ಮೇಷ:- ನಿಮ್ಮ ಕೆಲಸ ಕಾರ್ಯಗಳಲ್ಲಿನ ವಿನಯ ಹಾಗೂ ಶಿಸ್ತುಗಳು ಹೊಸದೇ ಆದ ತೂಕ ಒದಗಿಸಲಿವೆ. ಸಮಾಜದಲ್ಲಿ ಕೀರ್ತಿ, ಗೌರವಗಳು ಹೆಚ್ಚಾಗುವವು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

ವೃಷಭ:- ಒಬ್ಬ ದೇವನನ್ನು ನಂಬಬೇಕು. ಆರೋಗ್ಯದ ಸಲುವಾಗಿ ಒಬ್ಬ ವೈದ್ಯನನ್ನು ನಂಬಬೇಕು. ಈ ನಂಬಿಕೆಯಲ್ಲಿ ವ್ಯತ್ಯಾಸವಾದಲ್ಲಿ ಅವುಗಳ ಪರಿಣಾಮ ವ್ಯತಿರಿಕ್ತವಾಗುವುದು. ಹಾಗಾಗಿ ಏಕದೇವತಾ ಉಪಾಸನೆ ಮಾಡುವುದು ಒಳ್ಳೆಯದು.

ಮಿಥುನ:- ಏನನ್ನೋ ಮಾಡಲು ಹೋಗಿ ಅನರ್ಥ ಆಗುವುದು ಬೇಡ. ನಿಮಗೆ ತಿಳಿದಿದ್ದನ್ನೆ ಮಾಡಿ. ಅದರಿಂದ ಜೀವನದಲ್ಲಿ ಒಳಿತಿಗೆ ದಾರಿ ಆಗುವುದು. ಅನವಶ್ಯಕ ಖರ್ಚು, ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.

ಕಟಕ:- ಮನಸ್ಸಿನ ಸಂಕಲ್ಪ ಕಾರ‍್ಯಗತವಾಗುವ ಸೂಚನೆಗಳಿಗೆ ಅವಕಾಶ ಕೂಡಿ ಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆ ಮೀರಿ ಲಾಭ ಕಂಡುಬರುವುದು. ವಿಷ್ಣು ದೇವಾಲಯಕ್ಕೆ ತುಳಸಿಮಾಲೆ ಸಮರ್ಪಿಸಿ.

ಸಿಂಹ:- ಕೀಳರಿಮೆ ಬಿಟ್ಟುಬಿಡಿ. ನಿಮ್ಮಲ್ಲಿನ ಪ್ರತಿಭೆ ಅಗಾಧವಾದುದು. ಒಳ್ಳೆ ವಿಚಾರಗಳನ್ನು ಕೇಳುವಿರಿ. ಹಲವು ದಿನಗಳಿಂದ ಕಾಡುತ್ತಿದ್ದ ಮನಸ್ಸಿನ ತುಮುಲಕ್ಕೆ ಒಂದು ಶಾಶ್ವತ ಪರಿಹಾರ ದೊರೆಯಲಿದೆ.

RELATED ARTICLES  ಮತಪಟ್ಟಿಗೆ ಸೇರದವರಿಗೆ ಫೈನಲ್‌ ಚಾನ್ಸ್‌!‘ಮಿಂಚಿನ ನೋಂದಣಿ’

ಕನ್ಯಾ:- ನಿಮ್ಮ ವೈಚಾರಿಕ ಆಳ, ಅಗಲ ನಿಮ್ಮನ್ನು ಬಹಳ ಉತ್ತಮ ಸ್ಥಿತಿಗೆ ತಲುಪಿಸುತ್ತವೆ. ವಿವಿಧ ಮೂಲಗಳಿಂದ ಹಣಕಾಸು ಬರುವುದು. ನಿಮ್ಮ ಹಳೆಯ ಸ್ನೇಹಿತರು ನಿಮಗೆ ಸಹಾಯ ನೀಡುವ ಸಾಧ್ಯತೆ ಇದೆ.

ತುಲಾ:- ಸರ್ಕಾರಿ ಆಫೀಸಿನಲ್ಲಿ ಕಹಿ ಅನುಭವಗಳು ಉಂಟಾಗುವ ಸಾಧ್ಯತೆ ಇದೆ. ಆದರೆ ನಿಮ್ಮ ತಾಳ್ಮೆ ದೃಢವಾಗಿರಲಿ. ಗುರುಹಿರಿಯರ ಆಶೀರ್ವಾದದಿಂದ ಕೆಲಸಗಳು ಸುಗಮವಾಗಿ ನಡೆಯುವವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು.

ವೃಶ್ಚಿಕ:- ವ್ಯಾವಹಾರಿಕ ಜಗತ್ತಿನ ನಯವಂಚಕತನ ನಿಮಗೆ ಜಿಗುಪ್ಸೆ ತರಿಸುವುದು. ಆದರೆ ವಿಚಲಿತರಾಗದಿರಿ. ನೀವು ಇಟ್ಟಿರುವ ಹೆಜ್ಜೆ ಉತ್ತಮವಾಗಿದೆ. ‘ಶ್ರೇಯಾಂಸಿ ಬಹು ವಿಘ್ನಾನಿ’ ಎಂದು ಹೇಳುವಂತೆ ಕಾರ್ಯಗಳು ಕಾರ್ಯಗತವಾಗಲು ಕೆಲ ವಿಘ್ನಗಳನ್ನು ಎದುರಿಸಲೇಬೇಕಿದೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು 83 ಕೋವಿಡ್ ಪ್ರಕರಣ

ಧನುಸ್ಸು:- ಕಾಯ್ದೆ ಕಾನೂನುಗಳಿಗೆ ಸಂಬಂಧಿಸಿದ ದೀರ್ಘಕಾಲಿನ ವಿವಾದವೊಂದಕ್ಕೆ ಪರಿಹಾರ ಸಿಗಲಿದೆ. ಆದರೆ ಮನೆಯ ಸದಸ್ಯರೇ ನಿಮಗೆ ಬೆಂಬಲ ನೀಡದಿರುವುದು ಬೇಸರ ಮೂಡಿಸುವುದು. ಆದಷ್ಟು ಮೌನದಿಂದ ಇರಿ.

ಮಕರ:- ಹೆಚ್ಚಿನ ವಿದ್ಯಾಭ್ಯಾಸದ ಕುರಿತಾಗಿ ಯೋಜನೆ ಹಾಕಿಕೊಂಡಿದ್ದರೆ ಕನಸು ನನಸಾಗುವ ಅವಕಾಶವಿದೆ. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕುಂಭ:- ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಹೆಚ್ಚಿನ ಶುಭಫಲ ಪಡೆಯಲು ಕಾಲ ಪಕ್ವವಾಗಿಲ್ಲ. ಹಾಗಾಗಿ ಹರಿಯ ಒಲುಮೆ ಆಗುವವರೆಗೂ ಅರಿತು ಸುಮ್ಮನಿರುವುದೇ ಲೇಸು. ನಿಮ್ಮ ಕಾರ್ಯದಲ್ಲಿನ ಯಶಸ್ಸು ನಿಧಾನವಾದರೂ ಪ್ರಧಾನವಾಗುವುದು.

ಮೀನ:- ಸಾಹಿತ್ತಿಕವಾಗಿ ಮಹತ್ವವಾದ ವಿಚಾರದಲ್ಲಿ ನಿಮಗೆ ಅನೇಕ ರೀತಿಯ ಯಶಸ್ಸುಗಳು ದೊರೆಯುವವು. ಇದರ ಜತೆ ಮಂತ್ರಸಿದ್ಧಿಯು ದೊರೆಯುವ ಲಕ್ಷ ಣವಿದ್ದು ಗುರುಮುಖೇನ ಇಷ್ಟದೇವತೆಯ ಮಂತ್ರ ದೀಕ್ಷೆ ಪಡೆಯಿರಿ.