ಶಿರಸಿ: ನಗರದ ಕೆನರಾ ಗಲ್ಲಿಯಲ್ಲಿ ಮನೆಯ ಎದುರಿನಲ್ಲಿ ಆಟ ಆಡುತ್ತಿದ್ದ 3 ವರ್ಷದ ಮಗುವೊಂದು ಆಕಸ್ಮಿಕವಾಗಿ ನೀರಿನ ಟ್ಯಾಂಕ್ ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಯಲ್ಲಪ್ಪ ಪಾಳೇದ್ ಮತ್ತು ಲಲಿತಾ ದಂಪತಿಯ ಮಗ ಬಸವರಾಜ ಯಲ್ಲಪ್ಪ ಪಾಳೇದ್ ಮೃತಪಟ್ಟವನು ಎನ್ನಲಾಗಿದೆ. ದಂಪತಿಗಳು ನೆಹರೂ ನಗರದ ಕೆನರಾ ಗಲ್ಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು.

RELATED ARTICLES  ಆಡಳಿತಗಾರರಿಗೆ ಕರಾವಳಿಯ ಜನಜೀವನ ವ್ಯವಸ್ಥೆ, ಪರಿಸರದ ಬಗ್ಗೆ ಕಿಂಚಿತ್ತೂ ಅರಿವಿಲ್ಲ : ಎಂ.ಜಿ ಭಟ್ಟ

ಅಕ್ಕನೊಂದಿಗೆ ಮನೆಯಲ್ಲಿ ಆಟವಾಡಿಕೊಂಡಿದ್ದ ವೇಳೆ ಮಗು ಮಳೆ ನೀರು ಶೇಖರಿಸಲು ಮಾಡಿದ್ದ ನೆಲ ಮಟ್ಟದ ನೀರಿನ ಟ್ಯಾಂಕ್ ಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ.ಈ ಸಮಯದಲ್ಲಿ ಅಪ್ಪ ಅಮ್ಮ ಕೂಲಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.

RELATED ARTICLES  ಯಲ್ಲಾಪುರದ ತಳ್ಳಿರು ಹಳ್ಳದಲ್ಲಿ ಅಪರಿಚಿತ ಶವ ಪತ್ತೆ