ಗೋಕರ್ಣ: ಗಂಗೆಕೊಳ್ಳ ಸಮುದ್ರ ತೀರದಲ್ಲಿ ಶುಕ್ರವಾರ ನೌಕಾ ಪಡೆ ಬಳಸುವ ಶೆಲ್​ಪತ್ತೆಯಾಗಿದೆ. ಸಮುದ್ರದಲ್ಲಿ ತೇಲಿ ಬಂದ 1 ಅಡಿ ಉದ್ದ ಮತ್ತು ಅರ್ಧ ಅಡಿ ಅಗಲವಿರುವ ಈ ಶೆಲ್ ಮೇಲೆ ‘ಡೇಂಜರ್’ ಎಂದು ಬರೆದಿದೆ. ಇದನ್ನು ನೋಡಿದ ಸ್ಥಳೀಯರು ಇದು ಬಾಂಬ್ ಇರಬಹುದೇ ಎಂದು ಆತಂಕಕ್ಕೊಳಗಾದರು.

RELATED ARTICLES  ಅಪರಿಚಿತ ಶವ ಪತ್ತೆ...!

ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸಿದ ಪಿಎಸ್​ಐ ಸಂತೋಷಕುಮಾರ ‘ಇದು ಬಾಂಬ್ ಅಲ್ಲ. ಭದ್ರವಾಗಿ ಸೀಲ್ ಆಗಿರುವ ಇದರಿಂದ ಯಾವುದೇ ಅಪಾಯವಿಲ್ಲ. ಸಿಗ್ನಲ್ ದೀಪ ಉರಿಸಲು ನೌಕಾಪಡೆಯವರು ಈ ಶೆಲ್​ಗಳನ್ನು ಬಳಸುತ್ತಾರೆ’ ಎಂದು ಜನರನ್ನು ಸಮಾಧಾನ ಮಾಡಿದರು. ಈ ಬಗ್ಗೆ ಕಾರವಾರ ನೌಕಾನೆಲೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸದ್ಯ ಸಮುದ್ರ ತೀರದ ಉಸುಕಿನಲ್ಲಿ ಹುಗಿದಿಟ್ಟಿದ್ದಾರೆ.

RELATED ARTICLES  ಅರಣ್ಯ ಅತಿಕ್ರಮಣದಾರರಿಗೆ ಅವಕಾಶ ಇಲ್ಲ ; ಶಾಸಕ ಕಾಗೇರಿ