ಭಟ್ಕಳ: ಮುರುಡೇಶ್ವರ ರಾ.ಹೆ.66ರಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ.

ಅತಿವೇಗದಿಂದ ಚಲಿಸುತ್ತಿದ್ದ ಬುಲೆರೋ ಕಾರ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಮೃತ ಸ್ಕೂಟರ್ ಚಾಲಕನನ್ನು  ಬೈಲೂರು ಗ್ರಾಮದ ನಿವಾಸಿ ಈಶ್ವರ ಜಟ್ಟಾ ನಾಯ್ಕಎಂದು ಗುರುತಿಸಲಾಗಿದೆ.

RELATED ARTICLES  ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ.

   ಬೈಲೂರಿನಿಂದ ಮುರುಡೇಶ್ವರಕ್ಕೆ ಹೋಗುತ್ತಿದ್ದ ಈತನ ಸ್ಕೂಟರ್ ಹಾಗೂ  ಭಟ್ಕಳದಿಂದ ಹುಬ್ಬಳ್ಳಿ ಕಡೆಗೆ ವೇಗವಾಗಿ ಹೋಗುತ್ತಿದ್ದ ಮೀನುಸಾಗಿಸುವ ಬುಲೆರೋ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.