ನವದೆಹಲಿ : ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನೇಮಕಾತಿಗಾಗಿ ಐಬಿಪಿಎಸ್ ನಡೆಸುವ ಪರೀಕ್ಷೆಯನ್ನು ಇನ್ನೂ ಮುಂದೆ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಇಂದು 2018-19ರ ಆರ್ಥಿಕ ಸಮೀಕ್ಷೆ ಮಂಡನೆ ವೇಳೆ ತಿಳಿಸಿದರು ಎಂದು ತಿಳದುಬಂದಿದೆ. 

ಇನ್ಸ್‌ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌(ಐಬಿಪಿಎಸ್‌) ನಡೆಸುವ ಐಬಿಪಿಎಸ್‌ ಆರ್‌ಆರ್‌ಬಿ ಬ್ಯಾಂಕಿಂಗ್ ಪರೀಕ್ಷೆ ಇನ್ಮುಂದೆ ಕನ್ನಡ ಸೇರಿದಂತೆ13 ಸ್ಥಳೀಯ ಭಾಷೆಗಳಲ್ಲಿ ಐಬಿಪಿಎಸ್‌ ಪರೀಕ್ಷೆ ಬರೆಯಬಹುದಾಗಿದೆ.

RELATED ARTICLES  ದಿನಾಂಕ 15/06/2019 ರ ರಾಶಿ ಭವಿಷ್ಯ ಇಲ್ಲಿದೆ.

ಇಂದು  ಇದರ ಬಗ್ಗೆ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭಾ ಸದ್ಯಸ ಜಿಸಿ ಚಂದ್ರಶೇಖರ್ ಅವರು ಸೇರಿದಂತೆ ಅನೇಕ ಮಂದಿ ಸಂಸದರು ಸಂಸತ್ತಿನ ಕಲಾಪದ ಶೂನ್ಯ ಅವಧಿಯಲ್ಲಿ ಈ ಬಗ್ಗೆ ತಮ್ಮ ಸೆಳೆದಿದ್ದರು.

ಅಸ್ಸಾಂ, ಬೆಂಗಾಳಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ , ಪಂಜಾಬಿ, ತೆಲುಗು, ತಮಿಳು ಮತ್ತು ಉರ್ದುವಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದರು. 

RELATED ARTICLES  ಸರಕಾರದ ವಿರುದ್ದ ಮುತಾಲಿಕ್ ವಾಗ್ದಾಳಿ

 ಈ ಬಗ್ಗೆ ಕೇಂದ್ರ ಸರಕಾರ ಗಂಭಿರವಾಗಿ ಪರಿಗಣಿಸಿದ್ದು, ಇನ್ಮುಂದೆ ಸ್ಥಳೀಯ ಭಾಷೆಗಳಲ್ಲಿ ಇನ್ಸ್‌ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌(ಐಬಿಪಿಎಸ್‌) ನಡೆಸುವ ಐಬಿಪಿಎಸ್‌ ಆರ್‌ಆರ್‌ಬಿ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು ಎಂದು ವರದಿಯಾಗಿದೆ.