ಕುಮಟಾ:ಅಘನಾಶಿನಿ ಮತ್ತು ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಪ್ರಾಸ್ತಾವಿತ ಯೋಜನೆಯ ವಿರುದ್ಧ ಆಂದೋಲನ ನಡೆಸಲು ಸಂಘಟಿತವಾದ ಉತ್ತರಕನ್ನಡ ಉಳಿಸಿ ಸಮಿತಿಯ ಮೊದಲ ಸಭೆ ಮತ್ತು ಪತ್ರಿಕಾಗೋಷ್ಠಿ ಕುಮಟಾದಲ್ಲಿ ಇಂದು ನಡೆಯಿತು.
ಈ ಸಂದರ್ಭದಲ್ಲಿ ಅಘನಾಶಿನಿ, ಶರಾವತಿ ನದಿಯ ಕುರಿತು ವಿಶೇಷ ಅಧ್ಯಯನ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ ಸುಭಾಸ್‍ಚಂದ್ರನ್ ಉದ್ದೇಶಿತ ಯೋಜನೆ ಜಾರಿಯಾದರೆ ಆಗುವ ಅನಾಹುತಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಶರಾವತಿ ಮತ್ತು ಅಘನಾಶಿನಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯು ಅನುಷ್ಠಾನಗೊಳ್ಳುವುದು ಉತ್ತರಕನ್ನಡದ ಮೇಲೆ ಮಾಡುವ ಅತ್ಯಾಚಾರಕ್ಕೆ ಸಮನಾದುದು. ಸಂಪೂರ್ಣ ಅವೈಜ್ಞಾನಿ ಮತ್ತು ಅಸಮರ್ಪಕವಾದ ಈ ಯೋಜನೆಯನ್ನು ಸರಕಾರ ಕೈಬಿಡಬೇಕು ಎಂದು ಉತ್ತರಕನ್ನಡ ಉಳಿಸಿ ಹೋರಾಟ ಸಮಿತಿಯ ಗೌರವ ಮಾರ್ಗದರ್ಶಕ ಮುರಳೀಧರ ಪ್ರಭು ಗುಡುಗಿದರು.
ಸಮಿತಿಯ ಕಾನೂನು ವಿಭಾಗದ ಮಾರ್ಗದರ್ಶಕ, ವಕೀಲ ಆರ್.ಜಿ.ನಾಯ್ಕ
ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು, ಪರಿಸರ ಹೋರಾಟಗಾರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು,ಗಣ್ಯರು, ಜಿಲ್ಲೆಯ ಶಾಸಕರುಗಳು, ಜಿ,ಪಂ ಸದಸ್ಯರುಗಳು ಮತ್ತು ಎಲ್ಲಾ ಸಮಾಜದ ಮುಖಂಡರು, ಮೀನುಗಾರ ಮುಖಂಡರು, ಕೃಷಿಕರು ಹೀಗೆ ಸಮಾಜದ ಎಲ್ಲರ ಪ್ರತಿನಿಧಿಗಳ 200ಕ್ಕೂ ಹೆಚ್ಚು ಜನರ ಗೌರವ ಸಲಹಾಸಮಿತಿ, ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಗೌರವಾಧ್ಯಕ್ಷತೆಯ, ಜನಪರ ವೇದಿಕೆಯ ಅಧ್ಯಕ್ಷ ಎಮ್ ಜಿ ಭಟ್ಟ ಅಧ್ಯಕ್ಷತೆಯಲ್ಲಿ 60ಕ್ಕೂ ಹೆಚ್ಚು ಜನರ ವಿವಿಧ ಸಮಿತಿಗಳ ಮುಂದಾಳತ್ವದಲ್ಲಿ ಉತ್ತರಕನ್ನಡ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತು. ಪತ್ರಿಕಾಗೋಷ್ಠಿಯಲ್ಲಿ 50ಕ್ಕೂ ಹೆಚ್ಚು ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು. ಅಧ್ಯಕ್ಷ ಎಮ್ ಜಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.