ಶಿರಸಿ: ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಸ್ಕಾಂ ಅಧೀಕ್ಷಕ ಇಂಜಿನೀಯರ್ ಮೇಲೆ ಕಾರವಾರದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಶಿರಸಿಯಲ್ಲಿರುವ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ  ನಡೆದಿದೆ‌.

ಬಾಡಿಗೆ ವಾಹನದ ಗುತ್ತಿಗೆಗೆ ಅನುಮತಿ ನೀಡಲು 5 ಸಾವಿರ ರೂ. ಲಂಚ ಸ್ವೀಕರಿಸವ ವೇಳೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಧಿಕ್ಷಕ ಇಂಜಿನಿಯರ್ ಒ.ಎಸ್.ಶಶಿಧರ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

RELATED ARTICLES  ಅರ್ಪಣಾ ಮನೋಭಾವದ ಆಡಳಿತ ಮಂಡಳಿ ಹಾಗೂ ಗುರು ವೃಂದ ಶಿಕ್ಷಣೋನ್ನತಿಗೆ ಆಧಾರ -ಗಜು ಪೈ

ಕಳೆದ ಕೆಲ ವರ್ಷಗಳಿಂದ ಹೆಸ್ಕಾಂ ನಲ್ಲಿ ಟೆಂಡರ್ ಮೂಲಕ ಬಾಡಿಗೆ ವಾಹನ ಚಲಾಯಿಸುತ್ತಿದ್ದ ರತ್ನಾಕರ ಎಂಬುವರಿಂದ ಬಾಡಿಗೆ ನವೀಕರಣ ಮಾಡಲು ಲೈನ್ ಮೆನ್ ನಾಗರಾಜ ಮೂಲಕ ಹಣ ಪಡೆಯುವಾಗ ಅಧಿಕಾರಿಗಳು ಎಸಿಬಿ ಡಿಎಸ್.ಪಿ. ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ.

RELATED ARTICLES  ಟಿಕೆಟ್ ಕೈತಪ್ಪಿದ ನಂತರ ಜನತೆಗೆ ಭಾವುಕವಾಗಿ ಬರೆದ ಪತ್ರ ಹಂಚಿಕೊಂಡ ಅನಂತಕುಮಾರ ಹೆಗಡೆ