ಮೇಷ ರಾಶಿ

ಇಂದು ಸಾರ್ವಜನಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ದೊರೆಯಲಿದೆ. ಪರಿವಾರ ಮತ್ತು ದಾಂಪತ್ಯ ಜೀವನದಲ್ಲಿ ಸುಖ-ಸಂತೋಷದ ಅನುಭವವಾಗಲಿದೆ. ರೊಮ್ಯಾನ್ಸ್ ನ ಪರಾಕಾಷ್ಠತೆಯ ಅನುಭವವಾಗುತ್ತದೆ. ಮೋಜು-ಮಸ್ತಿ ಮನರಂಜನೆಯಲ್ಲಿ ಪಾಲ್ಗೊಳ್ಳಲಿದ್ದೀರಿ.

ಅದೃಷ್ಟ ಸಂಖ್ಯೆ: 7

ವೃಷಭ ರಾಶಿ

ಇಂದು ಮಾತು ಮತ್ತು ವ್ಯವಹಾರದ ಮೇಲೆ ಸಂಯಮವಿರಲಿ. ತಪ್ಪು ತಿಳುವಳಿಕೆಯಿಂದ ತೊಂದರೆಯಾಗಬಹುದು. ಮನರಂಜನೆಗಾಗಿ ಹಣ ಖರ್ಚಾಗುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ. ದುರ್ಘಟನೆಯ ಬಗ್ಗೆ ಎಚ್ಚರಿಕೆ ವಹಿಸಿ.

ಅದೃಷ್ಟ ಸಂಖ್ಯೆ: 2

ಮಿಥುನ ರಾಶಿ

ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ. ಸಂಗಾತಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಉದ್ಯಮ ಮತ್ತು ಉದ್ಯೋಗದಲ್ಲಿ ಆದಾಯ ಹೆಚ್ಚಲಿದೆ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ.

ಅದೃಷ್ಟ ಸಂಖ್ಯೆ: 6

ಕರ್ಕ ರಾಶಿ

ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಕುಟುಂಬ ಸದಸ್ಯರ ಜೊತೆಗೆ ಜಗಳವಾಗುವ ಸಾಧ್ಯತೆ ಇದೆ. ನಗರದಲ್ಲಿ ಮಾನಹಾನಿಯಾಗದಂತೆ ಎಚ್ಚರ ವಹಿಸಿ. ಹಣ ಖರ್ಚಾಗಲಿದೆ. ಸಮಯಕ್ಕೆ ಸರಿಯಾಗಿ ಭೋಜನ ದೊರೆಯುವುದಿಲ್ಲ.

RELATED ARTICLES  ಬಿಜೆಪಿಗೆ ಸೇರ್ಪಡಗೊಂಡ ಮುಸ್ಲಿಂ ಮಹಿಳೆಯರು!

ಅದೃಷ್ಟ ಸಂಖ್ಯೆ: 4

ಸಿಂಹ ರಾಶಿ

ನಿಮ್ಮ ಮಧುರ ಮಾತಿನಿಂದ ಕೆಲಸಗಳು ಯಶಸ್ವಿಯಾಗುತ್ತವೆ. ಕುಟುಂಬ ಸದಸ್ಯರ ಜೊತೆಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಆದ್ರೆ ಮಧ್ಯಾಹ್ನದ ನಂತರ ಯಾವುದೇ ಕಾರ್ಯಗಳಲ್ಲಿ ಸರಿಯಾಗಿ ಯೋಚಿಸದೇ ಆತುರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಅದೃಷ್ಟ ಸಂಖ್ಯೆ: 9

ಕನ್ಯಾ ರಾಶಿ

ಮನಸ್ಸು ಗೊಂದಲಮಯವಾಗಲಿದೆ. ನಕಾರಾತ್ಮಕ ವಿಷಯ ಮಾನಸಿಕ ಅಸ್ವಸ್ಥತೆಯನ್ನು ಹೆಚ್ಚಿಸಲಿದೆ. ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅನಾವಶ್ಯಕವಾಗಿ ಹಣ ಖರ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಇರುವುದಿಲ್ಲ.

ಅದೃಷ್ಟ ಸಂಖ್ಯೆ: 8

ತುಲಾ ರಾಶಿ
ನೀವು ಅಂದುಕೊಂಡ ಆರ್ಥಿಕ ಯೋಜನೆಗಳು ಯಶಸ್ವಿಯಾಗಲಿವೆ. ನಿಮ್ಮ ಕಲಾತ್ಮಕತೆ ಮತ್ತು ಸೃಜನಶೀಲತೆ ಇವತ್ತು ಉತ್ತಮವಾಗಿರಲಿದೆ. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಆರೋಗ್ಯವಾಗಿರುತ್ತೀರಿ.

ಅದೃಷ್ಟ ಸಂಖ್ಯೆ: 3

ವೃಶ್ಚಿಕ ರಾಶಿ

ವಿದೇಶದಲ್ಲಿ ನೆಲೆಸಿರುವ ಸ್ನೇಹಿತರು ಮತ್ತು ಸಂಬಂಧಿಕರಿಂದ ಶುಭ ಸಮಾಚಾರ ದೊರೆಯಲಿದೆ. ಮನರಂಜನೆಗಾಗಿ ಅಧಿಕ ಹಣ ಖರ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಸಂಗಾತಿಯ ಜೊತೆಗೆ ನಿಕಟತೆಯನ್ನು ಹೊಂದಲಿದ್ದೀರಿ.

ಅದೃಷ್ಟ ಸಂಖ್ಯೆ: 4

RELATED ARTICLES  ಕುಮಟಾ ದುಂಡಕುಳಿ ಸಮೀಪ ಸಾರಿಗೆ ಬಸ್ ಅಪಘಾತ

ಧನು ರಾಶಿ

ಪ್ರೇಮದ ಸುಖ ಅನುಭವ ಪಡೆಯುವ ಸೌಭಾಗ್ಯ ದೊರೆಯಲಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಗೃಹಸ್ಥ ಜೀವನ ಸಂತೋಷಮಯವಾಗಿರಲಿದೆ. ಆದಾಯದಲ್ಲೂ ವೃದ್ಧಿಯಾಗಬಹುದು.

ಅದೃಷ್ಟ ಸಂಖ್ಯೆ: 2

ಮಕರ ರಾಶಿ

ಉದ್ಯಮದಲ್ಲಿ ಹಣ, ಯಶಸ್ಸು ಮತ್ತು ಜನಪ್ರಿಯತೆ ನಿಮ್ಮದಾಗಲಿದೆ. ಉದ್ಯೋಗದಲ್ಲೂ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಕುಟುಂಬ ಮತ್ತು ಮಕ್ಕಳ ವಿಷಯದಲ್ಲೂ ಶುಭ ಸಮಾಚಾರ ದೊರೆಯಲಿದೆ. ಉದ್ಯೋಗದಲ್ಲಿ ಪದೋನ್ನತಿಯ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ: 5

ಕುಂಭ ರಾಶಿ

ಇವತ್ತು ಕೊಂಚ ಅನಾರೋಗ್ಯ ಕಾಡಬಹುದು. ಆದ್ರೆ ಮಾನಸಿಕವಾಗಿ ಉತ್ಸಾಹದಿಂದಿರುತ್ತೀರಿ. ಕೆಲಸದ ವಿಚಾರದಲ್ಲಿ ಆಲಸ್ಯ ಕಾಣಿಸಿಕೊಳ್ಳುತ್ತದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ದೂರವಿರಿ. ಮನರಂಜನೆಗಾಗಿ ಹಣ ಖರ್ಚಾಗಲಿದೆ.

ಅದೃಷ್ಟ ಸಂಖ್ಯೆ: 3

ಮೀನ ರಾಶಿ

ಆಕಸ್ಮಿಕ ಧನಲಾಭ ಯೋಗವಿದೆ. ಬಾಕಿಯಿದ್ದ ಹಣ ನಿಮ್ಮ ಕೈಸೇರಲಿದೆ. ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ಪರಿಶ್ರಮಪಡಬೇಕಾಗುತ್ತದೆ. ಖರ್ಚು ಕೂಡ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ.

ಅದೃಷ್ಟ ಸಂಖ್ಯೆ: 1