ಧರ್ಮತ್ತಡ್ಕ: ಬದುಕು ಎಷ್ಟು ಬದಲಾಗಿದೆ ಎಂಬುದಕ್ಕೆ ಇಂದಿನ ಜನರ ಆಹಾರ ಜೀವನದ ಬದಲಾವಣೆಯೆ ಸಾಕ್ಷಿ. ಸಹಜವಾಗಿ ನಮ್ಮ ಪರಿಸರದಲ್ಲಿ ಸಿಗುವಂತಹ ಆಹಾರ ವಸ್ತುಗಳ ಬಳಕೆಯೇ ಉತ್ತಮ ಎಂಬುದು ಗೊತ್ತಿದ್ದರು ಕೂಡ ಜನರ ನಡೆ ವಿಷಕಾರಿ ಆಹಾರ ದ ಕಡೆಗೆ ಸಾಗುತ್ತಿದೆ .


ಎಂಬುದನ್ನು ಮನಗಂಡು ವಿಧ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಧ್ಯಾರ್ಥಿಗಳು ಮತ್ತು ಅಧ್ಯಾಪಕರ ಸಹಯೋಗ ದೊಂದಿಗೆ “ಹಲಸು ಸಂಭ್ರಮ”ವನ್ನು ಪ್ರತಿ ವರ್ಷದಂತೆಯೇ ಈ ಬಾರಿಯೂ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹಲಸು ಸಂಭ್ರಮಕ್ಕೆ ಚಾಲನೆ ಯನ್ನು ಕೊಟ್ಟು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೆರೋಳು ಸಹಜವಾಗಿ ನಮ್ಮ ಪರಿಸರದಲ್ಲಿ ಸಿಗುವಂತಹ ಆಹಾರ ವಸ್ತುಗಳ ಬಳಕೆಯೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  'ಹವ್ಯಕ ಮಾದರಿ ಕೇಂದ್ರ' ಸ್ಥಾಪನೆಗೆ ಚಿಂತನೆ - ಡಾ.ಕಜೆ

ಇದೇ ಸಂದರ್ಭದಲ್ಲಿ ಅಧ್ಯಾಪಕಿಯಾದ ಶ್ರೀಮತಿ ವಿಚೇತಾ ಲೋಕೆಶ್ ಅವರ ಸಹಕಾರದಿಂದ ಸುಮಾರು ನೂರರಷ್ಟು ಹಲಸನ್ನು ಮಧ್ಯಾಹ್ನದ ಊಟಕ್ಕೆ ಅನುಕೂಲವಾಗುವಂತೆ ಶಾಲೆಯಲ್ಲಿ ಅಧ್ಯಾಪಕ ವಿದ್ಯಾರ್ಥಿಗಳ ಸಹಕಾರದಿಂದ ಉಪ್ಪಿನಲ್ಲಿ ಹಾಕಿ ಇಡಲಾಯಿತು.

RELATED ARTICLES  ಸಚಿವ ಯು ಟಿ ಖಾದರ್ ಕುರಾನ್ ಗ್ರಂಥ ಮೊದಲು ಅಧ್ಯಯನ ಮಾಡಿಕೊಂಡು ನನ್ನ ಬಗ್ಗೆ ಮಾತಾಡಲಿ : ಅನಂತ ಕುಮಾರ್

ಈ ಕಾರ್ಯಕ್ರಮಕ್ಕೆ ಶಾಲಾ ಅಧ್ಯಾಪಕರಾದ ಶ್ರೀ ಗೋವಿಂದ ಭಟ್, ಶಿವಪ್ರಸಾದ್. ಚೆರುಗೇೂಳಿ, ರಾಜ ಕುಮಾರ್ ಕಾಟುಕುಕ್ಕೆ ,ಪ್ರದೀಪ ಕರ್ವಜೆ ,ಪ್ರಶಾಂತ ಹೊಳ್ಳ ಎನ್, ಶ್ರೀ ಮತಿ ತುಳಸಿ. ಕೆ ,ಶ್ರೀ ಮತಿ ಸೌಮ್ಯ, ಶ್ರೀ ಮತಿ ಗಂಗಮ್ಮ, ಕೇಶವಪ್ರಸಾದ ಎಡಕ್ಕಾನ, ಗಣೇಶ, ನೇತೃತ್ವ ವಹಿಸಿದರು.