ಕುಮಟಾ: ಪಠ್ಯ ಪುಸ್ತಕವನ್ನೇ ತರದ, ಪಾಠವನ್ನೇ ಮಾಡದ ಒಂದು ದಿನ ಹೇಗಿರಬಹುದೆಂದು ಅನುಭವಿಸಿದ ಮಕ್ಕಳು. ಆಡಿ, ಹಾಡಿ, ಕುಣಿದು ನಲಿದ ಪರಿ ಶಿಕ್ಷಕರಗೂ ಸಂತೋಷವನ್ನು ನೀಡಿತು. ಇಲ್ಲಿನ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬ್ಯಾಗ್ ರಹಿತ ದಿನದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಶಾಲೆಯಲ್ಲಿ ತಮ್ಮನ್ನು ತಾವು ವಿಶಿಷ್ಟವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಹಾಡು, ನೃತ್ಯ, ಕಥೆ, ನಾಟಕ, ಯಕ್ಷಗಾನ, ಮಿಮಿಕ್ರಿ, ಚಿತ್ರಕಲೆ, ಕವನ ರಚನೆಯೇ ಮೊದಲಾದ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಗಮನ ಸೆಳೆದರು. ಕಾರ್ಯಕ್ರಮವನ್ನು ಉದ್ಯಮಿ ಹಾಗೂ ರೋಟರಿ ಸಂಸ್ಥೆಯ ಕೋಶಾಧ್ಯಕ್ಷ ಗಣೇಶ ಕಾಮತ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಕ್ಕಳನ್ನು ಸಂತೋಷಪಡಿಸಿದರು.

RELATED ARTICLES  ಮಂಗಳೂರು ಚಲೋ ತಡೆಯುವ ಪ್ರಯತ್ನ : ಕುಮಟಾದಲ್ಲಿ ಪರಿಸ್ಥಿತಿ ಉದ್ವಿಘ್ನ.

ಕೇವಲ ಓದು, ಓದು, ಓದು ಎಂಬ ಪ್ರಬಲ ಒತ್ತಡ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಮತ್ತು ಪಾಲಕರು ಹಾಕದೇ, ಅವರಷ್ಟಕ್ಕೇ ಅವರನ್ನು ಬಿಟ್ಟಾಗ ಅವರೇ ಓದಿನ ದಾರಿ ಕಂಡು ಕೊಳ್ಳುತ್ತಾರೆ. ಆ ಮೂಲಕ ತಮ್ಮಲ್ಲಿಯ ಪ್ರತಿಭೆಯನ್ನೂ ಹೊರ ಹಾಕುತ್ತಾ ವಿಕಸಿಸುತ್ತಾರೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಇಲಾಖಾ ನಿಯಮಾನುಸಾರ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಡುವುದರ ಜೊತೆಗೆ ತರಬೇತುಗೊಳಿಸುವಲ್ಲಿ ಸಹಕರಿಸಿದ ಸಹಶಿಕ್ಷಕವರ್ಗ ಮತ್ತು ಕಮಲಾ ಬಾಳಿಗಾ ಕಾಲೇಜಿನ ಪ್ರಶಿಕ್ಷಕ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿ ಪ್ರತಿನಿಧಿ ರಕ್ಷಿತಾ ಪಟಗಾರ ಸ್ವಾಗತಿಸಿ ಪರಿಚಯಿಸಿದರು.

RELATED ARTICLES  ಅಪರೂಪದ ಕರು ಜನನ ಬೆನ್ನಿನ ಮೇಲೆ ಮೂಡಿದೆ ಬಾಲ?

ಸಭಾ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ಪ್ರಶಾಂತ ನಾಯ್ಕ ನಿರ್ವಹಿಸಿದರೆ, ವಿದ್ಯಾಥಿನಿಯರಾದ ಮುಕ್ತಾ ಭಟ್ಟ ಮತ್ತು ಪ್ರಜ್ಞಾ ಆಚಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಿಸಿದರು. ಪ್ರತಿನಿಧಿ ಲಕ್ಷ್ಮೀಧರ ಗೌಡ ವಂದಿಸಿದರು.