ಸಿದ್ದಾಪುರ : ಶ್ರೀಸಿದ್ದಿವಿನಾಯಕ  ಪ್ರೌಢಶಾಲೆ ಗೋಳಿಯಲ್ಲಿ ಶ್ರೀ ಉಪೇಂದ್ರ ಪೈ ಸೇವಾ ಟ್ರಸ್ಟ,ಶಿರಸಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ಟ್ರಸ್ಟ್ ನ ಅದ್ಯಕ್ಷರಾದ ಶ್ರೀ ಉಪೇಂದ್ರ ಪೈರವರು ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶ್ರೀ ಪೈರವರು, ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಯಶಸ್ಸಿನ ಮೊದಲ ಮೆಟ್ಟಿಲು ಟ್ರಸ್ಟನ ಉದ್ದೇಶ ಇಲ್ಲಿಂದಲೇ ಮಕ್ಕಳನ್ನು ಪ್ರೋತ್ಸಾಹಿಸಿ ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ಯಾವಾಗಲೂ ಇರುವಂತೆ ಮಾರ್ಗದರ್ಶನ ನೀಡುವುದು.ಮಕ್ಕಳ ಯಶಸ್ಸು ಅವರ ಶಿಸ್ತುಬಧ್ಧ, ಕ್ರಮಬಧ್ಧ ಓದಿನಲ್ಲಿದೆ. ಕೆಟ್ಟ ಹವ್ಯಾಸ ನಮ್ಮನ್ನು ಜೀವನದಿಂದಲೇ ದೂರ ಮಾಡುತ್ತದೆ.ಅವುಗಳ ಬಗ್ಗೆ ಸದಾ ಭಯದಿಂದಲೇ  ಇರಬೇಕೆಂದು ಕಿವಿಮಾತು ಹೇಳಿದರು.

RELATED ARTICLES  ಕಲಾವಿದರು ರಾತ್ರಿಯಿಡೀ ನಿದ್ದೆಗೆಟ್ಟು ನಮ್ಮ ಕಲೆ, ಸಂಸ್ಕೃತಿ ಉಳಿಸಿದವರು : ಶಾಸಕ ದಿನಕರ ಶೆಟ್ಟಿ

                    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು, ಸಾಮಾಜಿಕ ಚಿಂತಕರೂ ಆದ ಶ್ರೀ ವಿಶ್ವನಾಥ ಶರ್ಮಾ ನಾಡಗುಳಿ ಮಾತನಾಡಿ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಅಗತ್ಯದ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.ಸರ್ಕಾರದಿಂದ ಸಿಗುವ ಸೌಲಭ್ಯಗಳಲ್ಲದೆ ದಾನಿಗಳಿಂದಲೂ ಸಕಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದೆವೆ.ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಚೆನ್ನಾಗಿ ಓದಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.

RELATED ARTICLES  ಸಂಪನ್ನವಾದ“ಕಾಡುಬೀಜ (ಸಂ)ಗ್ರಹಿಸು, ಕಾಡು ಬೆಳೆಸು” ಕಾರ್ಯಕ್ರಮ : ರಾಘವೇಶ್ವರ ಶ್ರೀಗಳ ದಿವ್ಯ ಉಪಸ್ಥಿತಿ

ಸಂಸ್ಥೆಯ ಪರವಾಗಿ ಶ್ರೀ ಉಪೇಂದ್ರ ಪೈರವರನ್ನು ಶ್ರೀ ವಿಶ್ವನಾಥ ಶರ್ಮಾ ನಾಡಗುಳಿ ಸನ್ಮಾನಿಸಿದರು. ಕುಮಾರಿ ಮಹಾಲಕ್ಷ್ಮಿ ನಾಯ್ಕ ಪ್ರಾರ್ಥಿಸಿದಳು. ಮುಖ್ಯಾಧ್ಯಾಪಕರಾದ ಶ್ರೀ ಎಮ್ ಜಿ ಹೆಗಡೆ ಸ್ವಾಗತಿಸಿದರು. ಶ್ರೀ ಆರ್ ಕೆ ಚೌಹ್ವಾಣ್ ವಂದಿಸಿದರು.ಶ್ರೀ ನಾರಾಯಣ ದೈಮನೆ ಕಾರ್ಯಕ್ರಮ ನಿರೂಪಿಸಿದರು.