ಕಾರವಾರ: ಶಾಲೆಗಳ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಶೂ,ಸೈಕಲ್ ಜೊತೆಗೆ ಸರ್ಕಾರ ಬ್ಯಾಗ್ ಅನ್ನೂ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಒತ್ತಾಯಿಸಿದರು.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲೂಕಿನ ಚಿತ್ತಾಕುಲಾ ಸೀಬಡರ್್ ಕಾಲನಿಯ ಸಕರ್ಾರಿ ಹೈಸ್ಕೂಲ್ನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಭಟ್ಕಳ ಶಾಸಕ ಸುನೀಲ ನಾಯ್ಕ ನೆರವಿನಲ್ಲಿ ಸಂಘದ ವತಿಯಿಂದ ಕೊಡಲಾದ ಸ್ಕೂಲ್ ಬ್ಯಾಗ್ಗಳನ್ನು ಶಾಲೆಯ 68 ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಹಿಂದೆ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಶಾಲಾ ಮಕ್ಕಳಿಗೆ ಪತ್ರಿಕಾ ದಿನಾಚರಣೆ ಅಂಗವಾಗಿ ಚಪ್ಪಲಿ ವಿತರಣೆ ಮಾಡಿತು. ಆ ಕಾರ್ಯಕ್ರಮಕ್ಕೆ ಬಂದ ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅದನ್ನು ಅನುಸರಿಸಿ ಶಾಲಾ ಮಕ್ಕಳಿಗೆ ಸಕರ್ಾರದಿಂದ ಶೂ ಮತ್ತು ಸಾಕ್ಸ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಬಾರಿ ಬ್ಯಾಗ್ ವಿತರಿಸಿದ್ದು, ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಕರ್ಾರಕ್ಕೆ ಮನವಿ ಮಾಡಲಾಗುವುದು ಎಂದರು. ಸಾಮಾಜಿಕ ಜಾಲತಾಣಗಳು ಇಂದು ಬೇಡದ ಸುದ್ದಿ ಹರಡುತ್ತಿವೆ. ವಾಸ್ತವ ವರದಿಗಾಗಿ ಮಾಧ್ಯಮಗಳು ಬೇಕಿವೆ ಎಂದರು.

ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಕಾಯುವ ಕೆಲಸವನ್ನು ಪತ್ರಿಕಾ ರಂಗ ಮಾಡುತ್ತಿದೆ. ಉತ್ತರ ಕನ್ನಡದಲ್ಲಿ ಸಕರ್ಾರದ ಸಂದೇಶವನ್ನು ಶೇ. 80 ಜನರಿಗೆ ತಲುಪಿಸುವ ಕಾರ್ಯ ಮಾಧ್ಯಮಗಳ ಮೂಲಕ ಆಗುತ್ತಿದೆ. ತಮ್ಮ ಕರ್ತವ್ಯದ ಸಂದರ್ಭದಲ್ಲಿ ಪತ್ರಕರ್ತರು ಹಲ್ಲೆಗೊಳಗಾಗುವ ಸಂದರ್ಭಗಳಿವೆ. ಇದರಿಂದ ಪತ್ರಕರ್ತರಿಗೆ ಭದ್ರತೆ ಹಾಗೂ ಸೇವಾ ಭದ್ರತೆ ಕೊಡುವ ಬಗ್ಗೆ ಸಕರ್ಾರ ಯೋಚಿಸುತ್ತಿದೆ ಎಂದರು.
ಚಿತ್ತಾಕುಲಾ ಗ್ರಾಪಂ ಅಧ್ಯಕ್ಷ ರಾಜು ತಾಂಡೇಲ, ಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ರಾಮದಾಸ ಆಚಾರಿ, ಜಿಲ್ಲಾ ವಾತರ್ಾಧಿಕಾರಿ ಹಿಮಂತರಾಜು ಜಿ. ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಚ್ಯುತಕುಮಾರ ಯಲ್ಲಾಪುರ, ಗಣೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸುಭಾಸ ಧೂಪದಹೊಂಡ ವಂದಿಸಿದರು.

RELATED ARTICLES  ಉತ್ತರಕನ್ನಡ Local Update

ಟ್ಯಾಗೋರ್ ಪ್ರಶಸ್ತಿ:

ಕನ್ನಡ ಪ್ರಭ ಹಾವೇರಿ ವರದಿಗಾರ ನಾರಾಯಣ ಹೆಗಡೆ, ತರುಣ ಭಾರತ ವರದಿಗಾರ ಪಿ.ಕೆ.ಚಾಪಗಾಂವಕರ್ ಹಾಗೂ ಟಿವಿ9 ಕ್ಯಾಮರಾಮನ್ ದಿನೇಶ ಹಿತ್ತಲದವರ್ ಅವರಿಗೆ ಟ್ಯಾಗೋರ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪ್ರಜಾವಾಣಿ ವರದಿಗಾರ ಸದಾಶಿವ ಎಂ.ಎಸ್.ಸನ್ಮಾನಿತರನ್ನು ಪರಿಚಯಿಸಿದರು. ಕ್ರಿಯಾ ಶೀಲ ಯುವ ವರದಿಗಾರರಾದ ಪ್ರಶಾಂತ ಮಹಾಲೆ, ಎಸ್.ಎಸ್.ಸಂದೀಪ ಸಾಗರ,ವಾಸುದೇವ ಗೌಡ,ಗುರುಪ್ರಸಾದ ಹೆಗಡೆ ಹಾಗೂ ದೇವರಾಜ ನಾಯ್ಕ ಅವರಿಗೆ ಈ ಸಂದರ್ಭದಲ್ಲಿ ಯುವ ಸಾಧಕ ಪತ್ರಕರ್ತ ಪ್ರಶಸ್ತಿ ಸನ್ಮಾನಿಸಲಾಯಿತು. ಯುವ ಪ್ರಶಸ್ತಿಯ ಕುರಿತು ಟಿವಿ9 ವರದಿಗಾರ ಸಂದೀಪ ಸಾಗರ ಮಾತನಾಡಿದರು.

ಶತಮಾನ ಕಂಡ ಪತ್ರಿಕೆ ಸಂಪಾದಕರಿಗೆ ಸನ್ಮಾನ:

ಸತತ 101 ವರ್ಷಗಳಿಂದ ಮುದ್ರಣವಾಗುತ್ತಿರುವ ರಾಜ್ಯದ ಏಕೈಕ ಪತ್ರಿಕೆ `ಕಾನಡಾ ವೃತ್ತ’ದ ಸಂಪಾದಕ ಶ್ರೀಕಾತ ಶಾನಬಾಗ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪತ್ರಿಕೆಯ ಕುರಿತು ಕೌತುಕದ ಇತಿಹಾಸವನ್ನು ಕನ್ನಡ ಪ್ರಭದ ವಸಂತಕುಮಾರ ಕತಗಾಲ ಈ ಸಂದರ್ಭದಲ್ಲಿ ಬಿಚ್ಚಿಟ್ಟರು.

RELATED ARTICLES  ಮನೆಯಮೇಲೆ ಬಿದ್ದ ಮರ : ಮನೆಯವರು ಕಂಗಾಲು : ಬೇರೆಯವರ ಮನೆಯಲ್ಲಿ ಆಶ್ರಯ ಪಡೆದ ನಿರಾಶ್ರಿತರು.

ಉಚಿತ ಆರೋಗ್ಯ ಚಿಕಿತ್ಸೆ:

ಪತ್ರಿಕಾ ದಿನಾಚರಣೆಯ ಜೊತೆ, ಜೊತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹೈಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ಸೋಮವಾರ ಕೈಗೊಳ್ಳಲಾಯಿತು.

ಸತ್ಯ ಸಾಯಿ ಸೇವಾ ಸಂಸ್ಥೆಯ ಸಾಯಿ ಧನ್ವಂತರಿ ವಾಹನ ಹೈಸ್ಕೂಲ್ ಆವರಣಕ್ಕೆ ಆಗಮಿಸಿತ್ತು. ಶಾಲೆ ಹಾಗೂ ಸುತ್ತಲಿನ ಗ್ರಾಮಗಳ 137 ಜನರಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಕಿವಿ ಮೂಗು ಗಂಟಲು ವಿಭಾಗದಲ್ಲಿ 9, ಹಲ್ಲಿನ ವಿಭಾಗದಲ್ಲಿ 46, ಚರ್ಮ ಹಾಗೂ ಸಾಮಾನ್ಯ ವಿಭಾಗದಲ್ಲಿ 82 ಜನರು ತಪಾಸಣೆಗೆ ಒಳಪಟ್ಟರು.
ಸತ್ಯಸಾಯಿ ಸೇವಾ ಸಮಿತಿಯ ವೈದ್ಯರಾದ ಡಾ.ಚಂದ್ರಶೇಖರ ಕದಂ, ಡಾ.ಕಿರಣ ರೇವಣಕರ್, ಡಾ.ಜೋತ್ಸ್ನಾ ರೇವಣಕರ್, ಜಿಲ್ಲಾ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ.ಸುಭಾಷ ತಾಂಡೇಲ, ಸ್ಥಳೀಯ ಪಿಎಚ್ಸಿ ವೈದ್ಯಾಧಿಕಾರಿ ಡಾ.ಸುದಿತಾ ಪೆಡ್ನೇಕರ್ ಅವರು ತಪಾಸಣೆ ನಡೆಸಿದರು. ಸಾಯಿ ಸೇವಾ ದಳದ 34 ಕಾರ್ಯಕರ್ತರು ಸಹಕರಿಸಿದರು. ಸೂರಜ್ ಗಾಂವಕರ್, ಗಣೇಶ ಡ್ರಗ್ ಹೌಸ್ ಸೂರಜ್ ನಾಯ್ಕ ಕೊಡುಗೆಯಲ್ಲಿ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ವೈದ್ಯರ ದಿನಾಚರಣೆಯ ಅಂಗವಾಗಿ ಎಲ್ಲ ವೈದ್ಯರು ಹಾಗೂ ಸತ್ಯಸಾಯಿ ಸೇವಾ ಸಮಿತಿಯ ರಾಮದಾಸ ಆಚಾರಿ ಅವರನ್ನು ಸನ್ಮಾನಿಸಲಾಯಿತು.