ಹೊನ್ನಾವರ: ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕವಲಕ್ಕಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉಪನ್ಯಾಸಕ್ಕಾಗಿ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಐ.ವಿ ಜೋಶಿ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ ನ ಅಧ್ಯಕ್ಷರಾದ ಶ್ರೀ ಉಮೇಶ ವಿ ಹೆಗಡೆ ಇವರು ವಹಿಸಿದ್ದರು. ಶ್ರೀ ಭಾರತೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್ ರವರು ಉಪಸ್ಥಿತರಿದ್ದರು.
ಶ್ರೀ ಐ. ವಿ ಜೋಶಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಮಹತ್ವವನ್ನು ತಿಳಿಸಿದರು. ಸರ್ಕಾರ ಮತ್ತು ಜನರ ನಡುವೆ ಇರುವ ಸಂಬಂಧವನ್ನು ಸೂಕ್ಷ್ಮವಾಗಿ ತಿಳಿಸಿದರು. ಅಲ್ಲದೇ ನಮ್ಮ ಸಂವಿಧಾನದ ಮಹತ್ವ ಹಾಗೂ ಪೂರ್ವ ಪೀಠಿಕೆಯ ಮಹತ್ವ ಮತ್ತು ಅದನ್ನು ಪಾಲಿಸಬೇಕಾದ ರೀತಿಯನ್ನು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ತಿಳಿಸಿದರು. ಅಲ್ಲದೇ ಪ್ರತಿಯೊಂದು ವೃತ್ತಿಗೂ ಇರುವ ಘನತೆಯ ಬಗ್ಗೆ ತಿಳುವಳಿಕೆ ನೀಡಿದರು. ಅಲ್ಲದೇ ಈಗಿನ ಮಕ್ಕಳಿಗೆ ಅನೇಕ ಅವಕಾಶಗಳಿವೆ. ಸಿಗುವಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಿಗುವ ಮಾರ್ಗದರ್ಶನವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಕಷ್ಟ ಪಟ್ಟರೆ ಯಶಸ್ಸು ಸುಲಭ ಎಂಬ ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀ ಉಮೇಶ ಹೆಗಡೆಯವರು ಮಾತನಾಡಿ ಶ್ರೀ ಐ. ವಿ ಜೋಶಿಯಂತವರ ಮಾರ್ಗದರ್ಶನ ಮತ್ತು ಅವರ ಹಿರಿತನದ ಕೊಡುಗೆ ನಮ್ಮೆಲ್ಲರ ಮೇಲೆ ಇರಬೇಕೆಂದು ಕೇಳಿಕೊಂಡರು. ಅಲ್ಲದೇ ಅವರಿಗಿರುವ ನಮ್ಮ ಶಾಲೆಯ ಮೇಲಿರುವ ಅಭಿಮಾನವನ್ನು ನೆನೆದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ನಿಸರ್ಗ ಗೌಡ, ಸ್ವಾಗತವನ್ನು ನಿಸರ್ಗ ನಾಯ್ಕ್, ವಂದನಾರ್ಪಣೆಯನ್ನು ಶಾಂತಿಕಾ ಭಟ್ ನೆರವೇರಿಸಿದರು.