ಭಟ್ಕಳ: ತಾಲೂಕಿನ ಕಾರಗದ್ದೆ ನಿವಾಸಿ ಖುಷಿ ಈಶ್ವರ ನಾಯ್ಕ ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದಳು.
ಈಕೆಯನ್ನು ಆಸ್ಪತ್ರೆಗೆ ತರುವಾಗ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಬಾಲಕಿ ಮನೆಯ ಪಕ್ಕದಲ್ಲಿದ್ದ ತೋಟಕ್ಕೆ ಆಟವಾಡಲು ತೆರಳಿದ್ದಳು.ಕಾಡು ಪ್ರಾಣಿಗಳು ಬರಬಾರದೆಂದು ತೋಟಕ್ಕೆ ಐಬಿಎಕ್ಷ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ತಂತಿ ಸ್ಪರ್ಶಿಸಿದ ಮಗು ತೋಟದಲ್ಲಿ ಹರಿಯುವ ನೀರಿನ ಸಂಪರ್ಕಕ್ಕೆ ಬಂದಿದ್ದು ವಿದ್ಯುತ್ ಶಾಕ್ ಬಲವಾಗಿ ತಗುಲಿದೆ ಎನ್ನಲಾಗಿದೆ.
ಅದನ್ನು ನೋಡಿದ ಸ್ಥಳೀಯರು ಮಗುವನ್ನು ವಿದ್ಯುತ್ ಸಂಪರ್ಕದಿಂದ ತಪ್ಪಿಸಿ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದೆ ಎನ್ನಲಾಗಿದೆ.
ಐಬಿಎಕ್ಷ ಬಾಕ್ಷನಿಂದ ವಿದ್ಯುತ್ ಸಂಪರ್ಕ ಪಡೆಯುವದು ಕಾನೂನು ಬಾಹಿರವಾಗಿದ್ದು ಈ ಕುರಿತು ವಿದ್ಯುತ್ ಇಲಾಖೆ ಅನುಮತಿ ಇಲ್ಲ. ತೋಟದ ಮಾಲಿಕ ಶುಕ್ರ ಮಂಗಳ ಗೊಂಡ ಇವರು ವಿರುದ್ದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.