ಕುಮಟಾ: ಇಲ್ಲಿಯ ಸೇಫ್ ಟ್ರಾನ್ಸ್‍ಪೋರ್ಟ ಮಾಲಿಕ ಎಂ. ಅಕ್ಬರ್ ಮುಲ್ಲಾ ಅವರ ಮಗಳು ನಜಿಫಾ ಅಪರೂಪದ ಸಾಧನೆ ಮಾಡಿದ್ದಾರೆ. ಕೆಎಲ್‍ಇ ಯ ಗುರುಸಿದ್ಧಪ್ಪಾ ಕೊತಂಬರಿ ಲಾ ಕಾಲೇಜಿನಲ್ಲಿ ಕಾನೂನು ಪದವಿ ಕೊನೆಯ ವರ್ಷ ಅಧ್ಯಯನ ಮಾಡುತ್ತಿದ್ದು ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ‘ಕ್ಲೈಂಟ್ ಕೌನ್ಸೆಲಿಂಗ್’ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿ ಮಿಂಚಿದ್ದಾರೆ.

RELATED ARTICLES  ನಿರ್ವಹಣೆ ಇಲ್ಲದೇ ಸೊರಗುತ್ತಿದೆ ಕಾಲುವೆ; ಬೇಜವಾಬ್ದಾರಿ ಇಲಾಖೆಗೆ ರೈತರೇ ಕಲಿಸಿದರು ಪಾಠ

ತನ್ನ ಹೆತ್ತವರೆದುರು ರಾಷ್ಟ್ರಮಟ್ಟದಲ್ಲಿ ವಿಜೇತಳಾಗಿ ಸಿಂಧಗಿ ನ್ಯಾಯಾಲಯದ ನ್ಯಾಯಮೂರ್ತಿ ರಾಜಶೇಖರ ತಿಲಿಗಂಜಿ, ಜೀವನ ಶಾಲಾ ಧಾರವಾಡದ ಜೀವನ ಮುಲ್ಲೊಲಿ, ಜಿ.ಕೆ.ಲಾ ಕಾಲೇಜಿನ ಪ್ರಾಚಾರ್ಯೆ ಡಾ.ಶಾರದಾ ಜಿ.ಪಾಟಿಲ್ ಉಪಸ್ಥಿತಿಯಲ್ಲಿ ಬಹುಮಾನ ಪಡೆದಿದ್ದಾಳೆ. ಕಾಲೇಜು, ಅಂತರ್ ಕಾಲೇಜು ಮಟ್ಟದ ಚರ್ಚಾಸ್ಫರ್ಧೆಗಳಲ್ಲಿ ಮೊದಲಿಗಳೆನಿಸಿ ಕೊಂಡಿದ್ದು, ಕಾನೂನು ಸಂಬಂಧೀ ನೂರಕ್ಕೂ ಅಧಿಕ ಬಿಡಿ ಲೇಖನಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು ಅವರ ಬುದ್ದಿಮತ್ತೆಗೆ ಒರೆ ಹಚ್ಚಿದಂತಾಗಿದೆ.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ಚಿತ್ರಿಗಿ ಪ್ರೌಢಶಾಲೆಯ ಸಾಧನೆ