ಗೋಕರ್ಣ: ಮಳೆಗಾಲ‌ ಪ್ರಾರಂಭವಾಗುತ್ತಿದ್ದಂತೆ ಜನತೆಗೆ ಒಂದಿಲ್ಲ ಒಂದು ಕಿರಿಕಿರಿ ಪ್ರಾರಂಭವಾಗುತ್ತೆ. ಮಳೆಯಿಂದ ಒಂದೆಡೆ ಜನ ಹರ್ಷ ಪಟ್ಟರೆ ಹಲವು ಅವ್ಯವಸ್ಥೆಯಿಂದಾಗಿ ಜನ ಕಿರಿಕಿರಿ ಜೊತೆಗೆ ಸಾಂಕ್ರಾಮಿಕ ರೋಗದ ಭೀತಿಯನ್ನೂ ಎದುರಿಸಬೇಕಾಗುವುದು.

ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆಗೆ ಗೋಕರ್ಣ ಬಸ್ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನೀರು ತುಂಬಿದೆ. ಹಲವು ದಿನಗಳಿಂದ ಅಧಿಕ ಪ್ರಮಾಣದಲ್ಲಿ ಹೊಲಸು ನೀರು ನಿಂತಿದ್ದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ನೀರನ್ನು ಹೊರಗೆ ಹೋಗುವಂತೆ ಸರಿಯಾದ ವ್ಯವಸ್ಥೆ ಮಾಡಿಕೊಡದಿರುವುದು ಇದಕ್ಕೆಲ್ಲ ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.

RELATED ARTICLES  ಸಂಚಾರಕ್ಕೆ ಅಡಚಣೆ : ವಾಹನ ಸವಾರರಿಗೆ ನೀರು, ಊಟ ವಿತರಣೆ

ಈ ಬಸ್ ನಿಲ್ದಾಣದ ಜಾಗ ಸ್ವಿಮ್ಮಿಂಗ್ ಪೂಲ್ ನಂತಾಗಿದ್ದು ಸೂಕ್ತ ವ್ಯವಸ್ಥೆ ಇಲ್ಲದೆ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.ಈಗಾಗಲೇ ಇಲ್ಲಿನ ವಿಶಾಲವಾದ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ಗೊಳಿಸಲು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ಇದೇ ಜಾಗ ನೀಡಿದ್ದು ಇದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಣ ಪಡೆಯುತ್ತಿದೆ. ಆದರೂ ಇಲ್ಲಿನ ಸ್ವಚ್ಛತೆಯ ಬಗ್ಗೆ ಮಾತ್ರ ಗಮನ ಹರಿಸುತ್ತಿಲ್ಲಾ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ.

RELATED ARTICLES  ನೆಲ್ಲಿಕೇರಿಯ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಸಂಪನ್ನ

ಈ ಮೊದಲು ಸಹ ಸ್ವಚ್ಛತೆ ಹಾಗೂ ಸೂಕ್ತ ವ್ಯವಸ್ಥೆ ಇಲ್ಲದೆ ಈ ಕೆಲವು ನಿಲ್ದಾಣ ಸುದ್ದಿಯಾಗಿತ್ತು. ಈಗ ಮತ್ತಷ್ಟು ಹೊಲಸು ತುಂಬಿದ್ದು ಸುತ್ತಲಿನ ಸಾರ್ವಜನಿಕರಿಗೆ ಭಯ ಹುಟ್ಟಿಸಿದೆ.