ಮೇಷ:- ನೂರಕ್ಕೆ ನೂರರಷ್ಟು ಯಶಸ್ಸು ನಿರೀಕ್ಷಿಸಿ ನಂತರ ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ಸಿನತ್ತ ಪಯಣಿಸುವವು. ಬಂಧುವರ್ಗ ಮತ್ತು ಸ್ನೇಹಿತವರ್ಗವೂ ನಿಮ್ಮನ್ನು ಪ್ರಶಂಸಿಸುವರು.
ವೃಷಭ:- ಬೇಕಾಗಿರದ ಖರ್ಚನ್ನು ಮೈಮೇಲೆ ಎಳೆದುಕೊಳ್ಳದಿರಿ. ಅನವಶ್ಯಕ ವ್ಯಂಗ್ಯಮಾತುಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇರುವುದರಿಂದ ಯಾರನ್ನೂ ಅಪಹಾಸ್ಯ ಮಾಡದಿರಿ. ಈ ರೀತಿ ಮಾತುಗಳಿಂದ ಇತರರಿಗೆ ನೋವು ಉಂಟು ಮಾಡದಿರಿ.
ಮಿಥುನ:- ಪರಿಣಾಮಕಾರಿಯಾದ ಮಾತುಗಳಿಂದ ಜನರ ಗಮನ ಸೆಳೆಯಬಲ್ಲಿರಿ. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವಂತೆ ಕೆಲವರನ್ನು ನಿಯಂತ್ರಿಸಲು ಮಾತಿನ ವರಸೆ ಬದಲಿಸಬೇಕಿದೆ. ಇದರಿಂದ ನಿಮ್ಮ ಗೌರವ, ಘನತೆಗೆ ಧಕ್ಕೆ ಬರುವುದಿಲ್ಲ.
ಕಟಕ:- ಸುತ್ತಲಿನ ಜನರನ್ನು ಮಾತನಾಡಿಸಿ ಆದರಿಸುವ, ಗುಣವನ್ನು ತೋರುವುದರಿಂದ ವಿಶ್ವಾಸ ಗಳಿಸಿಕೊಳ್ಳುವಿರಿ. ಸಂಜೆಯ ವೇಳೆಗೆ ಏಕೋ ಶಿರೋವೇದನೆ ಎನಿಸುವುದು. ಸ್ವಲ್ಪ ರಿಲ್ಯಾಕ್ಸ್ ಆಗಿರಿ. ಬೆಳಗಿನಿಂದ ನಡೆದ ಶುಭ ಘಟನೆಗಳನ್ನು ಮೆಲುಕು ಹಾಕಿ.
ಸಿಂಹ:- ನಿಮ್ಮಿಂದಲೇ ಎಲ್ಲವೂ ಸಾಧ್ಯವಾದದ್ದು ಎಂಬುದನ್ನು ನೀವೇ ಹೇಳಬೇಡಿ. ಯಶಸ್ಸಿನ ಸಂಭ್ರಮಕ್ಕೆ ಅನೇಕರು ಕಾರಣರಿದ್ದಾರೆ. ಅವರೆಲ್ಲರನ್ನು ನೆನಪು ಮಾಡಿಕೊಂಡು ಅವರಿಗೆ ಧನ್ಯವಾದ ತಿಳಿಸಿ. ಇದರಿಂದ ನೀವು ಸಾಮಾಜಿಕವಾಗಿ ಎತ್ತರಕ್ಕೆ ಏರುವಿರಿ.
ಕನ್ಯಾ:- ಅನೇಕ ದಿನಗಳಿಂದ ಶ್ರಮವಿರದ ಧನಲಾಭಕ್ಕಾಗಿ ಕಾತರಿಸಿ ಸೋತಿದ್ದೀರಿ. ಹಾಗಂತ ನಿರಾಶರಾಗುವುದು ಬೇಡ. ಯಾವ ಸಮಯದಲ್ಲಿ ಭಗವಂತ ನಿಮಗೆ ನೀಡಬೇಕೆಂದಿರುವನೋ ಆಗಷ್ಟೇ ಅದು ನಿಮಗೆ ದಕ್ಕಲು ಸಾಧ್ಯ. ಸದ್ಯಕ್ಕೆ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಬೇಡ.
ತುಲಾ:- ತಾಂತ್ರಿಕ ತಜ್ಞರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ. ನಿಮ್ಮ ಕಾರ್ಯಗಳನ್ನು ಮೇಲಧಿಕಾರಿಗಳು ಪ್ರಶಂಸಿಸುವರು. ಇದರಿಂದ ಮತ್ತಷ್ಟು ಕೆಲಸಗಳು ನಿಮ್ಮನ್ನು ಕೈಬೀಸಿ ಕರೆಯುವವು. ಹಣವನ್ನು ಹಿತಮಿತವಾಗಿ ಬಳಸಿ.
ವೃಶ್ಚಿಕ:- ದೂರದೂರಿನ ಗೆಳೆಯರ ಆಗಮನದಿಂದ ಸಂತೋಷಕ್ಕೆ ಕಾರಣವಿದೆ. ಆ ಸಂತೋಷದ ಭರದಲ್ಲಿ ನಿತ್ಯ ನೈಮಿತ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತದಿರಿ. ನಿಮ್ಮ ದೈನಂದಿನ ಕೆಲಸಗಳಿಗೆ ಸಹಾಯ ಮಾಡಲೆಂದೇ ಆ ಗೆಳೆಯರು ನಿಮ್ಮನ್ನು ಸೇರಿಕೊಳ್ಳುವರು.
ಧನುಸ್ಸು:- ಈಚಲು ಮರದ ಕೆಳಗೆ ಮಜ್ಜಿಗೆ ಕುಡಿಯುವ ಸಾಹಸ ಬೇಡ. ನೀವು ಎಷ್ಟೇ ಪ್ರಾಮಾಣಿಕರಿದ್ದರೂ ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವ ಮಂದಿಯೇ ಜಾಸ್ತಿ. ಕೆಲವೊಮ್ಮೆ ನಾವು ಸಮಾಜಕ್ಕೆ ಹೆದರಿಯಾದರೂ ಕಾಪಟ್ಯ ಪ್ರದರ್ಶಿಸಬೇಕಾಗುವುದು.
ಮಕರ:- ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ನಿಮ್ಮ ಸಂಗಾತಿಯ ಸಕಾಲಿಕ ಸಲಹೆಗಳು ಸಹಕಾರಿಯಾಗಲಿವೆ. ಹಾಗಾಗಿ ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷಭರಿತ ವಾತಾವರಣ ನಿರ್ಮಾಣವಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
ಕುಂಭ:- ಅಂದುಕೊಂಡ ಕಾರ್ಯಗಳಲ್ಲಿ ಪದೇಪದೆ ಹಿನ್ನಡೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿಘ್ನನಾಶಕ ವಿನಾಯಕನನ್ನು ಭಜಿಸುವುದು ಒಳ್ಳೆಯದು. ಅದರ ಜತೆಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ಮೀನ:- ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ಮಡದಿಯ ಕೋಪತಾಪಗಳನ್ನು ಅರ್ಥಮಾಡಿಕೊಂಡು ಅವರ ಬೇಕು ಬೇಡಗಳತ್ತ ಗಮನ ಹರಿಸಿ. ಮಕ್ಕಳು ಕೆಲ ವಿಷಯಗಳಲ್ಲಿ ಬೇಸರ ತರಿಸುವ ಸಾಧ್ಯತೆ ಇದೆ