ಕುಮಟಾ:ಇಲ್ಲಿನ ಗಾವಡಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಅಳ್ವೇಕೋಡಿಯ ಜಟಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯೂಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಫಲಕ, ನಗದು ನೀಡಿ ಸನ್ಮಾನಿಸಲಾಯಿತು.

RELATED ARTICLES  ಆರು ಗ್ರಾಮಗಳಿಗೆ ಇನ್ನೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ: ಹೋರಾಟದ ಹಾದಿ ಹಿಡಿದ ಗ್ರಾಮಸ್ಥರು.

ಅರ್ಹ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಬಾಲಕೃಷ್ಣ ಕೊರಗಾಂಕರ ವಹಿಸಿ, ನಮ್ಮಲ್ಲಿದ್ದಾಗ ಕರೆದು ನೀಡಿದರೆ ಖಂಡಿತ ಆತ್ಮತೃಪ್ತಿ ದೊರಕುತ್ತದೆ ಎಂದು ನುಡಿದರು. ಸಮಾಜದ ಹಿರಿಯರಾದ ಆರ್.ವಿ.ಗಾವಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

RELATED ARTICLES  ಕುಮಟಾ: ಪಟ್ಟಣದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ.?

ರೋಹಿದಾಸ ಗಾವಡಿ, ಪುರುಷೋತ್ತಮ ಗಾವಡಿ, ಪಾಂಡುರಂಗ ನಾಗೇಕರ, ದಾಮೋದರ ಗಾವಡಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ವಿಷ್ಣು ಗಾವಡಿ ಸ್ವಾಗತಿಸಿದರು. ಪ್ರಶಾಂತ ಗಾವಡಿ ಪ್ರಾರ್ಥಿಸಿದರು. ಪ್ರಕಾಶ ಗಾವಡಿ ನಿರೂಪಿಸಿದರೆ, ದೀಪಕ ಗಾವಡಿ ವಂದಿಸಿದರು.