ಹೊನ್ನಾವರ: ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಭದಿಸಿದ ಇಲಾಖೆಗಳ ಆಶ್ರಯದಲ್ಲಿ 2019-20 ನೇ ಶಾಲಿನ ಮಂಕಿ ಹೋಬಳಿ ಮಟ್ಟದ “” ಕೃಷಿ ಅಭಿಯಾನ “” ಇಲಾಖೆಯ ನಡಿಗೆ ರೈತರ ಮನೆ  ಬಾಗಿಲಿಗೆ “” ಎಂಬ ಶಿರ್ಷಿಕೆಯಡಿ ಕಾರ್ಯಕ್ರಮದ ಚಾಲನೆ ನೀಡುವ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಬಳ್ಕೂರಿನ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.


 ಕಾರ್ಯಕ್ರಮವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ನಾವು ಇಂದಿಗೂ ಹಳೆಯ ಕೃಷಿ ಪದ್ದತಿಯನ್ನು ಮುಂದುವರಿಸುತ್ತಾ ಬಂದಿದ್ದೇವೆ. ಆದರೆ ಆಧುನಿಕ ಕೃಷಿ ಪದ್ದತಿ ಲಾಭದಾಯಕವಾಗಿದೆ.  ಸಣ್ಣ ಕೃಷಿ ಪದ್ದತಿಯಲ್ಲಿ ಹೆಚ್ಚು ಆದಾಯವನ್ನು ಹೇಗೆ ಪಡೆಯಬಹುದು ಎನ್ನುವುದನ್ನು ನಾವು ತಿಳಿಯಬೇಕಿದೆ. ಸರ್ಕಾರ ಕೃಷಿ ಇಲಾಖೆ ಮೂಲಕ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರುತ್ತಿದ್ದು ಅಂತಹ ಕಾರ್ಯಕ್ರಮಗಳ ಮಾಹಿತಿ ಪಡೆದು ಅದರ ಲಾಭ ಪಡೆದುಕೊಳ್ಳಬೇಕಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಅರ್ಜಿ ಸಲ್ಲಿಕೆ ಅವಧಿ ಜುಲೈ 10ವರೆಗೆ ವಿಸ್ತರಿಸಿದ್ದು ಎಲ್ಲಾ ರೈತರು ಅರ್ಜಿ ಸಲ್ಲಿಸುವಂತೆ ಕರೆ ನೀಡಿದರು.

RELATED ARTICLES  ನನ್ನ ಕನಸಿನ ಹೊನ್ನಾವರ ಕಾರ್ಯಕ್ರಮ

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯೆ ಪುಷ್ಪಾ ನಾಯ್ಕ ಮಾತನಾಡಿ ನಾವು ಕೃಷಿಯನ್ನು ಯಾಂತ್ರಿಕೃತವಾಗಿ ಬಳಸಿಕೊಂಡಾಗ ಮಾತ್ರ ಹೆಚ್ಚಿನ ಲಾಭ ಪಡೆಯಬಹುದು. ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿಗಾಗಿಯೇ ಇಂತಹ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದಾರೆ. ಗ್ರಾಮಗಳಿಗೆ ಬರುವ ಇಂತಹ ಕಾರ್ಯಕ್ರಮದಲ್ಲಾದರೂ ಭಾಗವಹಿಸಿ ಸರ್ಕಾರದ ಸೌಲಭ್ಯ ಮಾಹಿತಿ ಪಡೆಯಿರಿ ಎಂದು ರೈತರಿಗೆ ಕರೆ ನೀಡಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಕೂರ್ ಪಂಚಾಯತ ಅಧ್ಯಕ್ಷರಾದ ಕೇಶವ ನಾಯ್ಕ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರೈತರಿಗೆ ಕೃಷಿ ಸಲಕರಣೆಯನ್ನು ವಿತರಿಸಲಾಯಿತು,

  ವೇದಿಕೆಯಲ್ಲಿ ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಗ್ರಾಮ ಪಂಚಾಯತ ಸದಸ್ಯರಾದ ಗಣಪತಿ ನಾಯ್ಕ ಬಿಟಿ, ಬಾಬು ನಾಯ್ಕ, ವಿನುತಾ ಪೈ, ಕೃಷಿ ಅಧಿಕಾರಿ ಪುನಿತಾ ಬಿ, ಎಮ್ ಎನ್ ನಾಯ್ಕ,  ಪಂಚಾಯತ ಪಿಡಿಓ ರಾಧಾಕೃಷ್ಣ ನಾಯ್ಕ, ಬಿಜೆಪಿ ತಾಲೂಕ ಅಧ್ಯಕ್ಷ ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ಅಕಾಲಿಕ ಮಳೆ : ಹಲವೆಡೆ ಜನ ಜೀವನ ಅಸ್ತವ್ಯಸ್ತ : ಮತದಾನಕ್ಕೂ ಅಡ್ಡಿ

ಜಾಗೃತಿ ಜಾಥಾ  ವಾಹನ ಬಳ್ಕೂರಿನಂದ ಹೊರಟು ಕೋಡಾಣಿ, ಮಾಗೋಡು, ಕುದ್ರಗಿ, ಮೇಲಿನ ಇಡಗುಂಜಿ, ಕಾಸರಕೋಡ, ಮಂಕಿ ಅನಂತವಾಡಿ ಮುಂತಾದ ಕಡೆಗಳಲ್ಲಿ ಸಂಚರಿಸಿ ರೈತರಿಗೆ ಮಾಹಿತಿ ನೀಡಲಾಯಿತು.