ನವದೆಹಲಿ: ಇಂದು ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದು, ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ್ದರೆ, ಶ್ರೀಮಂತರಿಗೆ ತೆರಿಗೆ ಬಿಸಿ ತಟ್ಟಿದೆ ಎಂದು ತಿಳಿದುಬಂದಿದೆ. ಈ ಸಾಲಿನ ಬಜೆಟ್ ನಲ್ಲಿ ಯಾವುದೇ ದುಬಾರಿ, ಯಾವುದೇ ಅಗ್ಗ ಎಂಬ ಮಾಹಿತಿ ಇಲ್ಲಿದೆ.

* ಮಧ್ಯಮ ವರ್ಗದವರಿಗೆ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದ್ದು, 7 ಲಕ್ಷದವರೆಗಿನ ಸಾಲಕ್ಕೆ 15 ವರ್ಷ ತೆರಿಗೆ ವಿನಾಯಿತಿ. ತೆರಿಗೆ ಪಾವತಿದಾರರಿಗೆ ಪಾನ್ ಕಾರ್ಡ್ ಕಡ್ಡಾಯ ಇಲ್ಲ. ಪಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಕಡ್ಡಾಯ. ವಾರ್ಷಿಕ 50 ಕೋಟಿ ರೂ. 400 ಕೋಟಿ ಆದಾಯ ಇರುವವರಿಗೆ ಶೇ. 25 ರಷ್ಟು ತೆರಿಗೆ ಏರಿಕೆ.

* 2, 5, 10 ಮತ್ತು 20 ರೂ. ನಾಣ್ಯಗಳ ಬಿಡುಗಡೆ.

* ಲಿಂಗ ತಾರತಮ್ಯ ನಿವಾರಣೆಗೆ ಹೊಸ ಯೋಜನೆ. ಉದ್ಯಮಗಳಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿನ ಆದ್ಯತೆ. ಮಹಿಳಾ ಸ್ವಸಹಾಯ ಸಂಘದ ಒಬ್ಬ ಮಹಿಳೆಗೆ ಜನ್ ಧನ್ ಅಕೌಂಟ್ ನಿಂದ 5 ಸಾವಿರ ರೂ. ಒಡಿ ನೀಡಲು ನಿರ್ಧಾರ. ಮುದ್ರಾ ಯೋಜನೆಯಡಿ 1 ಲಕ್ಷ ರೂ. ಸಾಲ ಸೌಲಭ್ಯ ನೀಡಲು ನಿರ್ಧಾರ. ಎನ್ ಆರ್ ಐಗಳಿಗೆ ಆಧಾರ್ ಆಧಾರಿತ ಪಾಸ್ ಪೋರ್ಟ್ ನೀಡಲು ನಿರ್ಧಾರ.

RELATED ARTICLES  ಭಟ್ಕಳದಲ್ಲಿ ಆಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ

* ಎನ್ ಆರ್ ಐಗಳ ಹೂಡಿಕೆಗಳು ಭಾರತದಲ್ಲಿ ಅತ್ಯಂತ ಹೆಚ್ಚಿದೆ. ಎನ್ ಆರ್ ಐಗಳ ಹೂಡಿಕೆ ಮತ್ತಷ್ಟು ಹೆಚ್ಚಿಸಲು ಆದ್ಯತೆ. ರಾಷ್ಟ್ರೀಯ ಪ್ರಾಧಿಕಾರಕ್ಕೆ 26 ಸಾವಿರ ಕೋಟಿ ರೂ. ಅನುದಾನ. ಗಾಂವ್, ಗರೀಬ್ ಮತ್ತು ಕಿಸಾನ್ ಅಭಿವೃದ್ಧಿಗೆ ಯೋಜನೆ.

ಉಜ್ವಲ್ ಯೋಜನೆ 7.5 ಕೋಟಿ ಎಲ್ ಪಿಜಿ ಸೌಕರ್ಯ ಒದಗಿಸಲಾಗಿದೆ. 2022 ರ ವೇಳೆಗೆ ಪ್ರತಿಯೊಂದು ಕುಟುಂಬಕ್ಕೂ ವಿದ್ಯುತ್. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ.

* 10 ಲಕ್ಷದ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ 1.25 ಲಕ್ಷ ರೂ.ವರೆಗೆ ಸಬ್ಸಿಡಿ. ಎಲೆಕ್ಟ್ರಿಕ್ ವಾಹನ ತಯಾರಿಕೆ ಕಂಪನಿಗಳಿಗೆ ಜಿಎಸ್ ಶೇ. 5 ಕ್ಕೆ ಇಳಿಕೆ. ಸ್ಟಾರ್ಟ್ ಅಪ್ ಹೂಡಿಕೆದಾರರಿಗೆ ಐಟಿ ಪರಿಶೀಲನೆಯಿಂದ ವಿನಾಯಿತಿ.

RELATED ARTICLES  ನಾಳೆ ಖಾಸಗಿ ಆಸ್ಪತ್ರೆಗಳು ಬಂದ್

* ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುವದು. ರೈಲು ನಿಲ್ದಾಣಗಳ ಆಧುನೀಕರಣ ಕಾರ್ಯಕ್ರಮವನ್ನು ಈ ವರ್ಷ ಪ್ರಾರಂಭಿಸಲಾಗುವುದು ಎಂದು ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.

*ಬ್ಯಾಂಕ್ ಗಳ 1 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿ ರಿಕವರಿ , ಬ್ಯಾಂಕ್ ಗಳ ಏಕೀಕರಣಕ್ಕೆ ಹೆಚ್ಚಿನ ಒತ್ತು. ಸಾರ್ವಜನಿಕ ರಂಗದ ಬ್ಯಾಂಕ್ ಗಳಿಗೆ 70 ಸಾವಿರ ಕೋಟಿ ರೂ ಅನುದಾನ. ಮೂಲ ಸೌಕರ್ಯ ಅಭಿವೃದ್ಧಿಗೆ 5 ವರ್ಷಕ್ಕೆ 100 ಲಕ್ಷ ಕೋಟಿ ರೂ. ಅಟಲ್ ಪೆನ್ಷನ್, ನ್ಯಾಷನಲ್ ಪೆನ್ಷನ್ ಯೋಜನೆ ಪಿಎಫ್ ಆರ್ ಡಿಐ ಜೊತೆ ಜೋಡಿಕೆ.

 ಈ ಸಾಲಿನ ಬಜೆಟ್‌ನಲ್ಲಿ ಯಾವ ವಸ್ತುಗಳ ಬೆಲೆ ಏರಿಕೆ-ಇಳಿಕೆ ಆಗಿದೆ ಎನ್ನುವುದನ್ನು ನೋಡುವುದಾದ್ರೆ

ಯಾವುದು ಅಗ್ಗ? : ಎಲೆಕ್ಟ್ರಿಕ್ ವಾಹನ,ಡಯಾಲಿಸಿಸ್ ಯಂತ್ರೋಪಕರಣ, ಶಸ್ತ್ರ ಚಿಕಿತ್ಸೆ ಉಪಕರಣ

ಯಾವುದು ದುಬಾರಿ? ಪೆಟ್ರೋಲ್, ಡಿಸೇಲ್, ಚಿನ್ನ, ಬೆಲೆಬಾಳುವ ಲೋಹ. ಪಿವಿಸಿ ಪೈಪ್, ತಂಬಾಕು ಉತ್ಪನ್ನ, ಮಾರ್ಬಲ್, ಸಿಸಿಟಿವಿ ಕ್ಯಾಮೆರಾ, ಡಿವಿಡಿ, ಆಟೋ ಬಿಡಿಭಾಗ, ಒಎಫ್‌ಸಿ ಕೇಬಲ್, ರಬ್ಬರ್