ಕುಮಟಾ: ತಜ್ಞ ವೈದ್ಯರನ್ನು ಹೊಂದಿ ಜಿಲ್ಲೆಯ ಜನತೆಗೆ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸುತ್ತ , ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಕಾರದಿಂದ ಕಳೆದ ಹಲವು ವರ್ಷಗಳಿಂದ ಪ್ರತಿ ತಿಂಗಳೂ ಕುಮಟಾ , ಗೋಕರ್ಣ , ಅಂಕೋಲಾ , ಹೊನ್ನಾವರ , ಭಟ್ಕಳಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತ ಬಂದಿರುವ ಕರಾವಳಿಯ ಬಡ ವೃದ್ಧರ ಪಾಲಿನ ಆಶಾಕಿರಣವಾಗಿರುವ ಕುಮಟಾದ ಲಾಯನ್ಸ್ ರೇವಣಕರ್ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ಕಾರ್ಯ ಮೆಚ್ಚಿ ಹಳಿಯಾಳದ ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಎರಡು ವ್ಹೀಲ್‍ಚೇರ್‍ಗಳನ್ನು ಕೊಡುಗೆಯಾಗಿ ನೀಡಿದೆ.

RELATED ARTICLES  ಶ್ರೀ ಶ್ರೀ ಆತ್ಮದೀಪಾನಂದಜಿ ಮಹಾರಾಜ್ ರವರಿಗೆ ಗೋಕರ್ಣ ಗೌರವ

ಆಸ್ಪತ್ರೆಯಲ್ಲಿ ವೃದ್ಧರು ಹಾಗೂ ಅಂಗವಿಕಲರಿಗೆ ಅತ್ಯವಶ್ಯಕವಾಗಿದ್ದ ವ್ಹೀಲ್‍ಚೇರ್‍ಗಳನ್ನು ಕೊಡುಗೆಯಾಗಿ ನೀಡಿದ ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನ ಸಹಕಾರವನ್ನು ಸ್ಮರಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರಿಗೆ ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ಚೇರ್‍ಮನ್ ಡಿ.ಡಿ.ಶೇಟ್ , ಸೆಕ್ರೆಟರಿ ಪ್ರೊ.ರೇವತಿ ರಾವ್ , ಖಜಾಂಚಿ ಹೆಚ್.ಎನ್.ನಾಯ್ಕ ರವರು ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES  ಭೀಕರ ಅಪಘಾತ : ಬ್ಯಾಂಕ್ ನೌಕರನೋರ್ವ ಸ್ಥಳದಲ್ಲಿಯೇ ಸಾವು.