ಮೇಷ:-ನಿಮ್ಮ ವರ್ಚಸ್ಸನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗುವ ಒಳ್ಳೆಯ ಅವಕಾಶಗಳು ಲಭ್ಯವಾಗುವುವು. ಆ ಉತ್ತಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.


ವೃಷಭ:- ಯಾರನ್ನೇ ಆಗಲಿ ಬೇಗ ನಂಬಬೇಡಿ. ತಿಳಿಯದಿರುವ ಇಕ್ಕಟ್ಟುಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ತಮಾಷೆಗಾಗಿ ಆಡಿದ ಮಾತು ವಿರೋಧಕ್ಕೆ ತಿರುಗಿ ಪತಿ ಪತ್ನಿಯರಲ್ಲಿ ವಿರಸ ತರುವ ಸಾಧ್ಯತೆ ಇದೆ. ಈ ಬಗ್ಗೆ ಜಾಗ್ರತೆಯಿಂದ ಇರಿ.


ಮಿಥುನ:- ಆಫೀಸಿನ ತೊಂದರೆಗಳನ್ನು ಮನೆಯಲ್ಲಿಯೂ ತಂದು ದುಃಖ ಪಡದಿರಿ. ಇಲ್ಲವೆ ಮನೆಯ ವಾತಾವರಣ ರಣರಂಗವಾಗುವುದು. ಮನೆಯ ಸದಸ್ಯರೊಡನೆ ಭಿನ್ನಾಭಿಪ್ರಾಯ ಮೂಡುವುದು. ಆರ್ಥಿಕ ಸಮಸ್ಯೆ ಎದುರಾಗುವುದು.

ಕಟಕ:- ಖರ್ಚಿನ ಯಾದಿಯನ್ನು ನಿಯಂತ್ರಣದಲ್ಲಿಡಿ. ವಿಶೇಷವಾದ ಕಾರ್ಯ ಒಂದನ್ನು ರೂಪಿಸಿಕೊಳ್ಳಲು ಹಿರಿಯರಿಂದ ಬೆಂಬಲ ದೊರೆಯಬಹುದು. ಕುಲದೇವರನ್ನು ಪ್ರಾರ್ಥನೆ ಮಾಡಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಸಿಂಹ:- ನೇರವಾಗಿ ಬರುವ ಅನಿಷ್ಟಗಳನ್ನು ಎದುರಿಸುವಿರಿ. ಆದರೆ ಹಿಂದಿನಿಂದ ಬರುವುದನ್ನು ತಪ್ಪಿಸಿಕೊಳ್ಳಲಾರಿರಿ. ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಲಕ್ಷ್ಮೀನಾರಸಿಂಹ ದೇವರನ್ನು ಸ್ತುತಿಸಿ.

RELATED ARTICLES  ಬಹುಭಾಷಾ ತಾರೆ ಸೊನಾಲಿ ಬೇಂದ್ರೆಗೆ ಕ್ಯಾನ್ಸರ್ ಇರುವುದು ಪತ್ತೆ.

ಕನ್ಯಾ:- ನಿಮ್ಮ ತಿಳಿವಳಿಕೆಗೆ ಮೀರಿದ ಉತ್ತಮ ಶಕ್ತಿಯೊಂದು ನಿಮ್ಮನ್ನು ಅನುಗ್ರಹಿಸಲಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ತಪ್ಪದೇ ವಿಷ್ಣುಸಹಸ್ರನಾಮ ಪಠಿಸಿ.

ತುಲಾ:- ನಿಮ್ಮ ಕುಟುಂಬದ ಸದಸ್ಯರ ಜತೆ ಸಂತೋಷದಿಂದ ಕಾಲ ಕಳೆಯುವಿರಿ. ಬಂಧುಗಳು, ಸ್ನೇಹಿತರು ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುವರು. ಮನೆಯಲ್ಲಿ ಸಂತೋಷದ ವಾತಾವರಣ ಕಾಣುವಿರಿ. ಗುರುಹಿರಿಯರ ಆಶೀರ್ವಾದ ನಿಮಗೆ ದೊರೆಯುವುದು.

ವೃಶ್ಚಿಕ:- ಗ್ರಹಗತಿಗಳು ಕೆಟ್ಟಿರುವಾಗ ಮಡದಿ ಮಕ್ಕಳೇ ನಿಮ್ಮನ್ನು ದೂರುವರು. ಗೆಳೆಯರ ಜೊತೆ ನಿಮ್ಮ ಕಷ್ಟವನ್ನು ಹಂಚಿಕೊಳ್ಳಿ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿಕೊಳ್ಳದಿರಿ. ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸುವುದು ಒಳ್ಳೆಯದು.

RELATED ARTICLES  ಎಸ್ ಜಾನಕಿ ತಮ್ಮ ಸುದೀರ್ಘ ಗಾಯನ ಪಯಣಕ್ಕೆ ಇದೇ ತಿಂಗಳು ವಿದಾಯ ಹೇಳಲಿದ್ದಾರೆ!

ಧನುಸ್ಸು:- ನೀವು ಮಹತ್ತರವಾದ ಯೋಜನೆಗಳನ್ನು ರೂಪಿಸುವಿರಿ. ಆದರೆ ಸದ್ಯ ದೈವಬಲ ಇಲ್ಲ. ಹಾಗಾಗಿ ಎಲ್ಲಾ ಹಂತದಲ್ಲೂ ಅಡೆತಡೆಗಳೇ ಎದುರಾಗುವುದು. ಗುರು ದಕ್ಷಿಣಾಮೂರ್ತಿಯನ್ನು ಧ್ಯಾನಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ.

ಮಕರ:- ನಿಮ್ಮ ಇಷ್ಟದ ವಿಷಯವನ್ನೇ ಬೆಂಬಲಿಸುವ ಬಾಳಸಂಗಾತಿಯಿಂದ ಸಂತೋಷದ ವಾತಾವರಣ ಮೂಡಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಆರೋಗ್ಯದ ಕಡೆ ತುಸು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಕುಂಭ:- ನಿಮ್ಮ ಶಕ್ತಿ ಮೀರಿ ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಪೂರೈಸುವಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಸ್ನೇಹಿತರು ನಿಮ್ಮನ್ನು ಅಭಿನಂದಿಸುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಮೀನ:- ಉನ್ನತ ವ್ಯಾಸಂಗದ ವಿಚಾರದಲ್ಲಿ ಮಕ್ಕಳು ಪ್ರಗತಿ ಸಾಧಿಸುವರು. ಹಳೆಯ ಗೆಳೆಯನೋರ್ವನಿಂದ ಒಳಿತಿಗಾಗಿನ ದಾರಿ ನಿಮಗೆ ಗೋಚರಿಸುವುದು. ಹಿರಿಯರು ನಿಮಗೆ ಬದುಕಿನ ಬಗೆಗಿನ ಸುರಕ್ಷ ತೆಯನ್ನು ಕಲ್ಪಿಸಿಕೊಡುತ್ತಾರೆ.