ಮಕ್ಕಳು ಸಂಜೆ ವೇಳೆ ಏನಾದರೂ ಸ್ನ್ಯಾಕ್ಸ್ ತಿನ್ನಲು ಕೇಳುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಸಾಲ ಸ್ವೀಟ್ ಕಾರ್ನ್ ಅಂದರೆ ಇಷ್ಟ ಪಡುತ್ತಾರೆ. ಆಗ ಮನೆಯಲ್ಲಿ ಜೋಳ ಇದ್ದರೆ ಸುಲಭವಾಗಿ ಕಡಿಮೆ ಸಮಯದಲ್ಲಿ ಮಸಾಲ ಸ್ವೀಟ್ ಕಾರ್ನ್ ಮಾಡಿಕೊಡಿ. ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಮಸಾಲ ಸ್ವೀಟ್ ಕಾರ್ನ್  ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
1. ಸ್ವೀಟ್ ಕಾರ್ನ್(ಜೋಳ) – 1 ಕಪ್
2. ಖಾರದ ಪುಡಿ – 1/4 ಚಮಚ
3. ಚಾಟ್ ಮಸಾಲ ಪುಡಿ – 1/4 ಚಮಚ
4. ಮೆಣಸಿನ ಪುಡಿ – 1/4 ಚಮಚ
5. ನಿಂಬೆಹಣ್ಣು – 1/4 ಚಮಚ
6. ಕೊತ್ತಂಬರಿ ಸೊಪ್ಪು – ಸ್ವಲ್ಪ
7. ಬೆಣ್ಣೆ – 1 ಚಮಚ
8. ಉಪ್ಪು – ರುಚಿಗೆ ತಕ್ಕಷ್ಟು
9. ಅರಿಶಿಣ – ಚಿಟಿಕೆ

RELATED ARTICLES  ಆ್ಯಪಲ್ ರವಾ ಹಲ್ವಾ ಮಾಡೋದು ಹೇಗೆ ಗೊತ್ತಾ?

ಮಾಡುವ ವಿಧಾನ
* ಮೊದಲು ಕುಕ್ಕರ್ ಗೆ ಜೋಳ ಮತ್ತು ಚಿಟಿಕೆ ಅರಿಶಿಣ ಹಾಕಿ ಎರಡು ವಿಶಲ್ ಬರುವವರೆಗೆ ಬೇಯಿಸಿ.
* ಬಳಿಕ ಕುಕ್ಕರ್ ವಿಶಲ್ ತೆಗೆದು ಜೋಳ ಮೃದುವಾಗಿ ಬೆಂದಿದೆಯಾ ಎಂದು ಪರೀಕ್ಷಿಸಿಕೊಳ್ಳಿ.
* ನಂತರ ಅದನ್ನು ಕುಕ್ಕರ್ ನಿಂದ ಹೊರ ತೆಗೆದು ಡ್ರೈ ಮಾಡಿಕೊಳ್ಳಿ.
* ಜೋಳ ಬಿಸಿ ಇರುವಾಗಲೇ ಒಂದು ಬೌಲ್ ಗೆ ಹಾಕಿ ಅದಕ್ಕೆ ಬೆಣ್ಣೆ ಹಾಕಿ ಮಿಕ್ಸ್ ಮಾಡಿ.
* ನಂತರ ಖಾರದ ಪುಡಿ, ಮೆಣಸಿನ ಪುಡಿ, ಚಾಟ್ ಮಸಾಲ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
* ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ.
* ಖಾರ ತುಂಬಾ ತಿನ್ನುವರು ಎಷ್ಟು ಬೇಕೋ ಅಷ್ಟು ಖಾರ ಹಾಕಿಕೊಳ್ಳಿ.
* ಬಳಿಕ ಒಂದು ಬೌಲ್ ಹಾಕಿ ಸವಿಯಿರಿ.

RELATED ARTICLES  ಬಿಸಿ – ಬಿಸಿಯಾಗಿ ಇರುವ ಬಿಸಿಬೇಳೆ ಭಾತ್ ಮಾಡುವುದು ಹೇಗೆ? ತಿಳಿಯಿರಿ.