ಮೇಷ:- ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬುದನ್ನು ನೆನಪಿಸಿಕೊಳ್ಳಿ. ಹೊಸ ಪರಿಸರ ಅಥವಾ ಹೊಸ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯಿರಿ. ಬದಲಾವಣೆಗೆ ಅವಕಾಶ ಇರಲಿ. ಇದರಿಂದ ಮಹತ್ತರವಾದುದನ್ನು ಸಾಧಿಸಬಹುದು.


ವೃಷಭ:- ವ್ಯಾಜ್ಯಗಳು ಇದ್ದರೂ ಗೊಂದಲಕ್ಕೆ ಅವಕಾಶ ಬೇಡ. ಸೂಕ್ತವಾದ ಸ್ನೇಹಿತರ ಸಹಾಯದಿಂದ ಒತ್ತಡಗಳಿಗೆ ವಿರಾಮ ಹಾಕುವಿರಿ. ಮಕ್ಕಳ ಪ್ರಗತಿ ಮತ್ತು ಮೊಮ್ಮಕ್ಕಳ ತುಂಟತನ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುವುದು.


ಮಿಥುನ:- ಕೆಲಸದ ಸ್ಥಳದಲ್ಲಿ ನಿಮ್ಮ ಬಾಸ್‌ ಅನವಶ್ಯಕ ಕಿರಿಕಿರಿ ಎಬ್ಬಿಸಿದರೂ ಕೂಗಾಡಬೇಡಿ. ಮೈಕೊಡವಿ ಅವರು ಮೆಚ್ಚುವಂತೆ ಕೆಲಸ ಮಾಡಿ. ಅದರಿಂದ ಪ್ರಶಂಸೆ ಪಡೆಯುವಿರಿ. ಅನ್ಯರೊಡನೆ ಸುಮ್ಮನೆ ವಾದ ವಿವಾದ ಮಾಡದಿರಿ.

ಕಟಕ:- ಕುಲದೇವರ ದರ್ಶನ ಪಡೆಯಿರಿ ಮತ್ತು ಆಂಜನೇಯ ಸ್ವಾಮಿ ಸೋತ್ರ ಪಠಿಸಿ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಹಿರಿಯರ ಆಶೀರ್ವಾದವೂ ದೊರೆಯುವ ಸಾಧ್ಯತೆ ಇದೆ.

ಸಿಂಹ:- ಮುಂದಿನ ದಿನಗಳ ಪ್ರಮುಖ ಕಾರ್ಯ ಯೋಜನೆಗಳಿಗಾಗಿನ ಪೂರ್ವಭಾವಿ ಮಾತುಕತೆಗಳಿಗೆ ಸಕಾಲವಾಗಿದೆ. ನಿಮ್ಮ ಬಳಗದ ಸ್ನೇಹಿತರು ಮತ್ತು ಸಮಾನ ಮನಸ್ಕರೊಡನೆ ಕುಳಿತು ಚರ್ಚಿಸಿ ಕಾರ್ಯಕ್ರಮಗಳ ರೂಪರೇಷೆಗಳನ್ನು ನಿರ್ಧರಿಸಿ.

RELATED ARTICLES  ದೇಶದ ಜನತೆಗೆ ವಿಶೇಷ ಪ್ಯಾಕೇಜ್: ಮೋದಿ ಘೋಷಣೆ

ಕನ್ಯಾ:- ನೆರೆಹೊರೆಯವರಲ್ಲಿ ಹೆಚ್ಚಿನ ಮಾತುಕತೆಯಿರಲಿ. ಅದು ಸ್ನೇಹಪೂರ್ಣವಾಗಿ ಮತ್ತು ಸೌಜನ್ಯ ಪೂರಕವಾಗಿರಲಿ. ಆದರೆ ಎಲ್ಲರನ್ನೂ ಪೂರ್ತಿಯಾಗಿ ನಂಬದಿರಿ. ಸಲಹೆಗಳು ನಿಮ್ಮದು ತೀರ್ಮಾನ ನನ್ನದು ಎಂಬ ಧೋರಣೆ ಇರಲಿ.

ತುಲಾ:- ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬುವ ನಿಮ್ಮ ಮನಸ್ಥಿತಿ ಪರಿವರ್ತಿಸಿಕೊಳ್ಳಬೇಕಾಗಿದೆ. ಆದಷ್ಟೂ ಹಣವನ್ನು ಉಳಿತಾಯ ಮಾಡುವ ಯೋಜನೆ ಬಗ್ಗೆ ಗಮನ ಹರಿಸಿ.

ವೃಶ್ಚಿಕ:- ಪ್ರತ್ಯೇಕ ಪ್ರಕರಣಗಳಲ್ಲಿ ಸಿಹಿ ಮತ್ತು ಕಹಿ ಸುದ್ದಿಗಳೆರಡರ ಮಿಶ್ರಣ ಲಭ್ಯವಾಗಲಿದೆ. ನೀವು ಹಮ್ಮಿಕೊಳ್ಳಬೇಕೆಂದಿರುವ ಬೃಹತ್‌ ಯೋಜನೆಗೆ ಸರ್ಕಾರ ಅನುಮೋದನೆ ನೀಡುವ ಸಿಹಿ ಸುದ್ದಿ ಒಂದೆಡೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಹಣದ ಕೊರತೆಯು ಕಹಿ ಎನಿಸುವುದು.

ಧನುಸ್ಸು:- ನಿಮ್ಮದೇ ಆದ ಮನೆ ರೂಪಿಸುವ ವಿಚಾರದಲ್ಲಿ ಮಹತ್ವದ ಬೆಳವಣಿಗೆಯೊಂದು ಸಹಕಾರಿಯಾಗಲಿದೆ. ಆದರೆ ಅದಕ್ಕಾಗಿ ಸಾಲ ಮಾಡಬೇಕಾಗುವುದು. ಎಷ್ಟೇ ಶ್ರೀಮಂತಿಕೆ ಇದ್ದರೂ ಮನೆ ಕಟ್ಟುವ ವಿಚಾರದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾಲ ಮಾಡುವರು.

RELATED ARTICLES  ನೀರು ತುಂಬಿದ್ದ ಬಕೆಟ್ ಗೆ ಬಿದ್ದು 11 ತಿಂಗಳ ಕಂದಮ್ಮ ಸಾವು.

ಮಕರ:- ಕಚೇರಿ ಆವರಣದಲ್ಲಿ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಸಂಚು ಬಯಲಾಗುವುದು. ಇದರಿಂದ ಬೇಸತ್ತ ನೀವು ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವ ತೀರ್ಮಾನ ಮಾಡುವಿರಿ. ಇದಕ್ಕಿಂತ ನೀವು ಬೇರೆಡೆಗೆ ವರ್ಗಾವಣೆ ಕೇಳುವುದು ಒಳ್ಳೆಯದು.

ಕುಂಭ:- ಅನೇಕ ದೊಡ್ಡ ಯೋಜನೆಗಳನ್ನು ನಿರ್ವಹಿಸಿ ಅಗಾಧವಾದುದನ್ನು ಸಂಪಾದಿಸಲು ಕಾಲಘಟ್ಟ ಸೂಕ್ತವಾಗಿದೆ. ಆದರೂ ಕಾಣದ ಯಾವುದೋ ಒಂದು ಕೈ ತಮ್ಮ ಪ್ರಗತಿಯನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ. ಗುರು ರಾಘವೇಂದ್ರರನ್ನು ಪಾಹಿ ಪ್ರಭೋ ಎಂದು ಪ್ರಾರ್ಥಿಸಿ.

ಮೀನ:- ಗೆಳೆಯರ ಬಳಿ ಸ್ನೇಹದಿಂದ ಇರುವುದು ಸೂಕ್ತ. ಆದರೆ ಯಾರಿಗೂ ಸಾಲ ಕೊಡುವುದು, ಕೊಡಿಸುವುದು ಮಾಡದಿರಿ. ನೀವೂ ಸಾಲ ಪಡೆಯದಿರಿ. ಮನೆಯ ಲೆಕ್ಕಪತ್ರ ಅಥವಾ ಕಡತಗಳ ವಿಚಾರ ವಿವಾದಗಳಿಗೆ ಕಾರಣವಾಗುವ ಸಂದರ್ಭ ಎದುರಾಗುವುದು.