ಭಟ್ಕಳ: ನಗರದಲ್ಲಿ ಮನೆಗಳ್ಳರ ಕೈಚಳಕ ಮತ್ತೆ ಶುರುವಾಗಿದ್ದು, ತಾಲೂಕಿನ ಜಾಮಿಯಾಬಾದ್ ರಸ್ತೆಯಲ್ಲಿ ಅಬೂಬಕರ್ ಮಸೀದಿ ಬಳಿಯ ಮನೆಯೊಂದರಿಂದ ಬಟ್ಟೆ ಬರೆ, ಟಿ.ವಿ. ಜ್ಯೂಸರ್, ಓವನ್ ಸಮೇತ  ಸುಮಾರು 1.75 ಲಕ್ಷ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವರದಿಯಾಗಿದೆ.
ಮನೆ ಒಡತಿ ಫೈರೋಝಾ ರಫೀಖ್ ತಿಳಿಸುವಂತೆ, ಶನಿವಾರ ಸಂಜೆ ಮನೆಗೆ ಬೀಗ ಹಾಕಿ ಬಂದರ್ ರೋಡ್‍ನಲ್ಲಿರುವ ತನ್ನ ತಾಯಿ ಮನೆಗೆ ಹೋಗಿದ್ದು, ಸೋಮವಾರ 11.00ಗಂಟೆಗೆ ಮರಳಿ ಮನೆಗೆ ಬಂದು ನೋಡಿದಾಗ  ಕಳ್ಳರು ದೋಚಿರುವ ವಿಷಯ ಬೆಳಕಿಗೆ ಬಂದಿದೆ. ಕೀಲಿಹಾಕಿಕೊಂಡಿರುವ ಎರಡು ಬೆಡ್ ರೂಮ್‍ಗಳು ತೆರೆದುಕೊಂಡಿದ್ದು, ಕಪಾಟುಗಳಿಂದ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯಲ್ಲಿದ್ದ ಟಿ.ವಿ. ಓವನ್, ಜ್ಯೂಸರ್ ಸಮೇತ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ  .
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

RELATED ARTICLES  ಇನ್ನು ಹೊರ ಜಿಲ್ಲೆಯ ಜನರು ಉತ್ತರಕನ್ನಡದಲ್ಲಿ ಮೂರು ದಿನ ಉಳಿಯುವುದಾದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಖಡ್ಡಾಯ