯಮಿತವಾಗಿ ಹಸಿಮೆಣಸಿನಕಾಯಿ ತಿನ್ನುವುದರಿಂದ ಮಧುಮೇಹ ತಡೆಗಟ್ಟಬಹುದು. ಹಸಿರು ಮೆಣಸಿನಕಾಯಿ ಸೇವಿಸಿದರೆ, ದೇಹದಲ್ಲಿ ಹೆಚ್ಚಾಗುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹಾಗೂ ದೇಹ ಸಮತೋಲನದಲ್ಲಿರಲು ಸಹಾಯಕಾರಿಯಾಗುತ್ತದೆ.
ಕ್ಯಾನ್ಸರ್ ತಡೆಯಲು ಸಹಾಯ : ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಕಾರಣ, ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಸಹಾಯಾರಿಯಾಗಿದೆ. ಶೀತ ಭಾದೆಗೂ ಮೆಣಸಿನಕಾಯಿ ಸಹಕಾರಿ: ಹಸಿರು ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶ ಹೆಚ್ಚಾಗಿರುವುದರಿಂದ ಅತಿ ಬೇಗ ಶೀತವನ್ನು ಗುಣಪಡಿಸುತ್ತದೆ.