ಗೋಕರ್ಣ: ವಾಹನಗಳಲ್ಲಿ ಗೋ ಸಾಗಾಣಿಕೆ ಮಾಡುವವರ ಜಾಲ ಬೆಳೆಯುತ್ತಿದ್ದು ಅದಕ್ಕರ ಸಾಕ್ಷಿ ಎಂಬಂತೆ ಗೋಕರ್ಣ ಸಮೀಪ ಗೋ ಕಳ್ಳಸಾಗಣಿಕೆಗೆ ಬಂದ ಕಾರು ಪೋಲಿಸ್ ವಶಕ್ಕೆ ಸಿಕ್ಕಿದೆ.

ಬೆಟ್ಕುಳಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಉಡುಪಿ ನೊಂದಣಿ ಹೊಂದಿರುವ ಕಾರನ್ನು ನಿಲ್ಲಿಸಿಕೊಂಡು ಮಲಗಿದ್ದ ಸಮಯದಲ್ಲಿ ರಾತ್ರಿಯಲ್ಲಿ ಗಸ್ತಿನಲ್ಲಿ ಸಂಚರಿಸುತ್ತಿದ್ದ ಹೈವೇ ಪೆಟ್ರೋಲ್ ಪೋಲಿಸರ‌ ಕಣ್ಣಿಗೆ ಈ ಗಾಡಿ ಬಿದ್ದಿದೆ.

RELATED ARTICLES  ಗಗನಕ್ಕೇರಿದ ತರಕಾರಿ ಬೆಲೆ: ಟೊಮೆಟೋ, ಕ್ಯಾರೆಟ್ ಬೆಲೆಗೆ ಕಂಗಾಲಾದ ಗ್ರಾಹಕರು

ಈ ವೇಳೆ ಕಾರನ್ನು ತಪಾಸಣೆ ಮಾಡಲು ಕಾರಿನ ಹತ್ತಿರ ಬರುತ್ತಿದ್ದ ವೇಳೆಯಲ್ಲಿ ಗೋ ಕಳ್ಳರು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ವಾಹನ ಅಕ್ರಮವಾಗಿ ಗೋ ಸಾಗಾಣಿಕೆ ವಾಹನ ವೆಂದು ತಪಾಸಣೆ ಬಳಿಕ ತಿಳಿದುಬಂದಿದೆ.

RELATED ARTICLES  ಮದುವೆ ಮನೆಯಲ್ಲಿ ಮೊಳಗಿತು ನಿನಾದದ ಪ್ರೇಮ ಕವಿತೆಗಳ ಮಧುರ ಗಾನ.