ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿದ್ದು ಬರೋಬ್ಬರಿ 11 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಈ ಮೂಲಕ ಅಮೇರಿಕದಿಂದ ಬರುವ ಮೊದಲೇ ಸಿಎಂಗೆ ಶಾಕ್ ನೀಡಿದ್ದಾರೆ. ಇದರ ಜೊತೆ ಇನ್ನು ಮೂರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಮೊದಲನೆಯದಾಗಿ ಬಿಡುಗಡೆಯಾಗಿರುವ ಬಂಡಾಯಗಾರರ ಪಟ್ಟಿಯಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿಪಾಟೀಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ರಾಜೀನಾಮೆ ನೀಡಿದ್ದಾರೆ. ಹುಣಸೂರು ಶಾಸಕ ಎಚ್. ವಿಶ್ವನಾಥ್, ಕೆ.ಆರ್.ಪೇಟೆ ಶಾಸಕ. ನಾರಾಯಣ ಗೌಡ ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ತಲ್ಲಣ ಶುರುವಾಗಿದೆ.

RELATED ARTICLES  ಭಟ್ಕಳದಲ್ಲಿ ಸುನಿಲ್ ‌ನಾಯ್ಕ ನಾಮಪತ್ರ ಸಲ್ಲಿಕೆ: ಸಹಸ್ರಾರು ಜನರ ಬೆಂಬಲ ತೋರಿದ ಬಿಜೆಪಿ.

    ಎರಡನೇ ತಂಡದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಇನ್ನೂ ಸ್ಪೀಕರ್ ಕಚೇರಿಗೆ ಆಗಮಿಸಿಲ್ಲ.

ಡಿ.ಕೆ. ಶಿವಕುಮಾರ್​ ಅವರ ಮನವೊಲಿಕೆಗೆ ಒಪ್ಪದ ಶಿವರಾಮ್​ ಹೆಬ್ಬಾರ್​, ರಮೇಶ್​ ಜಾರಕಿಹೊಳಿ, ಗೋಪಾಲಯ್ಯ, ಮಹೇಶ್​ ಕುಮಠಳ್ಳಿ, ಎಚ್​. ವಿಶ್ವನಾಥ್​ ಸೇರಿ ಒಟ್ಟು 11 ಶಾಸಕರು ರಾಜಭವನಕ್ಕೆ ತೆರಳಿದ್ದಾರೆ. ಆದರೆ ರಾಮಲಿಂಗಾರೆಡ್ಡಿ, ಭೈರತಿ ಬಸವರಾಜ್​, ಎಸ್​.ಟಿ. ಸೋಮಶೇಖರ್​ ಮತ್ತು ಮುನಿರತ್ನ ಸ್ಪೀಕರ್​ ಕಚೇರಿಯಲ್ಲೇ ಉಳಿದಿದ್ದು, ಡಿ.ಕೆ. ಶಿವಕುಮಾರ್​ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

RELATED ARTICLES  ಉತ್ತರ ಕನ್ನಡದ ಹೆಚ್ಚು ತಾಲೂಕಿನಲ್ಲಿ ಇಂದು 0 ಕೊರೋನಾ ಕೇಸ್

ಸ್ಪೀಕರ್​ ಕಚೇರಿಯಿಂದ ಹೊರಬಂದ ಬಿ.ಸಿ. ಪಾಟೀಲ್​ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿ, ನನ್ನ ಕ್ಷೇತ್ರ ಮತ್ತು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನು ಖಂಡಿಸಿ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.