ಕುಮಟಾ :   ಹಿರೇಗುತ್ತಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಹಿರೇಗುತ್ತಿಯಲ್ಲಿ ಇತ್ತೀಚೆಗೆ ನಿಧನರಾದ ರಾಮಕೃಷ್ಣ ತಿಮ್ಮಪ್ಪ ನಾಯಕ ಮತ್ತು ವೆಂಕಟೇಶ (ಬಾಬು) ರಾಮಚಂದ್ರ ನಾಯಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರೀ ಬ್ರಹ್ಮಜಟಕ ಯುವಕ ಸಂಘ ಹಾಗೂ ಊರ ನಾಗರಿಕರಿಂದ ಮೌನ ಆಚರಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.

ಅರುಣ ಗಾಂವಕರ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಅಂಕೋಲಾ ರವರು ಮಾತನಾಡಿ “ರಾಮಕೃಷ್ಣ ಟಿ ನಾಯಕ ಮತ್ತು ಬಾಬು ರಾಮಚಂದ್ರ ನಾಯಕ ನಿಧನರಾಗಿರುವುದು ನಮ್ಮ ಯುವಕ ಸಂಘಕ್ಕೆ ಹಾಗೂ ನಮ್ಮೆಲ್ಲರಿಗೂ ತುಂಬಲಾರದ ಹಾನಿಯಾಗಿದೆ ಇವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ” ಎಂದರು.

RELATED ARTICLES  ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ, ಮಗ ಹೇಗೆ ಬ್ರಾಹ್ಮಣ?: ರಾಹುಲ್ ಕುರಿತು ಅನಂತ ಪ್ರಶ್ನೆ..!!

ರಾಮು ಕೆಂಚನ್ ಮಾತನಾಡಿ “ಆರ್ ಟಿ ನಾಯಕ. ಮತ್ತು ಬಾಬು ಜೊತೆಗಿನ ಒಡನಾಟದ ಆ ದಿನಗಳನ್ನು ಮೆಲಕು ಹಾಕಿದರು. ನಾಗರಾಜ ಗಣಪತಿ ನಾಯಕ ಹೈಸ್ಕೂಲ್ ಶಿಕ್ಷಕರು ಮಾತನಾಡಿ ಮೃತರ ಆತ್ಮಕ್ಕೆ ದೇವರು ಚಿರಶಾಂತಿ ಯನ್ನು ನೀಡಲಿ ಎಂದರು ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವಕ ಸಂಘದ ಅಧ್ಯಕ್ಷ ರಾಜು ಕೃಷ್ಣ ಗಾಂವಕರ.ಚಂದ್ರಕಾಂತ ಗಾಂವಕರ .ಹರೀಶ ಬಿ ನಾಯಕ. ರಾಜು ಸಣ್ಣಪ್ಪ ನಾಯಕ.ಗುರುರಾಜ ನಾಯಕ.ಮಂಜುನಾಥ ನಾಯಕ.ಆನಂದು ಬಿ ನಾಯಕ. ಉಮೇಶ ಗಾಂವಕರ.ದೇವಿದಾಸ ನಾಯಕ.ರಾಜು ರಾಮಚಂದ್ರ ನಾಯಕ. ಉಪಸ್ಥಿತರಿದ್ದರು.

RELATED ARTICLES  ಇಂದಿನ(ದಿ-16/11/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ವರದಿ :  ಎನ್ ರಾಮು ಹಿರೇಗುತ್ತಿ