ಕಾರವಾರ:ಕಾರವಾರ ನಗರದಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಪರಿಶೀಲನೆಗೆಂದು ತೆರಳಿದ್ದ ವೇಳೆ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಸರಿಯಾಗಿ ದಾಸ್ತಾನು ಲೆಕ್ಕ ಕೊಡದ ಸಗಟು ಮಳಿಗೆ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡ ಘಟನೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಕಾರವಾರ ಸಗಟು ಮಳಿಗೆಯಲ್ಲಿ ನಡದಿದೆ.
ಆಹಾರ ನಿಗಮದ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿ ಅವರು, ಪ್ರಸಕ್ತ ಮಾಹೆಯ ದಾಸ್ತಾನು ಮತ್ತು ವಿತರಣೆ ಕ್ರಮ ಬದ್ಧತೆ ಬಗ್ಗೆ ಪರಿಶೀಲಿಸಿದರು ಎಂದು ವರದಿಯಾಗಿದೆ.
ಸಗಟು ಮಳಿಗೆಯಲ್ಲಿ ನಮೂದಿಸಿರುವ ಮಾಹಿತಿಗೂ ಹಾಗೂ ದಾಸ್ತಾನು ವಹಿಗೂ ತಾಳೆ ಆಗದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ವ್ಯವಸ್ಥಾಪಕರಿಗೆ ಸೂಚಿಸಿದರು. ಲೆಕ್ಕ ಪರಿಶೀಲನೆ ಸಂದರ್ಭಲ್ಲಿ ವ್ಯವಸ್ಥಾಪಕರಿಂದ ಸರಿಯಾದ ಪ್ರತ್ಯುತ್ತರ ಬಾರದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಧಿಕಾರಿಯವರು ತೀವ್ರ ತರಾಟೆಗೆ ತೆಗೆದುಕೊಂಡರು.
ಸೂಚನಾ ಫಲಕದಲ್ಲಿರುವ ಮಾಹಿತಿಗೂ ದಾಸ್ತಾನು ವಹಿಗೂ ತಾಳೆಯಾಗುತ್ತಿಲ್ಲರುವುದರಿಂದ ನಿಮ್ಮ ವಿರುದ್ಧ ಯಾಕೆ ಕ್ರಮಕ್ಕೆ ಜರುಗಿಸಬಾರದು ಎಂದು ಹೇಳಿದರು ಎಂದು ವರದಿಯಾಗಿದೆ.ಆದರೆ ಅಧಿಕಾರಿಗಳು ಎಲ್ಲವೂ ಸರಿಯಾಗಿದೆ ಎಂಬ ಬಗ್ಗೆ ಮನವರಿಕೆ ಮಾಡುವುದಾಗಿ ತಿಳಿಸಿದ್ದಾರೆ.