ಮೇಷ:- ಮಾತುಕತೆ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಯಾರು ಮುಂದೆ ಬರಬೇಕು ಎನ್ನುವ ಅಹಂನಿಂದ ಸಮಸ್ಯೆಗಳು ಖಾಯಂ ಆಗಿ ಉಳಿದು ಬಿಡುವ ಸಾಧ್ಯತೆ ಇದೆ. ಹಾಗಾಗಿ ನೀವೇ ಒಂದು ಹೆಜ್ಜೆ ಮುಂದಿಟ್ಟು ಪರಿಹಾರ ಕಂಡುಕೊಳ್ಳಿ.


ವೃಷಭ:- ಬಂಧುಗಳು ತರಲೆ ಎಬ್ಬಿಸಿ ಕೆಲ ಆತಂಕದ ಕ್ಷ ಣಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಆದರೆ ಗುರು ಹಿರಿಯರ ಆಶೀರ್ವಾದದ ಬಲ ನಿಮ್ಮ ಮೇಲೆ ಇರುವುದರಿಂದ ಸೂಕ್ತ ಮಾತುಗಾರಿಕೆಯಿಂದ ತರಲೆ ಎಬ್ಬಿಸುವ ಬಂಧುಗಳನ್ನು ತಣ್ಣಗೆ ಮಾಡುವಿರಿ.


ಮಿಥುನ:-ರಾಜಿ ಸಂಧಾನದ ಮೂಲಕ ನಿಮ್ಮ ಆಸ್ತಿಯ ಅನೇಕ ರೀತಿಯ ವ್ಯಾಜ್ಯಗಳ ಇತ್ಯರ್ಥಕ್ಕೆ ಸೂಕ್ತ ಅವಕಾಶಗಳು ಲಭ್ಯವಾಗಲಿವೆ. ಅಂತಹ ಸೂಕ್ತ ಅವಕಾಶಗಳನ್ನು ಬಳಸಿಕೊಂಡು ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಿ.

ಕಟಕ:- ರಾಜಕೀಯವಾದ ನಿಮ್ಮ ಚಟುವಟಿಕೆಗಳು ಅಪರೂಪದ ಸಿದ್ಧಿ ತರುವಲ್ಲಿ ಯಶಸ್ವಿಯಾಗಲಿವೆ. ಇದರಿಂದ ಸಾಮಾಜಿಕವಾಗಿಯೂ ಮತ್ತು ರಾಜಕೀಯವಾಗಿಯೂ ಗುರುತಿಸಿಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

RELATED ARTICLES  ಇಂದಿನ ನಿಮ್ಮ ದಿನ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ದಿನಾಂಕ 30/03/2019 ರ ದಿನ ಭವಿಷ್ಯ.

ಸಿಂಹ:- ಪಾಲುದಾರಿಕೆಯ ವಹಿವಾಟಿನಲ್ಲಿ ಬಿಸ್ನೆಸ್‌ ವಿಸ್ತರಿಸಿಕೊಳ್ಳಬೇಕೆಂಬ ನಿಮ್ಮ ಕನಸು ಶೀಘ್ರ ನನಸಾಗಲಿದೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುವಿರಿ. ಇದಕ್ಕೆ ನಿಮ್ಮ ಮಡದಿ ಮಕ್ಕಳ ಸಹಮತವೂ ದೊರೆಯುವುದು.

ಕನ್ಯಾ:- ಕಟ್ಟಡ ನಿರ್ಮಾಣ ಪರಿಣಿತರಿಗೆ ಹಾಗೂ ಕುಸುರಿ ಕಲೆ, ಬಣ್ಣಗಾರಿಕೆ ವೃತ್ತಿಯಲ್ಲಿ ಇರುವವರಿಗೆ ಸುಖ ದಿನವಾಗಿರುವುದು. ಅವರು ಬಯಸಿದಂತೆ ಕಾರ್ಯಗಳು ಕೈಗೂಡುವವು ಮತ್ತು ಅದಕ್ಕೆ ತಕ್ಕಂತೆ ವರಮಾನವೂ ಬಂದು ಸೇರಲಿದೆ.

ತುಲಾ:- ಆಸೆಯನ್ನು ತಡೆಯಿರಿ. ಒಡವೆ, ಬಂಗಾರ, ಅಮೂಲ್ಯ ಹರಳುಗಳ ಖರೀದಿಯಿಂದ ಸಂದಿಗ್ಧಕ್ಕೆ ಸಿಲುಕಿಕೊಳ್ಳುವಿರಿ. ಈಗಾಗಲೇ ಕೈಗಡ ತೆಗೆದುಕೊಂಡಿರುವವರು ಹಣವನ್ನು ಮರುಪಾವತಿಸದೆ ಒಡವೆ ಖರೀದಿಸುವುದು ಸೂಕ್ತವಲ್ಲ.

ವೃಶ್ಚಿಕ:- ನನ್ನ ವಿಚಾರಗಳು ಗೆಲ್ಲಲಿ ಎಂಬ ನಿಮ್ಮ ಆಶಯದಲ್ಲಿ ತಪ್ಪೇನಿಲ್ಲ. ಆದರೆ ಅದಕ್ಕೆ ಗ್ರಹಗತಿಗಳು ಕೂಡಾ ಸಹಕರಿಸಬೇಕಿದೆ. ನವಗ್ರಹಗಳ ಆರಾಧನೆ ಜತೆ ಕೆಲ ಯುಕ್ತಿಗಳನ್ನು ಪ್ರದರ್ಶಿಸಿದಲ್ಲಿ ನಿಮ್ಮ ಕನಸು ನನಸಾಗುವುದು.

RELATED ARTICLES  ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರಿಂದ ಅನೇಕ ಗ್ರಾಮಗಳ ಭೇಟಿ: ಜೋರಾಗಿದೆ ಮತ ಬೇಟೆ.

ಧನುಸ್ಸು:- ಮನಸ್ಸಿಗೆ ಬಂದಂತೆ ಮಾತನಾಡಲು ಪ್ರಯತ್ನಿಸಬೇಡಿ. ಜನ್ಮಸ್ಥ ಶನಿ ಅನೇಕ ಅಡೆತಡೆಗಳನ್ನು ತಂದೊಡ್ಡುವ ಪ್ರಕ್ರಿಯೆಯಲ್ಲಿರುವರು. ದುಷ್ಟ ಬುದ್ಧಿವಂತರಿಂದ ತೊಂದರೆಗಳು ಅಧಿಕವಾಗಲಿವೆ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ.

ಮಕರ:- ಇಂದಿನ ಕೆಲಸ ಇಂದೇ ಮಾಡಿ ಮುಗಿಸಿ. ಒಳಿತಿಗೆ ಬೇಕಾದ ದಾರಿ ಸಿಗಲು ಅವಕಾಶಗಳು ಹೇರಳವಾಗಿ ದೊರೆಯುವವು. ವಿವಿಧ ಮೂಲಗಳಿಂದ ಹಣಕಾಸು ದೊರೆಯುವುದು. ಮನೆಯಲ್ಲಿ ನೆಮ್ಮದಿ ವಾತಾವರಣ ಮೂಡುವುದು.

ಕುಂಭ:- ಸಾಮಾಜಿಕವಾದ ಅನೇಕ ರಂಗಗಳಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುತ್ತೀರಿ ಮತ್ತು ನಾಯಕತ್ವದಿಂದ ಎಲ್ಲರ ಮನ ಗೆಲ್ಲುವಿರಿ. ಇದರಿಂದ ನಿಮ್ಮ ಬಂಧುಬಾಂಧವರಿಗೆ, ಸ್ನೇಹಿತರಿಗೆ, ತಂದೆ-ತಾಯಿಗೆ ಖುಷಿ ಆಗುವುದು.

ಮೀನ:-ನಿಮ್ಮ ಇಷ್ಟದ ಬಾಳಸಂಗಾತಿಯ ಆಯ್ಕೆಗೆ ನೆರವಾಗಲು ಸೂಕ್ತ ದಿನವಾಗಿದೆ. ಅವಿವಾಹಿತರಿಗೆ ಸೂಕ್ತ ಸಂಗಾತಿ ದೊರೆಯುವುದರಿಂದ ಮನೆಯಲ್ಲಿ ಮತ್ತು ಮನದಲ್ಲಿ ಸಂತಸ ಮೂಡುವುದು.