ಮಂಗಳೂರು: ಹವಾಮಾನ ವೈಪರಿತ್ಯದಿಂದ ಮಂಗಳೂರಿನ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ – 380 ವಿಮಾನ ರನ್ ವೇ ಬಿಟ್ಟು ಹೊರಜಾರಿದ ಘಟನೆ ನಡೆದಿದೆ.

RELATED ARTICLES  ಪದವೀಧರ ಶಾಲಾ ಶಿಕ್ಷಕರ ನೇಮಕಾತಿ ಬಯಸಿದವರಿಗೆ ಗುಡ್ ನ್ಯೂಸ್.

ದುಬೈನಿಂದ 181 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ವಿಮಾನ ಸಂಜೆ 5.20ಕ್ಕೆ ಮಂಗಳೂರು ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗುತಿದ್ದ ವೇಳೆ ಘಟನೆ ನಡೆದಿದ್ದು ಪೈಲಟ್ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.

RELATED ARTICLES  ನಾಳೆ 2nd P.U.C ಫಲಿತಾಂಶ

ರನ್ ವೇ ನಿಂದ ಹೊರನಡೆದು ಮಣ್ಣಿನ ಜಾಗದಲ್ಲಿ ವಿಮಾನ ಕುಸಿದಿದ್ದು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.