ಕಾರವಾರ:ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಆಹಾರಕ್ಕಾಗಿ ಮೀನುಗಳಿಗೆ ಹೇಗೆ ಬೇಡಿಕೆಯಿದೆಯೋ ಹಾಗೆಯೇ ಕಪ್ಪೆಗಳಿಗೂ ಬೇಡಿಕೆ ಹೆಚ್ಚಾಗತೊಡಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿರುವ ಇಂಡಿಯನ್ ಬುಲ್ ಫ್ರಾಗ್ ಕಪ್ಪೆಗಳ ಮಾಂಸಕ್ಕೆ ನೆರೆಯ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.

RELATED ARTICLES  ಯಕ್ಷಗಾನದ ಮೂಲಕ ಗಮನ ಸೆಳೆದ ಮಾಗೋಡಿನ ಕು. ಶ್ರೀಗಣೇಶ ಸುಬ್ರಾಯ ಹೆಗಡೆ

ಜಂಪಿಂಗ್ ಚಿಕನ್ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪೆಗಳ ಮಾಂಸಕ್ಕೆ ಗೋವಾ ಜನತೆ ಅಷ್ಟೇ ಅಲ್ಲದೆ ವಿದೇಶಿಯರೂ ಕೂಡ ಮಾರುಹೋಗಿದ್ದಾರಂತೆ.

ಈಗಾಗಲೇ ಕರ್ನಾಟಕ, ಗೋವಾದಲ್ಲಿ ಈ ಕಪ್ಪೆಗಳ ಬೇಟೆಗೆ ನಿಷೇಧ ಹೇರಲಾಗಿದೆ. ಹೀಗಾಗಿ ಈ ಕಪ್ಪೆಗಳ ಅಕ್ರಮ ಸಾಗಾಟದ ಮೂಲಕ ರೆಸ್ಟೋರೆಂಟ್ ತಲುಪುತ್ತಿವೆ. ಬಳಿಕ ಜಂಪಿಂಗ್ ಚಿಕನ್ ಎಂಬ ಹೆಸರಿನ ಖಾದ್ಯಗಳಾಗಿ ಮಾರಾಟ ಮಾರಾಟವಾಗುತ್ತಿವೆ.

RELATED ARTICLES  ಎಲ್.ಇ.ಡಿ.ಬಲ್ಬ್ ವಿತರಣೆ ಯೋಜನೆಯಲ್ಲಿ ಅವ್ಯವಹಾರ

ಗೋವಾದಲ್ಲಿ ಗ್ರಾಹಕರನ್ನು ತೃಪ್ತಿ ಪಡಿಸಲು ಹೊಟೆಲ್ ನವರು ಕರ್ನಾಟಕದ ಕಾರವಾರದ ಕಡೆ ಮುಖ ಮಾಡಿದ್ದಾರೆ. ಗಾತ್ರಕ್ಕೆ ಅನುಗುಣವಾಗಿ ಒಂದು ಕಪ್ಪೆಯ ಬೆಲೆ 600 ರಿಂದ 1000 ರೂ. ಮಾರಾಟವಾಗುತ್ತದೆ ಎನ್ನಲಾಗಿದೆ.