ಕುಮಟಾ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಪಶುಸಂಗೋಪನಾ ಇಲಾಖೆಯಲ್ಲಿ ಅರ್ಹ ಫಲಾನುಭವಿಗಳಿಗೆ ಶಾಸಕರ ನೇತೃತ್ವದಲ್ಲಿ ಹಿಂಡಿ ಮಿಶ್ರಣ,ಔಷಧಿ ವಿತರಣೆ,ಯಂತ್ರ ವಿತರಣೆ ಮಾಡಲಾಯಿತು.
ದೇಶೀಯ ಹೆಣ್ಣು/ಗಂಡು ಕರು ಹಾಗೂ ಮಿಶ್ರತಳಿ ಹೆಣ್ಣು ಕರು ಸಾಕಾಣಿಕಾ ಘಟಕ ಫಲಾನುಭವಿಗಳಿಗೆ ಹಿಂಡಿ ಮಿಶ್ರಣ, ಔಷದಿ ವಿತರಣೆ ಮಾಡಲಾಯಿತು.ಕರು ಸಾಕಾಣಿಕಾ ಘಟಕದ ೫ ಪರಿಶಿಷ್ಠ ಜಾತಿ ಮಹಿಳಾ ಫಲಾನುಭವಿಗಳಿಗೆ ಈ ಸೌಲಭ್ಯ ವಿತರಿಸಲಾಯಿತು.
ಹಾಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ೨೦ ಮಂದಿ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಪಶು ಆಸ್ಪತ್ರೆ ಕುಮಟಾದ ಸಹಾಯಕ ನಿರ್ದೇಶಕರಾದ ವಿಶ್ವನಾಥ ಹೆಗಡೆ, ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ. ಪುರಸಭಾ ಸದಸ್ಯ ಟೋನಿ ಹಾಜರಿದ್ದರು.