ಕುಮಟಾ: ಇಲ್ಲಿನ ಡಯಟ್ ನಲ್ಲಿ ನಡೆಯುತ್ತಿರುವ ವಿಜ್ಞಾನ ಮತ್ತು ಇಂಗ್ಲಿಷ್ ತರಬೇತಿಯಲ್ಲಿ ಪಾಲ್ಗೊಂಡ ಶಿಕ್ಷಕರು ಪದವಿ ಶಿಕ್ಷಕರ ವೃಂದದ ಬದಲಾವಣೆ ವಿರೋಧಿಸಿ ತಮಗೆ ನ್ಯಾಯ ಒದಗಿಸಬೇಕೆಂದು ಉಪನಿರ್ದೇಶಕರಾದ ಶ್ರೀ ಈಶ್ವರ ನಾಯ್ಕ ರವರಿಗೆ ಮನವಿಯನ್ನು ಸಲ್ಲಿಸಿ ತರಬೇತಿಯನ್ನು ಬಹಿಷ್ಕರಿಸಿ ಹೊರನಡೆದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಕಾರವಾರ ಜಿಲ್ಲಾ ಅಧ್ಯಕ್ಷ ನಾರಾಯಣ ಗಾಂವಕರ್, ಕುಮಟಾ ತಾಲೂಕು ಪದವಿಧರ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ್ ಗೌಡ, ಕಾರ್ಯದರ್ಶಿ ಎಮ್ ಎಮ್ ನಾಯ್ಕ ಸೇರಿದಂತೆ ಕುಮಟಾ ಅಂಕೋಲಾ ಕಾರವಾರ ಹೊನ್ನಾವರ ಭಟ್ಕಳ ತಾಲೂಕಿನ ನೂರಾರು ಪದವೀಧರ ಶಿಕ್ಷಕರು ಹಾಜರಿದ್ದರು.
ವಿಡಿಯೋ