ಕಾರವಾರ ಅಂಕೋಲಾ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಇಲಾಖೆಗಳಿಂದ ೧೫೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು ಕ್ಷೇತ್ರಾದ್ಯಂತ ಅಭಿವೃದ್ಧಿ ಕಾರ್ಯಗಳು ಪ್ರಾರಂಭ ಹಂತದಲ್ಲಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಪ್ರವಾಸಿಮಂದಿರದಲ್ಲಿ ಕರೆದ ಸುದ್ಧಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕರು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ೪೦ ಕೋಟಿ ರೂಪಾಯಿ ಮಂಜುರಾಗಿದ್ದು ಅದರಲ್ಲಿ ೪೦ ಕಿಲೋಮೀಟರ್ ರಸ್ತೆ ಹಾಗೂ ೯ ಕಿರಿದಾದ ಸೇತುವೆ ಮತ್ತು ಬುಡ್ಜೋಗ್ ಕರ್ಗಲ್ ಹಾಗೂ ಬಿಳ್ಳಂಬರ ಗಂಗಾವಳಿ ಯಲ್ಲಿ ೨ ದೋಡ್ಡ ಸೇತುವೆ ನಿರ್ಮಿಸುವುದಾಗಿ ಹೇಳಿದರು.
ಇನ್ನೂ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲಾಖೆಯಿಂದ ೭ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಈ ಹಣದಲ್ಲಿ ನಗರದ ಟಾಗೋರ್ ಕಡಲತೀರದ ಅಭಿವೃದ್ಧಿ ಹಾಗೂ ಜಲಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡಲಿದ್ದೇವೆ ಎಂದರು. ತೀಳುಮತ್ತಿ ಕಡಲ ತೀರ ಒಂದು ಪ್ರವಾಸಿ ಕೇಂದ್ರವಾಗಿದ್ದು ಇಲ್ಲಿ ಒಂದು ತೂಗು ಸೇತುವೆಯ ಅವಶ್ಯಕತೆ ಇದ್ದು ತೂಗುಸೇತುವೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ೭೦೦ ಬೆಡ್ ಸೌಲಭ್ಯ ಒದಗಿಸಲಿದ್ದೇವೆ ಎಂದರು. ಹಳೆ ಮೀನುಮಾರುಕಟ್ಟೆ ಇರುವ ಜಾಗದಲ್ಲಿ ೧೨ ಗುಂಟೆಯಲ್ಲಿ ಹೊಸ ಮೀನುಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತಿದ್ದು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೋಲಾರಿಸ್ ಕೆಮಟೆಕ್ ಹಾಗೂ ಬಂದರು ಇಲಾಖೆ ಸಹಯೋಗದಲ್ಲಿ ೨೫೦ ಕೋಟಿ ರೂಪಾಯಿ ವೆಚ್ಚದಲ್ಲಿ ಗಂಗಾವಳಿ ಕುಡಿಯುವ ನೀರಿನ ಯೋಜನೆ ನಿರ್ಮಿಸಲಿದ್ದೇವೆ ಎಂದರು.