ಹೊನ್ನಾವರ : ಕ್ರಿಕೆಟ್‌ ಅಭಿಮಾನಿಯಾದ ದೈವಜ್ಞ ಬ್ರಾಹ್ಮಣ ಸಮಾಜದ ಹೊನ್ನಾವರದ ಪ್ರಸನ್ನ ಚಂದ್ರಕಾಂತ ಶೇಟ್ ಇವರು ಕೇವಲ ಎರಡು ಗಂಟೆಯಲ್ಲಿ ೧ ಸೆಂಟಿಮೀಟರ್ ಎತ್ತರ ಮತ್ತು ೧೮೦ ಮಿಲಿ ಗ್ರಾಂ ತೂಕದ ವಿಶ್ವ ಕಪ್ ಟ್ರೋಫಿಯನ್ನು ಚಿನ್ನದಲ್ಲಿ ತಯಾರಿಸಿದ್ದಾರೆ.

ಇವರು ಹೊನ್ನಾವರದ ಬಜಾರ ರಸ್ತೆಯಲ್ಲಿರುವ ಮಾರುತಿ ಪ್ರಸನ್ನ ಜ್ಯೂವೆಲ್ಲರಿಯ ಮಾಲಿಕರಾದ ಚಂದ್ರಕಾಂತ ಶೇಟ ಮತ್ತು ಶೋಭಾ ಇವರ ಮಗನಾಗಿದ್ದಾರೆ.

RELATED ARTICLES  ಸಂಸ್ಮರಣೆ-ಸನ್ಮಾನ ಹಾಗೂ ತಾಳಮದ್ದಲೆ ಕಾರ್ಯಕ್ರಮ

ವ್ರತ್ತಿಯಲ್ಲಿ ಹೊನ್ನಾವರದ ಎಸ್‌.ಡಿ.ಎಮ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

   ತಮ್ಮ ಕುಲ ಕಸಬಾದ ಚಿನ್ನ ಬೆಳ್ಳಿ ಕೆಲಸವನ್ನು ತನ್ನ ತಂದೆಯೊಂದಿಗೆ ಮಾಡುತ್ತಾ ತಂದೆಗೂ ಸಹಕರಿಸಿತ್ತಿರುವ ಇವರು ಈ ಕಪ್ ತಯಾರಿಸಿ ಗಮನ ಸೆಳೆದಿದ್ದಾರೆ.

RELATED ARTICLES  ನಾಳೆ ಶಿರಾಲಿಯಲ್ಲಿ ಜಿಲ್ಲಾಧಿಕಾರಿಗಳಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

   ಇನ್ನೊಂದು ೯೫೦ ಮಿಲಿ ಗ್ರಾಂ ನ ಕಪ್ ಅನ್ನು ಭಾರತ ವಿಶ್ವ ಕಪ್ ನಲ್ಲಿ ಗೆದ್ದರೆ ಅವರಿಗೆ ನೀಡಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಗಿದೆ.